ಮಂಗಳೂರು ಆ 09: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ರಕ್ಷಾಬಂಧನದ ಪ್ರಯುಕ್ತ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸೈನಿಕರಿಗೆ ರಕ್ಷೆಯನ್ನು ಕಟ್ಟಿ ಶುಭ ಹಾರೈಸಲಾಯಿತು.
ನಿವೃತ್ತ ಸೈನಿಕರಿಗೆ ಆರತಿ ಬೆಳಗಿ, ಸಿಂಧೂರ ತಿಲಕವಿಟ್ಟು ಪೆಹಲ್ಗಮ್ ಉಗ್ರರ ದಾಳಿಯಲ್ಲಿ ಸಿಂಧೂರವನ್ನು ಕಳಕೊಂಡ ತಾಯಂದಿರ ನೋವಿಗೆ ಆಪರೇಷನ್ ಸಿಂಧೂರದ ಮೂಲಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆಗೆ ಮಹಿಳಾ ಮೋರ್ಚಾದಿಂದ ಧನ್ಯವಾದ ಸಮರ್ಪಿಸಲಾಯಿತು.
ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳಾ ಮೋರ್ಚಾದ ಪ್ರಭಾರಿ ಸಂಧ್ಯಾ ವೆಂಕಟೇಶ್, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಕಮಲಾಕ್ಷಿ ಗಂಗಾಧರ್, ಶಬರಿ ಶೆಟ್ಟಿ, ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಗೀತಾ, ಪೂಜಾ, ಜ್ಯೋತಿ ಯಲಬುರ್ಗಿ, ಸೌಮ್ಯ ಆಚಾರ್ಯ, ವೀಣಾ ಕುಲಾಲ್, ಪೂರ್ಣಿಮಾ ಶೆಟ್ಟಿ, ಚೇತನ, ಮದಲಾಕ್ಷಿ ಉಪಸ್ಥಿತರಿದ್ದರು.