• Home  
  • ಮಂಗಳೂರು: ಪಿ.ಎ ಕಾಲೇಜಿನಲ್ಲಿ ರಕ್ತದಾನ ಶಿಬಿರ
- DAKSHINA KANNADA - LATEST NEWS

ಮಂಗಳೂರು: ಪಿ.ಎ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮಂಗಳೂರು: ಯೂತ್ ರೆಡ್ ಕ್ರಾಸ್, ಎನ್.ಎಸ್.ಎಸ್. ಮತ್ತು ಐ.ಕ್ಯೂ.ಎ.ಸಿ ಅಂಗವಾಗಿ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಸರಕಾರಿ ಲೇಡಿಗೋಶನ್ ಹಾಸ್ಪಿಟಲ್, ಮಂಗಳೂರು ಇದರ ಸಹಭಾಗಿತ್ವದಲ್ಲಿ ಏ.15 ರಂದು ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ಬ್ಲಡ್ ಡೊನೇಶನ್ ಕ್ಯಾಂಪ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆಯಿತು‌.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದ.ಕ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ವೈದ್ಯಕೀಯ ಅಧಿಕಾರಿಗಳಾದ  ಡಾ. ಸುಖೇಶ್ ಮಾತನಾಡಿ “ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ  ಆದರೂ ಅದು ಇನ್ನೊಂದು ಜೀವ ಉಳಿಸುವುದಲ್ಲದೆ ರಕ್ತದಾನ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುವುದು” ಎಂದರು. ಪಿ.ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಜ್ ಜೆ ಹಾಸಿಂ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಅತಿಥಿಗಳಾದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ. ಜಿಲ್ಲೆಯ ನಿರೂಪಕರಾದ ಪ್ರವೀಣ್ ಕುಮಾರ್, ಇಕೋಲಾಬ್ ಕೆ.ಎಸ್‌.ಎ. ಇದರ ಮಾಜಿ ಸೇಲ್ಸ್ ಎಂಡ್ ಮಾರ್ಕೆಟಿಂಗ್ ಮ್ಯಾನೇಜರ್ ಅಬ್ಬಾಸ್ ಉಚ್ಚಿಲ್, ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾದ ಡಾ.ರಮೀಝ್ ಎಂ ಕೆ, ಪಿ.ಎ ಇನ್ಸ್ಟಿಟ್ಯೂಟ್ ಆಫ್ ಪಿಸಿಯೋಥೆರಪಿಯ ಪ್ರಾಂಶುಪಾಲರಾದ ಅಫೀಫ, ಪಿ.ಎ ಪಾಲಿಟೆಕ್ನಿಕ್ ಉಪಪ್ರಾಂಶುಪಾಲರಾದ ಪ್ರೊ. ಇಸ್ಮಾಯಿಲ್ ಖಾನ್, ಪಿ.ಎ.ಇ.ಟಿಯ ಖರೀದಿ ವ್ಯವಸ್ಥಾಪಕರಾದ ಹಾರೀಸ್ ಟಿ.ಡಿ ಮತ್ತು ವಿವಿಧ ವಿಭಾಗದ  ಮುಖ್ಯಸ್ಥರು,  ಯೂತ್ ರೆಡ್ ಕ್ರಾಸಿನ ನಿರ್ವಾಹಕರಾದ ಸಾರ ಮಸ್ಕುರುನ್ನೀಸ ಮತ್ತು ಡಾ. ಶಿಜಿನ್ ಎನ್, ಎನ್.ಎಸ್‌.ಎಸ್‌ ನಿರ್ವಾಹಕರಾದ ಚೈತ್ರಾ ಎನ್‌‌.ವಿ‌. ಮತ್ತು ಇತಾಶ್ರೀ, ಹಾಗೂ ಐ.ಕ್ಯೂ.ಎ.ಸಿ ಯ ನಿರೂಪಕರಾದ ವಾಣಿಶ್ರೀ ವೈ ವೇದಿಕೆಯಲ್ಲಿ ಆಸೀನರಾಗಿದ್ದರು.

ವಿದ್ಯಾರ್ಥಿಗಳಾದ ಶಫ್ನಾ ಶಿರೀನ್ ಸ್ವಾಗತಿಸಿದರೆ ಫೌಝ ಫಾತಿಮ ವಂದಿಸಿದರು‌. ಹಿಬಾ ಮರಿಯಂ ನಿರೂಪಿಸಿದರು.

150 ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678