canaratvnews

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ 36ನೇ ಪದವಿ ಪ್ರದಾನ ಸಮಾರಂಭ

ಮಂಗಳೂರು, ಏಪ್ರಿಲ್ 16: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 36ನೇ ಪದವಿ ಪ್ರದಾನ ಸಮಾರಂಭವು ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗುರುವಾರ ಅತ್ಯಂತ ಸಂಭ್ರಮದಿಂದ ಜರುಗಿತು.ಕಾರ್ಯಕ್ರಮಕ್ಕೆ ಪ್ರವೇಶದ್ವಾರದಿಂದ ಆಕರ್ಷಕ ಬ್ಯಾಂಡ್ ಹಾಗೂ ಭವ್ಯ ಮೆರವಣಿಗೆಯ ಮೂಲಕ ಚಾಲನೆ ನೀಡಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಸಂಸ್ಥೆಯ ಅಧ್ಯಕ್ಷರಾದಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ,ಮುಖ್ಯ ಅತಿಥಿಗಳಾದ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ ಹಾಗೂ ಗಣ್ಯರನ್ನು ಸಾಂಪ್ರದಾಯಿಕ ಪೂರ್ಣಕುಂಭ
ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳ ಲಾಯಿತು.ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ಫೌಸ್ಟಿನ್ ಲುಕಸ್ ಲೋಬೊರವರು,ಸ್ವಾಗತ ಭಾಷಣದಲ್ಲಿ ಜ್ಞಾನ, ಪರಿಶ್ರಮ ಮತ್ತು ಧೈರ್ಯದ ಮೌಲ್ಯಗಳನ್ನು ಒತ್ತಿಹೇಳಿದರು ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ 146 ವರ್ಷದ ಪರಂಪರೆ ಹಾಗೂ ಹೋಮಿಯೋಪಥಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿ, ಪದವೀದರರು ಕರುಣೆಯಿಂದ ಸೇವೆ ಸಲ್ಲಿಸಿ, ಜವಾಬ್ದಾರಿಯುತ ಚಿಕಿತ್ಸಕರಾಗಿ ತಮ್ಮ ಪಾತ್ರವನ್ನು ನಿಭಾಯಿಸುವಂತೆ ಪ್ರೇರೇಪಿಸಿದರು ಮತ್ತು ಅವರು ಕಾರ್ಯಕ್ರಮದ ಮುಖ್ಯ ಅತಿಥಿಯನ್ನು ಪರಿಚಯಿಸಿ ಸ್ವಾಗತಿಸಿದರು.ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ಅವರು 2025-26ನೇ ಶೈಕ್ಷಣಿಕ ವರ್ಷದ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಚಟುವಟಿಕೆಗಳ ವಿವರಣಾತ್ಮಕ ವಾರ್ಷಿಕ ವರದಿಯನ್ನು ಮಂಡಿಸಿದರು.ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಜನವರಿ 6, 2026 ರಿಂದ ಜನವರಿ 5, 2028ರ ಅವಧಿಯವರೆಗೆ NABH ಆಯುಷ್ ಪ್ರವೇಶ ಮಟ್ಟದ ಮಾನ್ಯತೆ ನೀಡಲಾಗಿದೆ ಎಂದು ಘೋಷಿಸಲು ಸಂಸ್ಥೆಯು ಹೆಮ್ಮೆಪಡುತ್ತದೆ. ಇದಲ್ಲದೆ, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿರುವ ವೈದ್ಯಕೀಯ ಪ್ರಯೋಗಾಲಯ’ ವು ಏಪ್ರಿಲ್ 1, 2026 ರಿಂದ ಮಾರ್ಚ್ 31, 2030ರವರೆಗಿನ ಅವಧಿಗೆ NABL ನೊಂದಿಗೆ ಮಾನ್ಯತೆಯನ್ನು ಪಡೆದಿದೆ. ಇದರ ಪ್ರಯುಕ್ತ ಕಾರ್ಯಕ್ರಮದಲ್ಲಿ ನಿರ್ದೇಶಕರಿಗೆ NABH ಮತ್ತು NABL ಪ್ರಮಾಣಪತ್ರಗಳನ್ನು ಹಸ್ತಾಂತರಿಸಲಾಯಿತು.ಸಂಸ್ಥೆಯ ಅಭಿವೃದ್ಧಿಯ ಮಹತ್ವದ ಹೆಜ್ಜೆಯಾಗಿ ಗುರುತಿಸಲ್ಪಡುವ ನವೀನ ಸೌಂದರ್ಯವರ್ಧಕ ಉತ್ಪನ್ನಗಳನ್ನು ಪರಿಚಯಿಸುವ ಉದ್ದೇಶದಿಂದ, FMHPD ಆಡಳಿತಾಧಿಕಾರಿ ವಂದನೀಯ ಫಾ. ನೆಲ್ಸನ್ ಧೀರಜ್ ಪಾಯಸ್ ಅವರಿಂದ ಹೊಸ HPD ಉತ್ಪನ್ನಗಳಾದ ‘ಮುಲ್ಲರ್ಸ್ ಕಾಸ್ಕೆ ಸ್ಕೂಟಿಕಲ್ಸ್’ ಅನ್ನು ಬಿಡುಗಡೆ ಮಾಡಲಾಯಿತು.ಮುಖ್ಯ ಅತಿಥಿ ಡಾ ಕೆ ಎಸ್ ಗಂಗಾಧರ ಸೋಮಯಾಜಿ ಅವರು ಪದವೀಧರರನ್ನು ಸನ್ಮಾನಿಸಿ ಪ್ರಮಾಣಪತ್ರಗಳನ್ನು ನೀಡಿದರು. ನಂತರ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ಅವರ ನೇತೃತ್ವದಲ್ಲಿ ಪ್ರಮಾಣ ವಚನ ಬೋಧಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವಂತಹ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ಮಾನ್ಯಾ ಸ್ನಾತಕೋತ್ತರ ಪದವೀಧರರನ್ನು ಸನ್ಮಾನಿಸಿ ಪ್ರಮಾಣಪತ್ರಗಳನ್ನು ನೀಡಿದರು.ಈ ಸಂದರ್ಭದಲ್ಲಿ ಒಟ್ಟು 111 ವಿದ್ಯಾರ್ಥಿಗಳು, 92 ಹೋಮಿಯೋಪಥಿ ಪದವೀಧರರು ಮತ್ತು 19 ಸ್ನಾತಕೋತ್ತರ ಪದವೀಧರರಿಗೆ ಪದವಿಯನ್ನು ನೀಡಲಾಯಿತು.ಮುಖ್ಯ ಅತಿಥಿಗಳಾದ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ ಅವರು ಈ ದಿನವನ್ನು ವಿಶೇಷ ಮೈಲಿಗಲ್ಲು ಎಂದು ವರ್ಣಿಸಿ, ಪದವೀಧರರು ಈಗ ಮಾನ್ಯತೆ ಪಡೆದ ವೈದ್ಯರಾಗಿ ರೂಪಾಂತರಗೊಳ್ಳುತ್ತಿರುವುದಾಗಿ ಹೇಳಿದರು. