• Home  
  • ಬಿಜೆಪಿ ಮುಖಂಡ ಈಶ್ವರ್ ಭಟ್ ರಾಕೋಡಿ ಕಾಂಗ್ರೆಸ್ ಸೇರ್ಪಡೆ
- LATEST NEWS

ಬಿಜೆಪಿ ಮುಖಂಡ ಈಶ್ವರ್ ಭಟ್ ರಾಕೋಡಿ ಕಾಂಗ್ರೆಸ್ ಸೇರ್ಪಡೆ

ಬಂಟ್ವಾಳ:ಬೋಳಂತೂರು ಪರಿಸರದಲ್ಲಿ ಕಳೆದ 50 ವರ್ಷಗಳಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಹಾಗೂ ವಿವಿಧ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದ ಹಿರಿಯ ಮುಖಂಡ ಶ್ರೀ ಈಶ್ವರ್ ಭಟ್ ರಾಕೋಡಿ ಅವರು ಬಿಜೆಪಿ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಶ್ರೀ ಈಶ್ವರ್ ಭಟ್ ಅವರು ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಾಗೂ ಶಾಲನ್ನು ಧರಿಸುವ ಮೂಲಕ ಪಕ್ಷದ ಸಿದ್ದಾಂತ ಮತ್ತು ಕಾರ್ಯನಿಷ್ಠೆಯನ್ನು ಒಪ್ಪಿ ಕಾಂಗ್ರೆಸ್ ಸೇರಿದರು. ಬೋಳಂತೂರಿನ […]

Share News

ಬಂಟ್ವಾಳ:ಬೋಳಂತೂರು ಪರಿಸರದಲ್ಲಿ ಕಳೆದ 50 ವರ್ಷಗಳಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಹಾಗೂ ವಿವಿಧ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದ ಹಿರಿಯ ಮುಖಂಡ ಶ್ರೀ ಈಶ್ವರ್ ಭಟ್ ರಾಕೋಡಿ ಅವರು ಬಿಜೆಪಿ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಶ್ರೀ ಈಶ್ವರ್ ಭಟ್ ಅವರು ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಾಗೂ ಶಾಲನ್ನು ಧರಿಸುವ ಮೂಲಕ ಪಕ್ಷದ ಸಿದ್ದಾಂತ ಮತ್ತು ಕಾರ್ಯನಿಷ್ಠೆಯನ್ನು ಒಪ್ಪಿ ಕಾಂಗ್ರೆಸ್ ಸೇರಿದರು.

ಬೋಳಂತೂರಿನ ಹಲವು ಸಂಘ-ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡು, ತಮ್ಮ ಮುಂದಾಳತ್ವದಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಈಶ್ವರ್ ಭಟ್ ಅವರು ನೇರ ನಡೆ-ನುಡಿಯ, ಪ್ರಾಮಾಣಿಕ ಹಾಗೂ ಬಡವರ ಬಗ್ಗೆ ಅಪಾರ ಕಾಳಜಿಯುಳ್ಳ ಜನಾನುರಾಗಿ ನಾಯಕರಾಗಿದ್ದಾರೆ.

ಬಿಜೆಪಿ ವಿರುದ್ಧ ಅಸಮಾಧಾನ:
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಅವರು, “ಬಿಜೆಪಿಯಲ್ಲಿ ದಶಕಗಳಿಂದ ಸಕ್ರಿಯವಾಗಿ ದುಡಿದರೂ ಒಬ್ಬ ನಿಷ್ಠಾವಂತ ಕಾರ್ಯಕರ್ತನಿಗೆ ಯಾವುದೇ ಬೆಲೆ ಸಿಗುತ್ತಿಲ್ಲ. ಕಾರ್ಯಕರ್ತರ ಧ್ವನಿ ಹಾಗೂ ನಾಯಕರ ಮಾತುಗಳಿಗೆ ಪಕ್ಷದಲ್ಲಿ ಯಾವುದೇ ಸ್ಪಂದನೆ ಇಲ್ಲದ ಕಾರಣ ಮನನೊಂದು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆ ಯಾಗಿದ್ದೇನೆ” ಎಂದು ತಮ್ಮ ಅಸಮಾಧಾನ ವನ್ನು ಹೊರಹಾಕಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಹೊಸದಾಗಿ ಪಕ್ಷಕ್ಕೆ ಸೇರಿದ ಈಶ್ವರ್ ಭಟ್ ರಾಕೋಡಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
Share News