canaratvnews

ಉಪ್ಪಿನಂಗಡಿ: 20ರ ಹರೆಯದ ಯುವತಿ ನಾಪತ್ತೆ

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮಜಿಕುಡೇಲು ಎಂಬಲ್ಲಿನ ನಿವಾಸಿ ಸುಪ್ರೀತಾ(20) ಎಂಬಾಕೆ ಮಂಗಳವಾರ ನಸುಕಿನಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿವಂಗತ ಶೀನಪ್ಪ ಎಂಬವರ ಮಗಳಾಗಿರುವ ಈಕೆ ಸೋಮವಾರ ರಾತ್ರಿ ಎಂದಿನಂತೆ ಮಲಗಿದ್ದವಳು ಮಂಗಳವಾರ ನಸುಕಿನ ವೇಳೆ ಕಾಣಿಸದೇ ಇದ್ದು, ಮೊಬೈಲ್ ಫೋನ್ ಕರೆಯೂ ಸ್ವೀಕರಿಸಿರಲಿಲ್ಲ. ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಆಕೆಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಹತ್ತನೇ ತರಗತಿಯ ವರೆಗೆ ಕಲಿತಿರುವ ಈಕೆ 4 ಅಡಿ 6 ಇಂಚು ಎತ್ತರವಿದ್ದು, ಸಪೂರ ಶರೀರ, ಉರುಟು ಮುಖ ವನ್ನು ಹೊಂದಿರುತ್ತಾಳೆ. ಕನ್ನಡ ತುಳು ಭಾಷೆಯನ್ನು ಮಾತನಾಡುತ್ತಾಳೆ. ಈಕೆಯ ಬಗ್ಗೆ ತಿಳಿದವರು ಉಪ್ಪಿನಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಠಾಣಾಧಿಕಾರಿ ಸುತೇಶ್ ಎಸ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Share News
Exit mobile version