• Home  
  • *ಯಕ್ಷಧ್ರುವ ಪಟ್ಲ ಫೌಂಡೇಶನ್: ‘ಯಕ್ಷಶಿಕ್ಷಣ’ ಯೋಜನೆಯಡಿ ಶಿಕ್ಷಕರ ಸಮಾಲೋಚನಾ ಸಭೆ*
- DAKSHINA KANNADA - HOME

*ಯಕ್ಷಧ್ರುವ ಪಟ್ಲ ಫೌಂಡೇಶನ್: ‘ಯಕ್ಷಶಿಕ್ಷಣ’ ಯೋಜನೆಯಡಿ ಶಿಕ್ಷಕರ ಸಮಾಲೋಚನಾ ಸಭೆ*

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್( ರಿ.) ಮಂಗಳೂರು ಇದರ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯಡಿ ಕರ್ತವ್ಯ ನಿರತ ಯಕ್ಷಗಾನ ಶಿಕ್ಷಕರ‌ ಸಮಾಲೋಚನಾ‌ ಸಭೆಯು ಬಲ್ಲಾಲ್ ಭಾಗ್ ಬಳಿ ಇರುವ ಪತ್ತುಮುಡಿ ಸಭಾಂಗಣದಲ್ಲಿ ನಡೆಯಿತು. ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ನಿರ್ದೇಶಕರಾದ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿ ಯಕ್ಷಧ್ರುವ ಯಕ್ಷಶಿಕ್ಷಣವು ಪಟ್ಲ ಫೌಂಡೇಶನ್ ನ ಅಭಿವೃದ್ಧಾತ್ಮಕವಾದ ಯೋಜನೆಯಾಗಿದ್ದು ಭವಿತವ್ಯದ ಸುಸಂಸ್ಕೃತ ಪ್ರೇಕ್ಷಕರು ಮತ್ತು ಉತ್ತಮ ಕಲಾವಿದರನ್ನು ತಯಾರುಗೊಳಿಸುವ ನಿಭಾವಣೆಯನ್ನು ಹೊತ್ತ ಯೋಜನೆಯಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಯಕ್ಷಗಾನ […]

Share News

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್( ರಿ.) ಮಂಗಳೂರು ಇದರ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯಡಿ ಕರ್ತವ್ಯ ನಿರತ ಯಕ್ಷಗಾನ ಶಿಕ್ಷಕರ‌ ಸಮಾಲೋಚನಾ‌ ಸಭೆಯು ಬಲ್ಲಾಲ್ ಭಾಗ್ ಬಳಿ ಇರುವ ಪತ್ತುಮುಡಿ ಸಭಾಂಗಣದಲ್ಲಿ ನಡೆಯಿತು.

ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ನಿರ್ದೇಶಕರಾದ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿ ಯಕ್ಷಧ್ರುವ ಯಕ್ಷಶಿಕ್ಷಣವು ಪಟ್ಲ ಫೌಂಡೇಶನ್ ನ ಅಭಿವೃದ್ಧಾತ್ಮಕವಾದ ಯೋಜನೆಯಾಗಿದ್ದು ಭವಿತವ್ಯದ ಸುಸಂಸ್ಕೃತ ಪ್ರೇಕ್ಷಕರು ಮತ್ತು ಉತ್ತಮ ಕಲಾವಿದರನ್ನು ತಯಾರುಗೊಳಿಸುವ ನಿಭಾವಣೆಯನ್ನು ಹೊತ್ತ ಯೋಜನೆಯಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಯಕ್ಷಗಾನ ಶಿಕ್ಷಕರು ಕರ್ತವ್ಯವನ್ನು ನಿರ್ವಹಿಸುವಲ್ಲಿ ಸಫಲತೆಯನ್ನು ಸಾಧಿಸಬೇಕು ಎಂದರು.

ಈ‌ ಸಂದರ್ಭದಲ್ಲಿ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳರು ಕಳೆದ ಶೈಕ್ಷಣಿಕ ವರ್ಷದ ತರಗತಿಯ ಅವಲೋಕನ ಮಾಡಿದರು. ಈ ವೇಳೆ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ನೀತಿಸಂಹಿತೆಯನ್ನು ಪ್ರಸ್ತಾಪಿಸಿ ಚರ್ಚಿಸಲಾಯಿತು.
ಪ್ರಸಕ್ತ ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ತರಗತಿ, ಯಕ್ಷಗಾನ ಶಿಕ್ಷಕರ ಕಾರ್ಯಗಾರ, ಶಾಲಾ ಸಮಿತಿಯ ಸಭೆ ಸಹಿತ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರೀಯ ಸಮಿತಿಯ ಕಾರ್ಯದರ್ಶಿಗಳಾದ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ CA ಸುದೇಶ್ ರೈ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಸಹಿತ ವಿವಿಧ ಪದಾಧಿಕಾರಿಗಳು, ಯಕ್ಷಗಾನ ಶಿಕ್ಷಕರು ಉಪಸ್ಥಿತರಿದ್ದರು. ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಸಂಯೋಜಕ ದೀವಿತ್ ಎಸ್ ಕೆ ಪೆರಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Share News