• Home  
  • ಬೆಳ್ತಂಗಡಿ: ನಕಲಿ ಚಿನ್ನ ಅಡವಿಟ್ಟು ಸಾಲ ಪಡೆಯಲು ಬಂದ ಇಬ್ಬರು ಅಂದರ್‌
- DAKSHINA KANNADA - HOME - LATEST NEWS

ಬೆಳ್ತಂಗಡಿ: ನಕಲಿ ಚಿನ್ನ ಅಡವಿಟ್ಟು ಸಾಲ ಪಡೆಯಲು ಬಂದ ಇಬ್ಬರು ಅಂದರ್‌

ಬೆಳ್ತಂಗಡಿ: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘ ಮಡಂತ್ಯಾರು ಶಾಖೆಯಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಪ್ರಮೋದ್ ಪಿ. (50) ಹಾಗೂ ಉಳಿ ಗ್ರಾಮದ ಅಬ್ದುಲ್ ನಝೀರ್ (43) ಬಂಧಿತರು. ಪ್ರಕರಣದ ವಿವರ; ದಿನಾಂಕ: 02.02.2026 ರಂದು ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಮಡಂತ್ಯಾರು ಶಾಖೆಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 2 ಗ್ರಾಹಕರು ಬಂದು […]

Share News

ಬೆಳ್ತಂಗಡಿ: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘ ಮಡಂತ್ಯಾರು ಶಾಖೆಯಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಪ್ರಮೋದ್ ಪಿ. (50) ಹಾಗೂ ಉಳಿ ಗ್ರಾಮದ ಅಬ್ದುಲ್ ನಝೀರ್ (43) ಬಂಧಿತರು.

ಪ್ರಕರಣದ ವಿವರ; ದಿನಾಂಕ: 02.02.2026 ರಂದು ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಮಡಂತ್ಯಾರು ಶಾಖೆಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 2 ಗ್ರಾಹಕರು ಬಂದು ಅದರಲ್ಲಿ ಆಪಾದಿತ ಅಬ್ದುಲ್ ನಝೀರ್ ಎಂಬಾತನ ಹೆಸರಿನಲ್ಲಿ ಚಿನ್ನದ ಸರ ಅಡವಿಡಲು ಇರುವುದಾಗಿ ತಿಳಿಸಿದಂತೆ 3 ಚಿನ್ನದ ಸರಗಳನ್ನು ನೀಡಿದ್ದು, ಈ ಚಿನ್ನವನ್ನು ಪರೀವೀಕ್ಷಕರಲ್ಲಿ ಪರಿಶೀಲನೆ ನಡೆಸಿದಾಗ, ಅದರಲ್ಲಿ ಮೂರು ಚಿನ್ನದ ಸರಗಳು ನಕಲಿ ಎಂದು ಸಾಬೀತಾಗಿದೆ.

ಈ ಬಗ್ಗೆ ಬ್ರಾಂಚ್ ನ ವ್ಯವಸ್ಥಾಪಕರು ನೀಡಿದ ದೂರಿನ ಅನ್ವಯ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿಕೊಂಡು ತನಿಖೆ ನಡೆಸಲಾಗಿದ್ದು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share News