ಮಂಗಳೂರು. ಡಿ 15: ಹೊಸ ವರುಷದ ಆಚರಣೆಯ ನೆಪದಲ್ಲಿ ಅಶ್ಲೀಲ ನೃತ್ಯ ಮತ್ತು ಡಿಜೆ ಪಾರ್ಟಿಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದಾಗಿ ಪೊಲೀಸ್ ಆಯುಕ್ತರಿಗೆ ಬಜರಂಗದಳ ಮನವಿ ಮಾಡಿದೆ.

ನಮ್ಮ ಜಿಲ್ಲೆಯನ್ನು ಡ್ರಗ್ಸ್ ಮುಕ್ತವಾಗಿಸಲು ಪೊಲೀಸ್ ಇಲಾಖೆಯು ನಡೆಸುತ್ತಿರುವ ಕಟ್ಟುನಿಟ್ಟಿನ ಕ್ರಮ ಅಭಿನಂದನಾರ್ಹ ಕಳೆದ ಕೆಲವು ತಿಂಗಳುಗಳಿಂದ ಡ್ರಗ್ಸ್ ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಸಾಕಷ್ಟು ಕೆಡಿಮೆಯಾಗಿದೆ ಅಲ್ಲದೆ ಶಾಂತಿ ಕೂಡ ನೆಲೆಸಿದೆ.
ಹೊಸವರುಷದ ಹೆಸರಿನಲ್ಲಿ ಪ್ರತೀವರ್ಷ ಡಿಸೆಂಬರ್ 31 ರಂದು ಹಲವು ಕಾರ್ಯಕ್ರಮಗಳು ನಡೆಯುತ್ತದೆ. ಕೆಲವೊಂದು ಕಾರ್ಯಕ್ರಮ ಪಾರ್ಟಿಗಳಲ್ಲಿ ಅಶ್ಲೀಲ ನೃತ್ಯ, ಮಾಧಕದೃವ್ಯಗಳ ಪಾರ್ಟಿಗಳು, ಡಿಜೆ ಪಾರ್ಟಿಗಳು ನಡೆಯುವ ಸಾಧ್ಯತೆ ಇದೆ. ಇಂತಹ ಕಾರ್ಯಕ್ರಮಗಳಲ್ಲಿ ಡ್ರಗ್ಸ್ ದಂದೆ ಮತ್ತು ಅನೈತಿಕ ಚಟುವಟಿಕೆಗಳು ನಡೆಯುವ ಅವಕಾಶ ಹೆಚ್ಚಾಗಿರುತ್ತದೆ ಅಲ್ಲದೆ ಇಂತಹ ಕಾರ್ಯಕ್ರಮಗಳು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಕೂಡಿದ್ದು ನಮ್ಮ ಸಂಸ್ಕೃತಿಗೆ ಮಾರಕವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಯುವಜನತೆ ದಾರಿತಪ್ಪುವ ಸಾಧ್ಯತೆ ಇದೆ. ಇದರಿಂದ ನಾವೆಲ್ಲರೂ ಉದ್ದೇಶಿಸಿರುವ ಡ್ರಗ್ಸ್ ಮುಕ್ತ ಸಮಾಜದ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಅಡ್ಡಿಯಾಗಬಹುದು ಹಾಗಾಗಿ ಈ ರೀತಿಯ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದಾಗಿ ಹಾಗೂ ತಡರಾತ್ರಿ ತನಕ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದಾಗಿ ಪೊಲೀಸ್ ಆಯುಕ್ತರಿಗೆ ಬಜರಂಗದಳ ಮನವಿ ನೀಡಿದ್ದು, ಅಶಾಂತಿ ಕದಡುವ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಬಜರಂಗದಳ ಆಗ್ರಹಿಸಿದೆ