ಮಂಗಳೂರು: ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ಯುವಜನತೆಯನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (YatiCorp India Pvt Ltd) ಅತ್ಯಂತ ವಿಶಿಷ್ಟವಾದ ‘AI ಕಾರ್ಡ್’ ಯೋಜನೆಯನ್ನು ಜಾರಿಗೆ ತಂದಿದೆ. ಈ ಮಹತ್ವದ ಯೋಜನೆಯಲ್ಲಿ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ (KPT) ಮಂಗಳೂರು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕೆಪಿಟಿಯೇ ಈ ಕೋರ್ಸ್‌ಗಳಿಗೆ ಪರೀಕ್ಷೆ ನಡೆಸಿ ಸರ್ಕಾರಿ ಮಾನ್ಯತೆಯುಳ್ಳ ಪ್ರಮಾಣಪತ್ರವನ್ನು ನೀಡಲಿದೆ.

ಇಂದಿನ ಮಾರುಕಟ್ಟೆಯಲ್ಲಿ ಸುಮಾರು 1.5 ಲಕ್ಷ ರೂಪಾಯಿಗಳಿಗೂ ಅಧಿಕ ವೆಚ್ಚದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಡೇಟಾ ಅನಾಲಿಟಿಕ್ಸ್ ಹೈಟೆಕ್ ಕೋರ್ಸ್‌ಗಳನ್ನು ಸಾಮಾನ್ಯ ಜನರಿಗೂ ತಲುಪಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಯಾವುದೇ ಗುಪ್ತ ಶುಲ್ಕವಿಲ್ಲದೆ, ಕೇವಲ ₹499ಕ್ಕೆ ಎಐ ಕಾರ್ಡ್ ಪಡೆಯುವ ಮೂಲಕ ಯಾರು ಬೇಕಾದರೂ ಈ ಉನ್ನತ ತಾಂತ್ರಿಕ ಕೌಶಲ್ಯಗಳನ್ನು, ಜೀವನಪರ್ಯಂತ ಕಲಿಯಬಹುದು.
ತರಕಾರಿ ಚೀಲ ಹೊತ್ತ ನೋವೇ ‘AI ಕಾರ್ಡ್’ ಸೃಷ್ಟಿಗೆ ಪ್ರೇರಣೆ!”
ಈ ಕ್ರಾಂತಿಕಾರಿ ಬದಲಾವಣೆಯ ಹಿಂದಿನ ಶಕ್ತಿ ಯತಿಕಾರ್ಪ್‌ನ ಸ್ಥಾಪಕ ಮತ್ತು ಸಿಇಒ ಯತೀಶ ಕೆ.ಎಸ್. ಅವರು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾ, “2014ರಲ್ಲಿ ತಾಂತ್ರಿಕ ಶಿಕ್ಷಣ ಪಡೆಯಲು ಮಂಗಳೂರಿಗೆ ಬಂದಾಗ ಹಣದ ಕೊರತೆಯಿಂದಾಗಿ ಸೆಂಟ್ರಲ್ ಮಾರ್ಕೆಟ್‌ನಲ್ಲಿ ತರಕಾರಿ ಚೀಲಗಳನ್ನು ಹೊರುವ ಕೆಲಸ ಮಾಡಿದ್ದೇನೆ. ಹಗಲಿಡೀ ಕಲಿಕೆ, ರಾತ್ರಿಯಿಡೀ ಕೆಲಸ ಮಾಡಿ ಕೇವಲ 2-3 ಗಂಟೆ ನಿದ್ರಿಸುತ್ತಿದ್ದೆ. ಅಂದು ಅನುಭವಿಸಿದ ಆ ನೋವೇ ಇಂದು ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಂತ ಕಡಿಮೆ ದರದಲ್ಲಿ ತಾಂತ್ರಿಕ ಶಿಕ್ಷಣ ಸಿಗಬೇಕು ಎಂಬ ಈ ಸಂಕಲ್ಪಕ್ಕೆ ಕಾರಣವಾಯಿತು,” ಎಂದು ಭಾವುಕರಾಗಿ ನುಡಿದರು.
ಉದ್ಯೋಗ ಸೃಷ್ಟಿ ಮತ್ತು ಯುವ ಸಬಲೀಕರಣ
ಮುಂದಿನ 4 ವರ್ಷಗಳಲ್ಲಿ ಜಾಗತಿಕವಾಗಿ 2 ರಿಂದ 5 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಯುವಕರು ಏ.ಐ ಕಲಿತು ಈ ಅವಕಾಶಗಳನ್ನು ಬಾಚಿಕೊಳ್ಳಬೇಕು ಎಂಬುದು ಸಂಸ್ಥೆಯ ಗುರಿ. ಈಗಾಗಲೇ ಭಾರತ ಸೇರಿದಂತೆ ಅಮೆರಿಕ, ದುಬೈ ಮತ್ತು ಬ್ರಿಟನ್‌ನಲ್ಲಿ 75,000ಕ್ಕೂ ಹೆಚ್ಚು ಎ ಐ ಕಾರ್ಡ್ ಬಳಕೆದಾರರಿದ್ದು ಈ ವೇದಿಕೆಯ ಮೂಲಕ ಹಲವು ವಿದ್ಯಾರ್ಥಿಗಳು ₹8 ರಿಂದ ₹10 ಲಕ್ಷದ ವಾರ್ಷಿಕ ಪ್ಯಾಕೇಜ್ ಜಾಬ್ ಪಡೆದಿದ್ದಾರೆ. ಈ ಯಶಸ್ಸನ್ನು ಕಂಡು ಹಲವು ಕಾಲೇಜುಗಳು ತಮ್ಮ ಕ್ಯಾಂಪಸ್ ನಲ್ಲಿ AI ಕಾರ್ಡ್ ಅನ್ನು ಖಡ್ಡಾಯ ಗೊಳಿಸಿ ‘AI ಎನೇಬಲ್ಡ್ ಕ್ಯಾಂಪಸ್’ ಎಂಬ ಮಾನ್ಯತೆಯನ್ನು ಪಡೆದಿದ್ದಾರೆ
ಒಂಬತ್ತು ತಿಂಗಳ ದೀರ್ಘಾವಧಿಯ ಕೋರ್ಸ್‌ಗಳಿಗೂ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ. ಗ್ರಾಮೀಣ ಭಾಗದ ಯುವಜನತೆಯ ಉದ್ಯೋಗಾವಕಾಶ ಹೆಚ್ಚಿಸುವ ಈ ಯೋಜನೆಯು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ, ಆಸಕ್ತರು www.yaticorp.com ಗೆ visit ಮಾಡಿ ನೋಂದಾಯಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಹರೀಶ ಶೆಟ್ಟಿ, ಪ್ರಾಂಶುಪಾಲರು, ಕೆಪಿಟಿ ಮಂಗಳೂರು. ಹರೀಶ್ ಸಿ.ಪಿ., ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ. ಯತೀಶ್ ಕೆ.ಎಸ್., ಸ್ಥಾಪಕ ಮತ್ತು ಸಿಇಒ, ಯತಿಕಾರ್ಪ್.a ಪ್ರಖ್ಯಾತ್ ರೈ, ನಿರ್ದೇಶಕರು. ಉಪಸ್ಥಿತರಿದ್ದರು