canaratvnews

ಮಹಾರಾಷ್ಟ್ರದಲ್ಲಿ ಅಪಘಾತ: ಮಂಗಳೂರಿನ ಯುವಕ ಸಾವು

ಮಂಗಳೂರು: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಮುಡಿಪು ಸಮೀಪದ ಬೋಳಿಯಾರ್ ನಿವಾಸಿ ವಿವಾಹಿತ ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಬೋಳಿಯಾರ್ ನಿವಾಸಿ ಬಿಎಚ್ ಕರೀಂ ಎಂಬವರ ಪುತ್ರ ಮುಹಮ್ಮದ್ ರಿಝ್ವಾನ್ (28) ಮೃತರು ಎಂದು ಪೊಲೀಸರು ತಿಳಿಸಿದ್ದಾರೆ.ಕಳೆದ‌ ಹಲವಾರು ವರ್ಷಗಳಿಂದ ಕಂಪೆನಿಯೊಂದರ ಮೂಲಕ ಮೀನಿನ ಲಾರಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ರಿಝ್ವಾನ್ ಅವರು ಮಹಾರಾಷ್ಟ್ರಕ್ಕೆ ಮೀನಿನ ಲಾರಿ ಚಲಾಯಿಸುತ್ತಿದ್ದು, ಮಹಾರಾಷ್ಟ್ರದ ರತ್ನಗಿರಿ ಎಂಬಲ್ಲಿ ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ರಿಝ್ವಾನ್ ಮೃತಪಟ್ಟಿದ್ದಾರೆ.

ಮೃತರು ತಂದೆ, ತಾಯಿ, ಪತ್ನಿ, ಎರಡು ವರ್ಷದ ಮಗು ‌ಹಾಗೂ ಮೂವರು ಸಹೋದರು, ಮೂವರು ಸಹೋದರಿ ಯರನ್ನು ಅಗಲಿದ್ದಾರೆ. ಮೃತದೇಹವು ಬುಧವಾರ ಬೆಳಿಗ್ಗೆ ಊರಿಗೆ ತಲುಪಲಿದ್ದು ಬೋಳಿಯಾರ್ ಕೇಂದ್ರ ಮಸೀದಿಯ ವಠಾರದಲ್ಲಿ ದಫನ ಮಾಡುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

Share News
Exit mobile version