ಮಂಗಳೂರು: ಮೇ 26: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 37ನೇ ಮರೋಳಿ ವಾರ್ಡಿನ ಅಡು ಮರೋಳಿ ಬಳಿ ₹20 ಲಕ್ಷ ವಿಶೇಷ ಅನುದಾನದಲ್ಲಿ ನಿರ್ಮಾಣವಾಗಲಿರುವ ತಡೆಗೋಡೆ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, “ಕಳೆದ ಮಳೆಗಾಲದಲ್ಲಿ ಈ ಭಾಗದ ತಡೆಗೋಡೆಯು ಸಂಪೂರ್ಣ ಹಾನಿಗೊಳಗಾಗಿತ್ತು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಇದೀಗ ತುರ್ತಾಗಿ ಪರಿಹಾರ ನಿಧಿಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ನಮ್ಮ ಭಾಗದಲ್ಲಿ ಸುಮಾರು ₹300 ರಿಂದ ₹400 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ. ಆದರೂ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಗತ್ಯ ಅನುದಾನ ಬಂದಿಲ್ಲದಿರುವುದು ಬೇಸರದ ಸಂಗತಿ” ಎಂದರು.
ಮುಂದುವರಿದು ಮಾತನಾಡಿದ ಅವರು, “ಇತ್ತೀಚಿಗೆ ಇಡೀ ರಾಜ್ಯಕ್ಕೆ ಬಿಡುಗಡೆಯಾಗಿರುವ ಮಳೆ ಪರಿಹಾರ ನಿಧಿಯಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ₹10 ಕೋಟಿ ಮಂಜೂರಾಗಿದೆ. ಈ ಪರಿಹಾರ ನಿಧಿಯ ಅಡಿಯಲ್ಲಿಯೇ ಪ್ರಸ್ತುತ ಅಡು ಮರೋಳಿಯ ತಡೆಗೋಡೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ” ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಿರಣ್ ಮರೋಳಿ, ಮನೋಹರ್ ಶೆಟ್ಟಿ ಕದ್ರಿ, ಲೂಸಿ ಪಿಂಟೋ, ಗ್ರಿಪ್ಪೆನ್, ಎಲಿಜ, ಮಧು ಕುಮಾರ್, ನವೀನ್, ಡೇವಿಡ್, ಸಾವಿತ್ರಿ, ಶರತ್, ತುಷಾರ, ಹರಿಣಾಕ್ಷ, ಅಕ್ಷಿತ್, ಯೋಗೇಶ್ವರಿ, ಜಗದೀಶ್ ಶೆಟ್ಟಿ, ರುಕ್ಮಯ್ಯ, ರಾಘು, ಅರುಣ್ ಶೆಟ್ಟಿ, ರಾಜೇಶ್ ಅಲಂಗಾರ್, ಮಾಲತಿ, ಸುಲೋಚನಾ, ವತ್ಸಲಾ ಸೇರಿದಂತೆ ಸ್ಥಳೀಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.