• Home  
  • ತಾಯಿ ಎದೆಹಾಲು ಗಂಟಲಲ್ಲಿ ಸಿಲುಕಿ 50 ದಿನದ ಮಗು ಕೊನೆಯುಸಿರು…!
- HOME - LATEST NEWS - STATE

ತಾಯಿ ಎದೆಹಾಲು ಗಂಟಲಲ್ಲಿ ಸಿಲುಕಿ 50 ದಿನದ ಮಗು ಕೊನೆಯುಸಿರು…!

ಕಾಸರಗೋಡು: ತಾಯಿಯ ಎದೆಹಾಲು ಗಂಟಲಲ್ಲಿ ಸಿಲುಕಿ ಮಗುವೊಂದು ಮೃತಪಟ್ಟ ಘಟನೆ ಕಾಸರಗೋಡಿನ ಮೊಗ್ರಾಲ್ ಪೇರಾಲ್‌ನಲ್ಲಿ ನಡೆದಿದೆ. ಮೊಗ್ರಾಲ್ ಪೇರಾಲ್ ಮಡಿಮೊಗರು ನಿವಾಸಿ ಮುಹಮ್ಮದ್ ರಾಹಿದ್-ಮರಿಯಮ್ಮತ್ ಸಾಬಿರಾ ದಂಪತಿ ಪುತ್ರ, 50 ದಿನಗಳ ಲಸಿನ್ ಇಮಾತ್ ಮೃತಪಟ್ಟವ. ಸೋಮವಾರ ರಾತ್ರಿ ಮನೆಯಲ್ಲಿ ಈ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ತಕ್ಷಣ ನಗರದ ಸರ್ಕಾರಿ ಜನರಲ್ ಆಸ್ಪತ್ರೆಗೆ ಸಾಗಿಸಿದರೂ, ಅಷ್ಟರಲ್ಲಿ ಕೊನೆಯುಸಿರೆಳೆದಿದೆ. ಒಂದೇ ರೀತಿಯ ಘಟನೆಯ ಪರಿಣಾಮ 2 ದಿನಗಳಲ್ಲಿ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಭಾನುವಾರ ರಾತ್ರಿ ಬೇಕಲ […]

Share News

ಕಾಸರಗೋಡು: ತಾಯಿಯ ಎದೆಹಾಲು ಗಂಟಲಲ್ಲಿ ಸಿಲುಕಿ ಮಗುವೊಂದು ಮೃತಪಟ್ಟ ಘಟನೆ ಕಾಸರಗೋಡಿನ ಮೊಗ್ರಾಲ್ ಪೇರಾಲ್‌ನಲ್ಲಿ ನಡೆದಿದೆ. ಮೊಗ್ರಾಲ್ ಪೇರಾಲ್ ಮಡಿಮೊಗರು ನಿವಾಸಿ ಮುಹಮ್ಮದ್ ರಾಹಿದ್-ಮರಿಯಮ್ಮತ್ ಸಾಬಿರಾ ದಂಪತಿ ಪುತ್ರ, 50 ದಿನಗಳ ಲಸಿನ್ ಇಮಾತ್ ಮೃತಪಟ್ಟವ.

ಸೋಮವಾರ ರಾತ್ರಿ ಮನೆಯಲ್ಲಿ ಈ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ತಕ್ಷಣ ನಗರದ ಸರ್ಕಾರಿ ಜನರಲ್ ಆಸ್ಪತ್ರೆಗೆ ಸಾಗಿಸಿದರೂ, ಅಷ್ಟರಲ್ಲಿ ಕೊನೆಯುಸಿರೆಳೆದಿದೆ.

ಒಂದೇ ರೀತಿಯ ಘಟನೆಯ ಪರಿಣಾಮ 2 ದಿನಗಳಲ್ಲಿ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಭಾನುವಾರ ರಾತ್ರಿ ಬೇಕಲ ಹದಾದ್ ನಗರ ನಿವಾಸಿ ಮುಹಮ್ಮದ್ ಹನೀಪ ಅವರ ಗಂಡು ಮಗು ತಾಯಿಯ ಎದೆಹಾಲು ಗಂಟಲಿಗೆ ಸಿಲುಕಿ ಮೃತಪಟ್ಟಿತ್ತು.

Share News