DAKSHINA KANNADAHOMELATEST NEWSSTATE

ಆಂಟಿ ಜೊತೆ ಜ್ಯೋತಿಷಿ ಕಮಲಾಕರ ಭಟ್ ಅಕ್ರಮ ಸಂಬಂಧ- ಗಲಾಟೆ: ಓರ್ವನ ಮರ್ಡರ್‌

ಕಾರವಾರ: ಸಿದ್ದಾಪುರ ತಾಲ್ಲೂಕಿನ ಅವರಗೊಪ್ಪ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ ನಾಯ್ಕ ಸೇರಿ ಏಳು ಮಂದಿಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ ನಾಯ್ಕ

ಮೃತ ವ್ಯಕ್ತಿಯನ್ನು ವಸಂತ ನಾಯ್ಕ (43) ಎಂದು ಗುರುತಿಸಲಾಗಿದೆ.

ಘಟನೆ ವಿವರ

ದೃಶ್ಯವಾಹಿನಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಸಿದ್ದಾಪುರ ತಾಲ್ಲೂಕು ಹೆಮ್ಮನಬೈಲ್ ಗ್ರಾಮದ, ಸದ್ಯ ಶಿವಮೊಗ್ಗದಲ್ಲಿ ವಾಸವಿರುವ ಕಮಲಾಕರ ಭಟ್, ಆತನ ಮನೆಯಲ್ಲಿ ವಾಸವಿದ್ದ ಸುಚಿತ್ರಾ ನಾಯ್ಕ, ಸುಚಿತ್ರಾಳ ತಂದೆ ಲೋಕನಾಥ ನಾಯ್ಕ ಮತ್ತು ಇತರ ನಾಲ್ವರು ಯುವಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಜ್ಯೋತಿಷಿ ಸೇರಿ ಮೂವರನ್ನು ಸಿದ್ದಾಪುರದಲ್ಲಿ, ನಾಲ್ವರು ಯುವಕರನ್ನು ಶಿವಮೊಗ್ಗದಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ತಂದಿದ್ದ ಜ್ಯೋತಿಷಿಗೆ ಸೇರಿದ್ದ ಕಾರನ್ನು ಗ್ರಾಮಸ್ಥರು ಪುಡಿಗಟ್ಟಿದ್ದಾರೆ.

  ಮೃತ ವಸಂತ ನಾಯ್ಕ

‘ಮಹೇಶ ನಾಯ್ಕ ಮತ್ತು ಸುಚಿತ್ರಾ ದಂಪತಿಯ ಪುತ್ರಿಯನ್ನು ಕರೆದೊಯ್ಯಲು ಆರೋಪಿಗಳು ಅವರಗುಪ್ಪಕ್ಕೆ ಬಂದಿದ್ದರು. ಈ ವೇಳೆ ನಡೆದ ಗಲಾಟೆಯಲ್ಲಿ ಒಬ್ಬರು ಕೊಲೆಯಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಹತ್ಯೆ ನಡೆಸಿದ ಶಿವಮೊಗ್ಗದ ನಾಲ್ವರು ಯುವಕರನ್ನು ವಿಚಾರಣೆ ನಡೆಸಲಾಗುತ್ತಿದೆ. ಅವರನ್ನು ಕರೆತಂದಿದ್ದ ಮೂವರನ್ನೂ ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ತಿಳಿಸಿದ್ದಾರೆ.

‘ಜ್ಯೋತಿಷಿಯೊಂದಿಗಿನ ಅನೈತಿಕ ಸಂಬಂಧದ ಬಗ್ಗೆ ಪುತ್ರಿ ಮಾಹಿತಿ ನೀಡಬಹುದೆಂಬ ಭಯದಿಂದ ಪತಿ ಹತ್ಯೆಗೈಯಲು ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ ಭಟ್ ತಂಡವೊಂದನ್ನು ಕರೆತಂದಿದ್ದರು. ಸಹೋದರನನ್ನು ರಕ್ಷಿಸಲು ಹೋದ ವಸಂತ ನಾಯ್ಕ ಹತ್ಯೆಯಾಗಿದ್ದಾರೆ’ ಎಂದು ಮೃತನ ಪತ್ನಿ ಸಂಧ್ಯಾ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣದ ಹಿನ್ನೆಲೆ