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಅಭಿನಂದಿಸಿ. ಅವರು ಪ್ರತಿಷ್ಠಿತ ಸಂಸ್ಥೆಯಿಂದ ಪದವಿ ಪಡೆಯುತ್ತಿರುವುದನ್ನು ಉಲ್ಲೇಖಿಸಿದರು. ಹೋಮಿಯೋಪಥಿಯ ಸಹಾನುಭೂತಿ ಹಾಗೂ ಸಮಗ್ರ (ಹೋಲಿಸ್ಟಿಕ್) ದೃಷ್ಟಿಕೋನವನ್ನು ವಿಶೇಷವಾಗಿ ರೋಗಿಯ ವಿವರ ಸಂಗ್ರಹಣೆಯ ಮಹತ್ವವನ್ನು ಅವರು ಒತ್ತಿಹೇಳಿದರು. ಮುಂದಿನ ವಿದ್ಯಾಭ್ಯಾಸ ಮತ್ತು ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದರು ಹಾಗೂ ಸದಾ ರೋಗಿಗಳನ್ನು ತಮ್ಮ ಮಾತೃಸಂಸ್ಥೆಯನ್ನು ಶಿಕ್ಷಕರನ್ನು ಹಾಗೂ ತಮ್ಮ ಪೋಷಕರನ್ನು ಗೌರವಿಸಬೇಕು ಎಂದು ಹೇಳಿದರು.ಪದವೀಧರರ ಪರವಾಗಿ, ಶ್ರೀಕನ್ಯ ಕೆ ಎಚ್ ಸಂಸ್ಥೆಗಳಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ FMCI ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಾಲ್ಯಾನ್ಹಾ ಅವರು ವಿಶ್ವವಿದ್ಯಾಲಯದ Rank ಪಡೆದ ವಿದ್ಯಾರ್ಥಿಗಳು, ವಿಷಯವಾರು ಬಹುಮಾನ ವಿಜೇತರು ಮತ್ತು ಶೈಕ್ಷಣಿಕ ಹಾಗೂ ಪೂರಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ 8 ಸಂಸ್ಥಾ ಮಟ್ಟದ ಬಹುಮಾನಗಳು, 12 ಪದವಿ ಮಟ್ಟದ ಮತ್ತು 5 ಸ್ನಾತಕೋತ್ತರ ವಿಷಯವಾರು ಬಹುಮಾನಗಳನ್ನು ವಿತರಿಸಲಾಯಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾಲೇಜು 4 ಪದವಿ ಮತ್ತು 12 ಸ್ನಾತಕೋತ್ತರ Rank ಪಡೆದವರನ್ನು ಕೂಡ ಈ ಸಂದರ್ಭದಲ್ಲಿ ಗೌರವಿಸಲಾಯಿತು.ಹೋಮಿಯೋಪಥಿಕ್ ಮಟೀರಿಯಾ ಮೆಡಿಕಾ (MD) ವಿಭಾಗದಲ್ಲಿ RGUHS ಚಿನ್ನದ ಪದಕವನ್ನು ಡಾ. ಮೆರ್ಲಿನ್ ಲಿಜಾ ಜೇಮ್ಸ್ ಅವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹೋಮಿಯೋಪಥಿಯಲ್ಲಿ ಅತ್ಯುತ್ತಮ ಕ್ವಾಲಿಟಿ ಎಂ.ಡಿ ಡಿಸರ್ಟೇಶನ್ ಇನ್ ಹೋಮಿಯೋಪಥಿ CCRH ವಿದ್ಯಾರ್ಥಿವೇತನವನ್ನು ಡಾ. ಶ್ರೇಯಾಂಕ್ ಎಸ್ ಕೋಟೀನ್ ಎಂ.ಡಿ (ಹೋಂ) ಪೀಡಿಯಾಟ್ರಿಕ್ಸ್ ಅವರಿಗೆ ನೀಡಲಾಯಿತು.