ವಿಟ್ಲ: ಗುಡ್ಡೆಯಲ್ಲಿ ಕೋಳಿ ಅಂಕ ನಡೆಸುತ್ತಿದ್ದಾಗ ವಿಟ್ಲ ಪೊಲೀಸರು ದಿಢೀರ್ ಪೊಲೀಸ್ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೋಳಿ ಸಮೇತ ಆರೋಪಿಗಳು ಪರಾರಿಯಾಗಿದ್ದಾರೆ.
ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವ ಪೊಲೀಸರು, ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಹರೆಬೆಟ್ಟು ಎಂಬ ಗುಡ್ಡೆಯಲ್ಲಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿದೆ.
ಈ ವೇಳೆ ಪೊಲೀಸ್ ಉಪ ನಿರೀಕ್ಷಕ ರತ್ನಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ಮರೆಯಲ್ಲಿ ನಿಂತು ಗಮನಿಸಿದಾಗ ಸದ್ರಿ ಗುಡ್ಡೆಯ ಸ್ಥಳದಲ್ಲಿ ಕೆಲವರು ಗುಂಪು ಸೇರಿ ಇಬ್ಬರೂ ಹುಂಜ ಕೋಳಿಗಳನ್ನು ಎದುರು ಬದುರಾಗಿ ಹಿಡಿದುಕೊಂಡು ಕಾಲಿಗೆ ಹರಿತವಾದ ಕೋಳಿ ಬಾಳು ಕಟ್ಟಿ ಕೋಳಿಗಳ ಬಣ್ಣವನ್ನು ಹೇಳುತ್ತಾ ನನ್ನದು ನೂರು ರೂಪಾಯಿ ಎಂಬುದಾಗಿ ಹೇಳುತ್ತಾ ಹಣವನ್ನು ಪಣವಾಗಿಟ್ಟು ಜೂಟಾಟ ಆಡುತ್ತಿದ್ದರು.
ಈ ವೇಳೆ ದಾಳಿ ನಡೆಸಿದಾಗ ಕೋಳಿಗಳ ಸಮೇತ ಆರೋಪಿಗಳು ಪರಾರಿಯಾಗಿದ್ದಾರೆ. ಓಡಿಹೋದವರಲ್ಲಿ ಪ್ರಮುಖ ಕೊರಗ ಶೆಟ್ಟಿ ಮಾಣಿ ಮತ್ತು ಇತರರು ಆಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಾಗಿದೆ.