HOMELATEST NEWSSTATE

ಬಿಜೆಪಿ ರಾಷ್ಟ್ರೀಯ ಘಟಕ ಪುನಾರಚನೆ: ಸ್ಮೃತಿ ಇರಾನಿಗೆ ಹೊಸ ಹೊಣೆ

ನವದೆಹಲಿ, ಆಗಸ್ಟ್ 17: ಭಾರತೀಯ ಜನತಾ ಪಾರ್ಟಿಯ ( BJP ) ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ (Nitin Nabin )ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದಲ್ಲಿ ಭಾರಿ ಬದಲಾವಣೆ ನಡೆದಿದ್ದು, ಅನುಭವಿ ನಾಯಕರು ಹಾಗೂ ಪ್ರಮುಖ ರಾಜಕೀಯ ಮುಖಂಡರಿಗೆ ಜವಾಬ್ದಾರಿ ನೀಡುವುದರ ಮೂಲಕ ಹೊಸ ಕೇಂದ್ರ ತಂಡವನ್ನು ರಚಿಸಲಾಗಿದೆ. ಉತ್ತರ ಪ್ರದೇಶ, ಪಂಜಾಬ್ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ತಿಂಗಳುಗಳು ಬಾಕಿ ಇರುವಾಗ ಕೇಂದ್ರ ಬಿಜೆಪಿಯಲ್ಲಿ(BJP) ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಲಾಗಿದೆ. 13 ರಾಷ್ಟ್ರೀಯ ಉಪಾಧ್ಯಕ್ಷರು, 8 ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು 16 ಮೋರ್ಚಾ ಅಧ್ಯಕ್ಷರನ್ನು ಹೊಸದಾಗಿ ನೇಮಕ ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಹೊಸ ಘಟಕದಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಹಿರಿಯ ನಾಯಕ ರಾಮ್ ಮಾಧವ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದರೆ, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವ ಮೂಲಕ ಪಕ್ಷವು ಮಹತ್ವದ ಹೆಜ್ಜೆ ಇಟ್ಟಿದೆ. ಇನ್ನು ಕರ್ನಾಟಕದ ಪ್ರೋ.ನಾಗರಾಜ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಗಿದ್ದರೆ, ಬಿಎಲ್ ಸಂತೋಷ್ ಅವರನ್ನು ಬಿಜೆಪಿ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಸಲಾಗಿದೆ.

ಅನಿಲ್ ಆಂಟನಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮುಂದುವರಿದರೆ, ಅನಿಲ್ ಬಲೂನಿ ಅವರು ಪ್ರಮುಖ ರಾಷ್ಟ್ರೀಯ ಮಾಧ್ಯಮ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ. 13 ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ಐವರು ಮಹಿಳೆಯರಿದ್ದಾರೆ, ಆದರೆ ಎಂಟು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಸ್ಮೃತಿ ಇರಾನಿ ಮಾತ್ರ ಏಕೈಕ ಮಹಿಳೆಯಾಗಿದ್ದಾರೆ. ವಿಶೇಷವೆಂದರೆ, ಪಕ್ಷದ ಸಾಮಾಜಿಕ ಜಾಲತಾಣ ಮತ್ತು ಐಟಿ ಸೆಲ್ ಮುಖ್ಯಸ್ಥರಾಗಿದ್ದ ಅಮಿತ್ ಮಾಳವೀಯ ಅವರ ಹೆಸರು ಬಿಜೆಪಿಯ ಹೊಸ ಪಟ್ಟಿಯಲ್ಲಿಲ್ಲ. ಜೊತೆಗೆ, ದೀಪಕ್ ಮಹಾಸ್ಕರೆ ಅವರನ್ನು ಬಿಜೆಪಿಯ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ನೇಮಿಸಲಾಗಿದೆ.

ಯುವ ಮೋರ್ಚಾ ಅಧ್ಯಕ್ಷರ ಬದಲಾವಣೆಯಾಗಿದ್ದು, ಈ ಹಿಂದೆ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕೊಕ್ ಕೊಡಲಾಗಿದ್ದು, ಗುಜರಾತ್ ಮೂಲದ ಡಾ.ಹೇಮಾಂಗ್ ಜೋಶಿ ಅವರನ್ನು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ನತಿನ್ ನಬೀನ್ ಹೊಸ ತಂಡ ಹೀಗಿದೆ
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು: ವಸುಂಧರಾ ರಾಜೇ ಸಿಂಧಿಯಾ, ತೀರತ್ ಸಿಂಗ್ ರಾವತ್, ರಾಮ್ ಮಾಧವ್, ವೈಜಯಂತ್ ಜಯ್ ಪಾಂಡಾ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ವರ್ಷಾಬೆನ್ ನರೇಂದ್ರಭಾಯ್ ದೋಷಿ , ಡಾ. ಭಾರತಿ ಪ್ರವೀಣ್ ಪವಾರ್ , ಸರ್ದಾರ್ ಮನ್‌ಪ್ರೀತ್ ಸಿಂಗ್ ಬಾದಲ್,ಲಾಲ್ ಸಿಂಗ್ ಆರ್ಯ, ಪ್ರೊ. ಎಂ. ನಾಗರಾಜ್, ಪ್ರೊ. ತಾರಿಕ್ ಮನ್ಸೂರ್ , ಡಾ. ಮಧುಚಂದ್ರ ಕರ್ ,

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ): ಬಿ.ಎಲ್. ಸಂತೋಷ್ ಕರ್ನಾಟಕ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು: ವಿನೋದ್ ತಾವ್ಡೆ , ಸುನಿಲ್ ಬನ್ಸಾಲ್, ಬಿಪ್ಲಬ್ ಕುಮಾರ್ ದೇವ್, ಸ್ಮೃತಿ ಇರಾನಿ, ಸತೀಶ್ ಪೂನಿಯಾ, ಗಜೇಂದ್ರ ಪಟೇಲ್ ,ಹರೀಶ್ ದ್ವಿವೇದಿ, ಸಂಜಯ್ ಭಾಟಿಯಾ

ರಾಷ್ಟ್ರೀಯ ಕಾರ್ಯದರ್ಶಿಗಳು: ಕವಿತಾ ಪಾಟಿದಾರ್, ಕೆ. ಸುರೇಂದ್ರನ್ , ಡಾ. ಭೋಲಾ ಸಿಂಗ್ ,ಡಾ. ಪ್ರದೀಪ್ ವರ್ಮಾ, ಜಗದೀಶ್ ಈಶ್ವರ್‌ಭಾಯ್ ಪಟೇಲ್, ಡಾ. ಸಂದೀಪ್ ಪಾಠಕ್, ಫಾಂಗ್ನಾನ್ ಕೊನ್ಯಾಕ್ , ಸಂಗೀತಾ ಯಾದವ್, ಅನಿಲ್ ಆಂಟನಿ, ಎಂ. ವೆಂಕಟೇಶನ್, ಮನೋಜ್ ಟಿಗ್ಗಾ, * ಸಿದ್ಧಾರ್ಥ ಶಂಭು, ಡಾ. ಸ್ವದೇಶ್ ಸಿಂಗ್, ಮೃಗಾಂಕ ದೇವ್ ಬರ್ಮನ್, ರೋಹನ್ ಗುಪ್ತಾ, ಜೈ ಪ್ರಕಾಶ್,

ರಾಷ್ಟ್ರೀಯ ಕೋಶಾಧಿಕಾರಿ: ಪಿಯೂಷ್ ಗೋಯಲ್

Share News