• Home  
  • *ಜಪ್ಪಿನಮೊಗರು: ಶ್ರೀ ವೈದ್ಯನಾಥ ಆಟೋ ಪಾರ್ಕ್‌ನ ನೂತನ ಮೇಲ್ಛಾವಣಿ ಹಾಗೂ ಇಂಟರ್‌ಲಾಕ್ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್*
- LATEST NEWS

*ಜಪ್ಪಿನಮೊಗರು: ಶ್ರೀ ವೈದ್ಯನಾಥ ಆಟೋ ಪಾರ್ಕ್‌ನ ನೂತನ ಮೇಲ್ಛಾವಣಿ ಹಾಗೂ ಇಂಟರ್‌ಲಾಕ್ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್*

ಮಂಗಳೂರು, ಏ.06: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 54ನೇ ಜಪ್ಪಿನಮೊಗರು ವಾರ್ಡಿನ ಶ್ರೀ ವೈದ್ಯನಾಥ ಆಟೋ ಪಾರ್ಕ್‌ಗೆ ನೂತನವಾಗಿ ಅಳವಡಿಸಲಾದ ಮೇಲ್ಛಾವಣಿ ಹಾಗೂ ಇಂಟರ್‌ ಲಾಕ್ ವ್ಯವಸ್ಥೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಇತ್ತೀಚೆಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು, “ಆಟೋ ಚಾಲಕರು ಸಮಾಜದ ಶ್ರಮಿಕ ವರ್ಗದ ಕೊಂಡಿಯಾಗಿದ್ದಾರೆ. ಪ್ರಯಾಣಿಕರ ಸೇವೆಯ ಜೊತೆಗೆ ತಮ್ಮ ವಾಹನಗಳ ಬಗ್ಗೆಯೂ ಅವರು ಅಪಾರ ಕಾಳಜಿ ಹೊಂದಿರುತ್ತಾರೆ. ಪ್ರಸ್ತುತ ವಿಪರೀತ ಬಿಸಿಲಿನ ವಾತಾವರಣವಿರುವುದ ರಿಂದ, […]

Share News

ಮಂಗಳೂರು, ಏ.06: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 54ನೇ ಜಪ್ಪಿನಮೊಗರು ವಾರ್ಡಿನ ಶ್ರೀ ವೈದ್ಯನಾಥ ಆಟೋ ಪಾರ್ಕ್‌ಗೆ ನೂತನವಾಗಿ ಅಳವಡಿಸಲಾದ ಮೇಲ್ಛಾವಣಿ ಹಾಗೂ ಇಂಟರ್‌ ಲಾಕ್ ವ್ಯವಸ್ಥೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಇತ್ತೀಚೆಗೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕರು, “ಆಟೋ ಚಾಲಕರು ಸಮಾಜದ ಶ್ರಮಿಕ ವರ್ಗದ ಕೊಂಡಿಯಾಗಿದ್ದಾರೆ. ಪ್ರಯಾಣಿಕರ ಸೇವೆಯ ಜೊತೆಗೆ ತಮ್ಮ ವಾಹನಗಳ ಬಗ್ಗೆಯೂ ಅವರು ಅಪಾರ ಕಾಳಜಿ ಹೊಂದಿರುತ್ತಾರೆ. ಪ್ರಸ್ತುತ ವಿಪರೀತ ಬಿಸಿಲಿನ ವಾತಾವರಣವಿರುವುದ ರಿಂದ, ಬಿಡುವಿನ ವೇಳೆಯಲ್ಲಿ ಆಟೋಗಳನ್ನು ನೆರಳಿನಲ್ಲಿ ನಿಲ್ಲಿಸಬೇಕೆಂಬ ಚಾಲಕರ ದೀರ್ಘಕಾಲದ ಬೇಡಿಕೆಯಿತ್ತು. ಅವರ ಆಶಯದಂತೆ ಇಲ್ಲಿ ಸುಸಜ್ಜಿತ ಮೇಲ್ಛಾವಣಿ ಹಾಗೂ ಇಂಟರ್‌ಲಾಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಎಲ್ಲಾ ರಿಕ್ಷಾ ಚಾಲಕ ಬಂಧುಗಳಿಗೆ ಅನುಕೂಲವಾದರೆ ಅದೇ ನಮಗೆ ತೃಪ್ತಿ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿಜಯ್ ಕುಮಾರ್ ಶೆಟ್ಟಿ, ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ವೀಣಾ ಮಂಗಳಾ, ದಕ್ಷಿಣ ಮಹಾ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್, ಜಪ್ಪಿನಮೊಗರು ಶಕ್ತಿ ಕೇಂದ್ರದ ಪ್ರಮುಖ್ ಕೀರ್ತೇಶ್ ಅಮೀನ್ ಉಪಸ್ಥಿತರಿದ್ದರು.ಅಲ್ಲದೆ, ಆರಕ್ಷಕ ಅಧಿಕಾರಿ ಗಂಗಾಧರ್, ಪ್ರಮುಖರಾದ ಸುರೇಂದ್ರ ಜೆ., ಪುಷ್ಪರಾಜ್ ಅಮೀನ್, ವೈದ್ಯನಾಥ ಆಟೋ ಪಾರ್ಕ್ ಅಧ್ಯಕ್ಷ ಗಂಗಾಧರ್ ಸೇರಿದಂತೆ ಹಲವು ಆಟೋ ಚಾಲಕರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share News