LATEST NEWS

ನ.8ರಂದು ಎಂಎಲ್‌ಸಿ ಐವನ್ ಡಿ’ಸೋಜಾ ನೇತೃತ್ವದಲ್ಲಿ 12ನೇ ವರ್ಷದ ದೀಪಾವಳಿ ‘ಭಾವೈಕ್ಯತೆಯ ಸಂಭ್ರಮ-2026’

ಮಂಗಳೂರು, ನ.6: ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಆಯೋಜಿಸಲಾಗಿರುವ 12ನೇ ವರ್ಷದ ದೀಪಾವಳಿ ಸಂಭ್ರಮದ “ಭಾವೈಕ್ಯತೆಯ ಸಂಭ್ರಮ-2026” ಕಾರ್ಯಕ್ರಮವು ನವೆಂಬರ್ 8ರ ಭಾನುವಾರ ಜರುಗಲಿದೆ.

ನಗರದ ಕದ್ರಿ ಪಾರ್ಕ್ ರಸ್ತೆಯ ಶ್ರೀ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನ.8ರ ಭಾನುವಾರ ಮಧ್ಯಾಹ್ನ 1:30ಕ್ಕೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ 3:00 ಗಂಟೆಗೆ ಮಹತ್ವದ ಸಭಾ ಕಾರ್ಯಕ್ರಮವು ನಡೆಯಲಿದೆ.

ನಾಡಿನ ಸೌಹಾರ್ದತೆ ಮತ್ತು ಧಾರ್ಮಿಕ ಸಾಮರಸ್ಯವನ್ನು ಸಾರುವ ಉದ್ದೇಶದಿಂದ ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯ 12ನೇ ವರ್ಷದ ಸಂಭ್ರಮಕ್ಕೆ ಸಾರ್ವಜನಿಕರು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಬೇಕಾಗಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ಅವರು ಪ್ರೀತಿಪೂರ್ವಕವಾಗಿ ಆಹ್ವಾನಿಸಿದ್ದಾರೆ.

Share News