ಬ್ಯಾಚ್ 2020-21 ರ ಪದವಿ ಪಡೆಯುವ ಪದವೀಧರರಲ್ಲಿ ದಕ್ಷಿಣ ವಲಯದ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಮೂರು ಬಾರಿ RGUHS ಬ್ಯಾಡ್ಮಿಂಟನ್ ಮಹಿಳಾ ತಂಡವನ್ನು ಪ್ರತಿನಿಧಿಸಿದ ಕೆ. ಕಾದಂಬರಿ, ಅಖಿಲ ಭಾರತ ವಿಶ್ವವಿದ್ಯಾಲಯ ಚಾಂಪಿಯನ್‌ಶಿಪ್‌ನಲ್ಲಿ RGUHS ಅಥ್ಲೆಟಿಕ್ ತಂಡವನ್ನು ಪ್ರತಿನಿಧಿಸಿದ ಶಿಥಿಲ್ ಜೋಸೆಫ್ ಮತ್ತು ಅಖಿಲ ಭಾರತ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ RGUHS ಟಗ್ ಆಫ್ ವಾರ್ ಮಹಿಳಾ ತಂಡವನ್ನು ಪ್ರತಿನಿಧಿಸಿದ ಅಲ್ಲಿಯಾ ಪರ್ಲ್ ರೊಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು.2017-18 FMHMC ಹಳೆಯ ವಿದ್ಯಾರ್ಥಿಗಳಿಂದ ಹಾಗೂ ದಿವಂಗತ ಡಾ. ಜಾನು ಪರ್ಲಿ ಶ್ಯಾರನ್ ಅವರ ಪೋಷಕರಿಂದ ಪ್ರಾಯೋಜಿತವಾಗಿರುವ “ಡಾ. ಜಾನು ಪರ್ಲಿ ಶ್ಯಾರನ್ ಸ್ಮಾರಕ ಸಂಶೋಧನಾ ಪ್ರಶಸ್ತಿ” ಯನ್ನು ಸಂಶೋಧನೆ ಮತ್ತು ಪ್ರಕಟಣೆಗಳಲ್ಲಿ ವಿಶಿಷ್ಟ ಸಾಧನೆ ತೋರಿದ, ಅತ್ಯುತ್ತಮ ಔಟ್ ಗೋಯಿಂಗ್ ವಿದ್ಯಾರ್ಥಿ ಸಂಶೋಧನಾ ಪ್ರಶಸ್ತಿಯನ್ನು 2020-21 ಬ್ಯಾಚ್ ನ ಡಾ. ಕೆ. ಕಾದಂಬರಿ ಅವರಿಗೆ ನೀಡಲಾಯಿತು.1997ರ ಹಳೆಯ ವಿದ್ಯಾರ್ಥಿಗಳಿಂದ ಸ್ಥಾಪಿತವಾದ ವರ್ಷದ “ದಿ ಅವಾರ್ಡ್ ಆಫ್ ಎಕ್ಸಲೆನ್ಸ್ ಫಾರ್ ಅಂಡರ್‌ಗ್ರಾಜುವೇಟ್ ಸ್ಪೂಡೆಂಟ್ ಪ್ರಶಸ್ತಿಯನ್ನು 2020-21 ಬ್ಯಾಚ್ ನ ಡಾ ಶ್ರೀಕನ್ಯ ಕೆ ಎಚ್ ಅವರಿಗೆ ನೀಡಲಾಯಿತು.6ನೇ ಬ್ಯಾಚ್ ಮುಲ್ಲೇರಿಯನ್ಸ್ ಪ್ರಾಯೋಜಿತ, “ಡಾ. ಸುಮೋದ್ ಜಾಕೋಬ್ ಸೊಲೊಮನ್ ಅವಾರ್ಡ್ ಆಫ್ ಎಕ್ಸಲೆನ್ಸ್ ಫಾರ್ ಪೋಸ್ಟ್ಗ್ರಾಜುವೇಟ್ ಸ್ಪೂಡೆಂಟ್” 2022-23 ಬ್ಯಾಚ್ ನ ಡಾ. ಅಕ್ಷರಾ ಟಿ. ಅವರಿಗೆ ನೀಡಲಾಯಿತು.FMHMC ಮಾಜಿ ಪ್ರಾಂಶುಪಾಲರಾದ ಡಾ. ಎಸ್. ಕೆ. ತಿವಾರಿ ಅವರಿಂದ, ಅವರ ಪ್ರಿಯ ಪತ್ನಿ ದಿವಂಗತ ಶ್ರೀಮತಿ ಸವಿತಾ ತಿವಾರಿ ಅವರ ಸ್ಮರಣಾರ್ಥ ಪ್ರಾಯೋಜಿತ “ದಿ ಬೆಸ್ಟ್ ಔಟ್ ಗೋಯಿಂಗ್ ಪೋಸ್ಟ್ ಗ್ರಾಜುವೇಟ್ ಅವಾರ್ಡ್” ಪ್ರಶಸ್ತಿಯನ್ನು 2022-23 ಬ್ಯಾಚ್ ನ ಡಾ. ಅಕ್ಷಯ್ ಜೆ ನಾಯರ್ ಅವರಿಗೆ ನೀಡಲಾಯಿತು.