canaratvnews

ಅಂಬೇಡ್ಕರ್ ಜಯಂತಿ ಮತ್ತು ವಿದ್ಯಾರ್ಥಿ ಸನ್ಮಾನ ಕಾರ್ಯಕ್ರಮ

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ) ವಿಟ್ಲ ಇದರ ಸ್ಥಾಪಕಾಧ್ಯಕ್ಷರಾದ ಬಿ. ಕೆ. ಸೇಸಪ್ಪ ಬೆದ್ರಕಾಡು ಅವರು ಮೂಡಬಿದ್ರೆಯ ಕನ್ನಡ ಭವನದಲ್ಲಿ ನಡೆದ ವಿದ್ಯಾರ್ಥಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತದನಂತರ ರಾಯಿ ಗ್ರಾಮದಲ್ಲಿ ಒತ್ತುವರಿಯಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ ಭೇಟಿ ನೀಡಿ ಧೈರ್ಯ ತುಂಬಿದರು.

ವಿದ್ಯಾರ್ಥಿ ಸೋಷಿಯಲ್ ಎಜುಕೇಷನ್ ಸೊಸೈಟಿ ಮಂಗಳೂರು ಇದರ ಸ್ಥಾಪಕರಾದ ಶ್ರೀನಿವಾಸ್ ಮಿಜಾರ್ ಅವರ ನೇತೃತ್ವದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಅತ್ಯುತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿ. ಕೆ. ಸೇಸಪ್ಪ ಬೆದ್ರಕಾಡು ಅವರು ಶ್ರೀನಿವಾಸ್ ಮಿಜಾರ್ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.

ಸಂತ್ರಸ್ತರ ಅಹವಾಲು ಆಲಿಕೆ: ಕಾರ್ಯಕ್ರಮದ ಬಳಿಕ, ರಾಯಿ ಗ್ರಾಮದ ಅಣ್ಣಳಿಕೆ ಮೋಹನ್ ಎಂಬುವವರು ತಮ್ಮ ಪಕ್ಕದ ಸರ್ಕಾರಿ ಜಾಗವನ್ನು ಭೂಮಾಲೀಕರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸಮಿತಿಯ ಗಮನಕ್ಕೆ ತಂದರು. ಯಾವುದೇ ಸಂಘಟನೆಗಳು ತಮಗೆ ನ್ಯಾಯ ಒದಗಿಸದ ಕಾರಣ ಬೇಸರಗೊಂಡಿದ್ದ ಮೋಹನ್ ಅವರು, ಬಿ. ಕೆ. ಸೇಸಪ್ಪ ಅವರನ್ನು ಸ್ಥಳಕ್ಕೆ ಕರೆದೊಯ್ದು ಒತ್ತುವರಿ ಜಾಗವನ್ನು ತೋರಿಸಿದರು. ವಿಷಯವನ್ನು ಸಂಪೂರ್ಣವಾಗಿ ಆಲಿಸಿದ ದಲಿತ್ ಸೇವಾ ಸಮಿತಿಯ ನಾಯಕರು, “ನಾವು ಸದಾ ನಿಮ್ಮ ಜೊತೆ ಇರುತ್ತೇವೆ” ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಶೇಖರ್ ಯು. ವಿಟ್ಲ, ಪ್ರಸಾದ್ ಬೊಲ್ಮಾರ್, ಗಣೇಶ್ ಸೀಗೆಬಲ್ಲೆ ಹಾಗೂ ರಮೇಶ್ ಬೊಲ್ಮಾರ್ ಉಪಸ್ಥಿತರಿದ್ದರು.

Share News
Exit mobile version