ಮಂಗಳೂರು: ವಿಶ್ವ ಹಿಂದೂ ಪರಿಷದ್ ಸಹಯೋಗದ ಸೇವಾ ಸಂಸ್ಥೆ ಗೋವನಿತಾಶ್ರಯ ಟ್ರಸ್ಟ್ ಗೋಶಾಲೆಗೆ ಗೋವಿಗಾಗಿ ಹೊರೆಕಾಣೆಕೆ ಅರ್ಪಣಾ ಕಾರ್ಯಕ್ರಮವು ನವೆಂಬರ್ 09 ಜಿಲ್ಲೆಯ ವಿವಿಧ ಸ್ಥಳಗಳಿಂದ ಬಂದ ಹೊರೆಕಾಣಿಕೆ ಮಂಗಳೂರಿನ ಕದ್ರಿ ದೇವಸ್ಥಾನಾದಿಂದ ಗೋಶಾಲೆಗೆ “ಗೋಕಾಣಿಕಾ ಮೆರವಣಿಗೆ’ ನಡೆಯಿತು, ಕರಾವಳಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ ಗಣೇಶ್ ರಾವ್ ರವರು ಹೊರೆಕಾಣಿಕೆ ಮೆರವಣಿಗೆಯನ್ನು ಉದ್ಘಾಟನೆ ಮಾಡಿದರು,

ಹಾಗೂ ಕದ್ರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ ಏ ಜೆ ಶೆಟ್ಟಿ, ಶ್ರೀ ಎಸ್.ಜಿ. ಹೆಗ್ಗಡೆ, ನಿವೃತ್ತ JDPI, ಸಣ್ಣ ಕೈಗಾರಿಕೆ ಇಲಾಖೆ, ಶ್ರೀ ಎಂ. ರವೀಂದ್ರ ಶೇಟ್, ಮ್ಹಾಲಕರು, ಎಸ್.ಎಲ್. ಶೇಟ್ ಡೈಮಂಡ್ಸ್ ಹೌಸ್, ಲೇಡಿಹಿಲ್, ಶ್ರೀ ಸತೀಶ್ ಕುಂಪಲ, ಜಿಲಾಧ್ಯಕ್ಷರು, ಬಿ.ಜೆ.ಪಿ, ದ.ಕ., ಶ್ರೀ ಕರುಣಾಕರನ್, ಕರುಣಾ ಬಿಲ್ಡರ್ಸ್, ಮಂಗಳೂರು, ಡಾ ಎಂಬಿ ಪುರಾಣಿಕ್ ಅಧ್ಯಕ್ಷರು ಶಾರದಾ ಸಮೂಹ ಸಂಸ್ಥೆಗಳು, ಶರಣ್ ಪಂಪುವೆಲ್ ಪ್ರಾಂತ ಸಹಕಾರ್ಯದರ್ಶಿಗಳು, ಶ್ರೀ ಎಚ್ ಕೆ ಪುರುಷೋತ್ತಮ ಜಿಲ್ಲಾಧ್ಯಕ್ಷರು ವಿಶ್ವ ಹಿಂದೂ ಪರಿಷದ್ ಮಂಗಳೂರು ಇವರುಗಳ ಗೌರವ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ನಡೆಯಿತು