“ಫಾದರ್ ಮುಲ್ಲರ್ ಚಾರಿಟೇಬಲ್ ಇನ್ನಿ ಟ್ಯೂಷನ್ಸ್ ಅಧ್ಯಕ್ಷರ ಚಿನ್ನದ ಪದಕ’ ವನ್ನು ಬೆಸ್ಟ್ ಔಟ್‌ಗೋಯಿಂಗ್ ಅಂಡರ್‌ಗ್ರಾಜುವೇಟ್’ ಪ್ರಶಸ್ತಿಯನ್ನು 2020-21 ಬ್ಯಾಚ್ ನ ಡಾ. ಅಖಿಲ್ ಮೊಂತೇರೊ ಅವರಿಗೆ ನೀಡಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ ಕೆ ಎಸ್ ಗಂಗಾಧರ ಸೋಮಯಾಜಿಯವರನ್ನು ಅತೀ ವಂ. ಡಾ.ಪೀಟ‌ರ್ ಪೌಲ್ ಸಲ್ಮಾನ್ಯಾ ರವರು ಸನ್ಮಾನಿಸಿದರು.ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ಮಾನ್ಮಾರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪದವೀಧರರು, ಸ್ನಾತಕೋತ್ತರರು ಮತ್ತು ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭವನ್ನು ಒಂದು ಮೈಲುಗಲ್ಲು ಹಾಗೂ ಹೊಣೆಗಾರಿಕೆಯ ಕ್ಷಣವೆಂದು ವಿವರಿಸಿದರು ಮತ್ತು ಸ್ಯಾಮ್ಯುಯೆಲ್ ಹಾನಿಮನ್ ರವರ ಪರಂಪರೆಯನ್ನು ಸ್ಮರಿಸಿ, ವೇಗವಾಗಿ ಅಭಿವೃದ್ಧಿಯಾಗುತ್ತಿರುವ ವಿಶ್ವದಲ್ಲಿ ನವೀನತೆ ಮತ್ತು ಸಂಶೋಧನೆಯ ಅಗತ್ಯವನ್ನು ಒತ್ತಿಹೇಳಿದರು. ಜೊತೆಗೆ, ವ್ಯಕ್ತಿಗತ ಹಾಗೂ ಸಹಾನುಭೂತಿಯುತ ಆರೈಕೆಯಲ್ಲಿ ಹೋಮಿಯೋಪಥಿಯ ವಿಶೇಷತೆಯನ್ನು ಉಲ್ಲೇಖಿಸಿದರು.ನಂತರ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ಫೌಸ್ಟಿನ್ ಲುಕಸ್ ಲೋಬೊ, ಕಾರ್ಯಕ್ರಮದ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ಮಾನ್ಹಾ ಅವರನ್ನು ಕೃತಜ್ಞತೆಯ ಸಂಕೇತದೊಂದಿಗೆ ಸನ್ಮಾನಿಸಿದರು.

FMHMC&H ಆಡಳಿತಾಧಿಕಾರಿ ವಂದನೀಯ ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ ವಂದಿಸಿದರು. ಡಾ. ಮೇಬಲ್ ಪಿ ಅಂದ್ರದೆ ಮತ್ತು ಡಾ. ಶ್ರೇಯಾಂಕ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭವು ಸಂಸ್ಥೆಯ ಗೀತೆಯೊಂದಿಗೆ ಮುಕ್ತಾಯಗೊಂಡಿತು.
ವೇದಿಕೆಯಲ್ಲಿ ವಂದನೀಯ ಅಶ್ವಿನ್ ಕ್ರಾಸ್ತಾ, ಡಾ. ವಿಲ್ಮಾ ಮೀರಾ ಡಿಸೋಜಾ, ಡಾ. ಗಿರೀಶ್ ನವಾಡ ಯು.ಕೆ. ಮತ್ತು ಡಾ. ರೆಶೆಲ್ ನೊರೊನ್ಹಾ ಉಪಸ್ಥಿತರಿದ್ದರು.
Share News
Exit mobile version