LATEST NEWS

ಕಾಟಿಪಳ್ಳ: ಗಿರಿಜಾ ದಂಪತಿಗೆ ನೂತನ ‘ಸಂತೃಪ್ತಿ’ ಮನೆ ಹಸ್ತಾಂತರ; ಸಮಾರಂಭದಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿ ಭಾಗಿ

ಸುರತ್ಕಲ್,ಕಾಟಿಪಳ್ಳ : ಅಭ್ಯುದಯ ಭಾರತಿ ಸೇವಾ ಟ್ರಸ್ಟ್ (ರಿ.) ಕಾಟಿಪಳ್ಳ ಹಾಗೂ ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಕ್ಷೇತ್ರದ ಜಂಟಿ ನೇತೃತ್ವದಲ್ಲಿ, ವಿವಿಧ ದಾನಿಗಳ ಸಮಾಜಮುಖಿ ಸಹಕಾರದೊಂದಿಗೆ ಕೃಷ್ಣಾಪುರದ ನಿವಾಸಿ ಶ್ರೀಮತಿ ಗಿರಿಜಾ ಅವರಿಗೆ ನೂತನವಾಗಿ ನಿರ್ಮಿಸಿಕೊಡಲಾದ `ಸಂತೃಪ್ತಿ´ ಮನೆಯ ಗೃಹಪ್ರವೇಶ ಹಾಗೂ ಹಸ್ತಾಂತರ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ನೂತನ ಮನೆಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.

ಬಳಿಕ ಮಾತನಾಡಿದ ಶಾಸಕರು, “ಸಮಾಜದಲ್ಲಿ ತೀರಾ ಹಿಂದುಳಿದ ಹಾಗೂ ವಸತಿ ರಹಿತ ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಮತ್ತು ಹಿಂದೂ ಧಾರ್ಮಿಕ ಸೇವಾ ಸಮಿತಿ ಮಾಡುತ್ತಿರುವ ಇಂತಹ ಸಾಮಾಜಿಕ ಕಾರ್ಯಗಳು ಶ್ಲಾಘನೀಯ. ದಾನಿಗಳ ಸಹಕಾರದೊಂದಿಗೆ ಬಡವರ ಮನೆಗೆ ಬೆಳಕಾಗುವ ಇಂತಹ ಸೇವೆಗಳು ಸಮಾಜಕ್ಕೆ ಮಾದರಿಯಾಗಿವೆ” ಎಂದು ಪ್ರಶಂಸಿಸಿದರು.

ಸಮಾರಂಭದಲ್ಲಿ ಟ್ರಸ್ಟ್ ಹಾಗೂ ಸಮಿತಿಯ ಪ್ರಮುಖ ಪದಾಧಿಕಾರಿಗಳು, ಪ್ರಮುಖ ದಾನಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ನೂತನ ಮನೆ ಪಡೆದ ಗಿರಿಜಾ ಅವರ ಕುಟುಂಬಕ್ಕೆ ಶುಭ ಹಾರೈಸಿದರು.

Share News