• Home  
  • ಬ್ಯಾಪ್ಟಿಸ್ಟ್ ಪ್ರೀಮಿಯರ್ ಲೀಗ್ ಸೀಸನ್-8: ಅರಸು ಟೈಟನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ
- LATEST NEWS

ಬ್ಯಾಪ್ಟಿಸ್ಟ್ ಪ್ರೀಮಿಯರ್ ಲೀಗ್ ಸೀಸನ್-8: ಅರಸು ಟೈಟನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ

ಮಂಗಳೂರು: ನಗರದ ಉರ್ವ ಸ್ಟೋರಿನಲ ಬ್ಯಾಪ್ಟಿಸ್ಟ್ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ನಡೆದ ಬ್ಯಾಪ್ಟಿಸ್ಟ್ ಪ್ರೀಮಿಯರ್ ಲೀಗ್ ಸೀಸನ್-8 ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮನು ಅರಸು ಅವರ ಮಾಲಕತ್ವದ ಅರಸು ಟೈಟನ್ಸ್ ತಂಡ ಪ್ರಥಮ ಸ್ಥಾನವನ್ನು, ಅಶ್ವಿನ್ ಪೂಜಾರಿಯವರ ಶ್ರೀ ಕಟಿಲೇಶ್ವರಿ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು. ಅರಸು ಟೈಟನ್ಸ್ ತಂಡದಲ್ಲಿದ್ದ ವಿನಯ ಕುಮಾರ್, ಗುರುದತ್ತ್, ಸೌಹಾರ್ದ್ ಶೆಟ್ಟಿ, ಗುರುದತ್ತ ಶೆಟ್ಟಿ, ಕಿಶನ್ ಶೆಟ್ಟಿ, ಚಿರಾಗ್ ಆರ್., ಮಹೇಶ್ ಕುಮಾರ್ ಹೊಳ್ಳ, ಸತೀಶ್ ಎಸ್., ಐ.ಬಿ. ಸಿಂಚನಾ ಜೈನ್, […]

Share News

ಮಂಗಳೂರು: ನಗರದ ಉರ್ವ ಸ್ಟೋರಿನಲ ಬ್ಯಾಪ್ಟಿಸ್ಟ್ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ನಡೆದ ಬ್ಯಾಪ್ಟಿಸ್ಟ್ ಪ್ರೀಮಿಯರ್ ಲೀಗ್ ಸೀಸನ್-8 ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮನು ಅರಸು ಅವರ ಮಾಲಕತ್ವದ ಅರಸು ಟೈಟನ್ಸ್ ತಂಡ ಪ್ರಥಮ ಸ್ಥಾನವನ್ನು, ಅಶ್ವಿನ್ ಪೂಜಾರಿಯವರ ಶ್ರೀ ಕಟಿಲೇಶ್ವರಿ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು.
ಅರಸು ಟೈಟನ್ಸ್ ತಂಡದಲ್ಲಿದ್ದ ವಿನಯ ಕುಮಾರ್, ಗುರುದತ್ತ್, ಸೌಹಾರ್ದ್ ಶೆಟ್ಟಿ, ಗುರುದತ್ತ ಶೆಟ್ಟಿ, ಕಿಶನ್ ಶೆಟ್ಟಿ, ಚಿರಾಗ್ ಆರ್., ಮಹೇಶ್ ಕುಮಾರ್ ಹೊಳ್ಳ, ಸತೀಶ್ ಎಸ್., ಐ.ಬಿ. ಸಿಂಚನಾ ಜೈನ್, ಚೇತನ್ ಹಾಗೂ ಉದಯ ಆಚಾರ್ಯ ಗೆಲುವಿನ ರೂವಾರಿಗಳಾದರು. ಈ ಶಟಲ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾಟದಲ್ಲಿ ಪ್ರತಿಷ್ಠಿತ ಆರು ತಂಡಗಳು ಭಾಗವಹಿಸಿದ್ದವು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿ’ಸೋಜ ಜ್ಯೋತಿ ಬೆಳಗಿಸಿ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಯಥಾರ್ಥ್ ಸೋಶಿಯಲ್ ಗ್ರೂಪ್‍ನ ಸಂಸ್ಥಾಪಕ ಈಶ್ವರ ಶೆಟ್ಟಿ ಅವರು ನಮ್ಮಲ್ಲಿರುವ ಅನುಪಯುಕ್ತವಾದ ಶೂಸ್ ಹಾಗೂ ಸ್ಯಾಂಡಲ್ಸ್‍ಗಳನ್ನು ಸಂಗ್ರಹಿಸಿ ಅದನ್ನು ಸಮರ್ಪಕವಾದ ರೀತಿಯಲ್ಲಿ ವಿಲೇವಾರಿ ಮಾಡುವಂತಹ `ಹೆಜ್ಜೆ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬ್ಯಾಪ್ಟಿಸ್ಟ್ ಸ್ಪೋಟ್ರ್ಸ್ ಫೌಂಡೇಶನ್‍ನ ಅಧ್ಯಕ್ಷ ಅರುಣ್ ಬ್ಯಾಪ್ಟಿಸ್ಟ್, ಸಂಸ್ಥೆಯ ಸದಸ್ಯ ಆನಂದ್ ಬ್ಯಾಪ್ಟಿಸ್ಟ್ ಹಾಗೂ ತಂಡದ ಮಾಲೀಕರಾದ ದೀಕ್ಷಿತ್ ಶೆಟ್ಟಿ, ಮನು ಅರಸು, ಅಶ್ವಿನ್ ಪೂಜಾರಿ, ಸುಧೀಂದ್ರ ಪ್ರಭು, ವಿಕ್ಕಿ ಪೈ, ಡಾ. ಟೈಸನ್ ಡಿ’ಕುನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನತ್ ಕಾರ್ಯಕ್ರಮ ನಿರ್ವಹಿಸಿದರು.

Share News