‘ಸಿದ್ದಾಪುರ ತಾಲ್ಲೂಕು ಅವರಗುಪ್ಪ ಗ್ರಾಮದ ಮಹೇಶ ತನ್ನ ಪತ್ನಿ ಸುಚಿತ್ರಾ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬೆಂಗಳೂರಿನಲ್ಲಿದ್ದಾಗ ಜ್ಯೋತಿಷಿ ಪರಿಚಯವಾಗಿತ್ತು. ಎರಡು ತಿಂಗಳ ಹಿಂದೆ ಮಹೇಶ ಬೆಂಗಳೂರಿನಿಂದ ಊರಿಗೆ ಮರಳಿದ್ದರು. ಆದರೆ, ಸುಚಿತ್ರಾ ತನ್ನ ಇಬ್ಬರು ಮಕ್ಕಳೊಂದಿಗೆ ಜ್ಯೋತಿಷಿ ಕಮಲಾಕರ ಭಟ್ ಅವರ ಶಿವಮೊಗ್ಗದ ಮನೆಯಲ್ಲಿ ಬಂದು ಉಳಿದಿದ್ದರು.

 ಸುಚಿತ್ರಾ ಪತಿ ಮಹೇಶ ನಾಯ್ಕ

ಜ್ಯೋತಿಷಿ ಜೊತೆ ಸಲುಗೆ ಬೆಳೆಸಿಕೊಂಡಿದ್ದ ಸುಚಿತ್ರಾಳ ವರ್ತನೆ ಬಗ್ಗೆ ಆಕೆಯ ಹಿರಿಯ ಪುತ್ರಿ ಅಸಮಾಧಾನ ಹೊಂದಿದ್ದಳು. ತಂದೆಗೆ ವಿಷಯ ತಿಳಿಸಿ, ಅಲ್ಲಿಂದ ಅವರಗುಪ್ಪ ಗ್ರಾಮಕ್ಕೆ ಸೋಮವಾರ ಬಂದಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. ‘ತಾಯಿಯಿಂದ ತನಗಾಗುತ್ತಿರುವ ಕಿರುಕುಳದ ಬಗ್ಗೆ ಪುತ್ರಿ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದರು.

ಶಿರಸಿಯ ಮಕ್ಕಳ ಕಲ್ಯಾಣಾಧಿಕಾರಿ ಅವರಿಗೂ ದೂರು ನೀಡಿದ್ದರು. ಮನೆಗೆ ಮರಳುತ್ತಿದ್ದಂತೆಯೆ ವೇಳೆ ಸುಚಿತ್ರಾ, ಆಕೆಯ ತಂದೆ ಲೋಕನಾಥ, ಜ್ಯೋತಿಷಿ ಕಮಲಾಕರ ಭಟ್ ನಾಲ್ವರು ಯುವಕರ ತಂಡದೊಂದಿಗೆ ಅವರಗುಪ್ಪದ ಮಹೇಶ ನಾಯ್ಕ ಮನೆಗೆ ಬಂದಿದ್ದರು. ಸುಚಿತ್ರಾಳ ಪತಿ ಮಹೇಶ ನಾಯ್ಕ ಮೇಲೆ ತಂಡವು ಹಲ್ಲೆ ನಡೆಸಲು ಮುಂದಾಗುತ್ತಿದ್ದಂತೆ ತಡೆಯಲು ಬಂದ ವಸಂತ ನಾಯ್ಕಗೆ ಇರಿದು ಹತ್ಯೆ ಮಾಡಿದ್ದಾರೆ.

ಮಹೇಶ ನಾಯ್ಕ ಮತ್ತು ನೆರೆ ಮನೆಯ ಕುಮಾರ ನಾಯ್ಕ ಎಂಬುವವರ ಮೇಲೂ ಮಾರಕಾಸ್ತ್ರದಿಂದ ಹಲ್ಲೆ ನಡೆದಿದೆ. ಗಲಾಟೆ ದೊಡ್ಡದಾಗುತ್ತಿದ್ದಂತೆ ಊರಿನವರು ಸೇರಿದ್ದರಿಂದ ಬಂದವರು ಪರಾರಿಯಾಗಿದ್ದರು.

Share News