• Home  
  • ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಆರೋಪಿ ಬಂಧನಕ್ಕೆ ದಲಿತ ಸಂಘಟನೆಗಳ ಆಗ್ರಹ
- DAKSHINA KANNADA - HOME - LATEST NEWS

ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಆರೋಪಿ ಬಂಧನಕ್ಕೆ ದಲಿತ ಸಂಘಟನೆಗಳ ಆಗ್ರಹ

ಮಂಗಳೂರು: ಬಂಟ್ವಾಳ ತಾಲೂಕಿನ ವಿಟ್ಲ ಮಾಣಿಲ ಗ್ರಾಮದ ಮುರುವದಲ್ಲಿ ದಲಿತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ನಿವಾಸಿ ಮಹೇಶ್ ಭಟ್ ಲೈಂಗಿಕ ಕಿರುಕುಳ ನೀಡಿ ಜಾತಿ ನಿಂದನೆ ಎಸಗಿರುವ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಸೆಕ್ಷನ್ ಹಾಗೂ ದಲಿತ ದೌರ್ಜನ್ಯ ಕಾಯಿದೆಯ ಅನ್ವಯ ಪ್ರಕರಣ ದಾಖಲಾಗಿದ್ದರೂ ಕೂಡ ಪೊಲೀಸ್ ಇಲಾಖೆ ಈ ಕುರಿತು ಕ್ರಮ ಜರುಗಿಸದೇ ಇರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.

ಈ ಕುರಿತು ತಕ್ಷಣ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊö.ಕೃಷ್ಣಪ್ಪ ಬಣ ಆಗ್ರಹಿಸಿದೆ.


ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿöಮಾತನಾಡಿ, ಆರೋಪಿ ರಾಜಕೀಯ ಹಾಗೂ ಸಾಮಾಜಿಕವಾಗಿ ಪ್ರಬಲ ವ್ಯಕ್ತಿಯಾಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಲಾದರೂ ಕೂಡ ಪೊಲೀಸರು ಆರೋಪಿಯನ್ನು ಬಂಧಿಸುವ ಕೆಲಸಕ್ಕೆ ಮುಂದಾಗಿಲ್ಲö. ಒಂದೇ ಒಂದು ಬಾರಿ ಆರೋಪಿಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಈ ಕುರಿತು ದ.ಕ. ಎಸ್‌ಪಿಯ ಗಮನಕ್ಕೂ ತರಲಾಗಿದೆ.

ಆರೋಪಿ ಬಾಲಕಿಗೆ ಬೆದರಿಗೆ ಹಾಕಿದ್ದುö, ಮಾನಸಿಕವಾಗಿ ವಿದ್ಯಾರ್ಥಿನಿ ಕುಗ್ಗಿ ಹೋಗಿದ್ದಾಳೆ. ಪ್ರಕರಣ ದಾಖಲಾಗಿ ಒಂದು ವಾರವಾದರೂ ಗಂಭೀರ ಪ್ರಕರಣ ಎಂದೇ ಪೊಲೀಸ್ ಇಲಾಖೆ ಪರಿಗಣಿಸಿಲ್ಲö. ಆರೋಪಿಯ ಪರವಾಗಿಯೇ ಪೊಲೀಸ್ ಇಲಾಖೆ ಸಹಕಾರ ನೀಡುತ್ತಿರುವುದು ಖಂಡನೀಯ. ಆರೋಪಿಯನ್ನು ತಕ್ಷಣ ಬಂಧಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಪ್ರಬಲ ಪ್ರತಿಭಟನೆ ನಡೆಸಲು ಸಮಿತಿ ನಿರ್ಧಾರ ಮಾಡಿದೆ ಎಂದರು.

ಈ ಸಂದರ್ಭ ಸಮಿತಿಯ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಸಂಘಟನಾ ಸಂಚಾಲಕ ಕೃಷ್ಣಾನಂದ ಡಿ, ಖಜಾಂಚಿ ನಾಗೇಶ್ ಚಿಲಿಂಬಿ, ದಲಿತ ಕಲಾ ಮಂಡಳಿಯ ಕಮಲಾಕ್ಷ ಬಜಾಲ್, ಮಂಗಳೂರು ತಾಲೂಕು ಸಂಚಾಲಕ ರಾಘವೇಂದ್ರ ಎಸ್ ಪೇಜಾವರ, ಮಂಗಳೂರು ಸಂಘಟನಾ ಸಂಚಾಲಕ ರುಕ್ಕಯ್ಯ ಕರಂಬಾರು ಉಪಸ್ಥಿತರಿದ್ದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678