ಅಬುಧಾಬಿ: ಯುಎಇ ತನ್ನ ಕರೆನ್ಸಿ ದಿರ್ಹಮ್‌ನ ಹೊಸ ಚಿಹ್ನೆಯನ್ನು ಗುರುವಾರ ಅನಾವರಣಗೊಳಿಸಿದೆ ಮತ್ತು ಮುಂಬರುವ ಡಿಜಿಟಲ್ ದಿರ್ಹಮ್ ಕುರಿತು ಪ್ರಮುಖ ನವೀಕರಣಗಳನ್ನು ಪ್ರಕಟಿಸಿದೆ. ಯುಎಇ ಸೆಂಟ್ರಲ್ ಬ್ಯಾಂಕ್ ಪ್ರಕಾರ, ಸರ್ಕಾರಿ ಬೆಂಬಲಿತ ಡಿಜಿಟಲ್ ಕರೆನ್ಸಿ 2025 ರ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ.
ಯುಎಇ ಸೆಂಟ್ರಲ್ ಬ್ಯಾಂಕ್ ರಾಷ್ಟ್ರೀಯ ಹೆಮ್ಮೆಯನ್ನು ಪ್ರತಿಬಿಂಬಿಸಲು ದಿರ್ಹಮ್‌ಗಾಗಿ ಹೊಸ ವಿನ್ಯಾಸವನ್ನು ಪರಿಚಯಿಸಿದ್ದು. ಡಿಜಿಟಲ್ ಆವೃತ್ತಿಯು ಯುಎಇ ಧ್ವಜದ ಬಣ್ಣಗಳಲ್ಲಿ ಚಿಹ್ನೆಯ ಸುತ್ತಲೂ ವೃತ್ತವನ್ನು ಒಳಗೊಂಡಿದೆ.
ಜೊತೆಗೆ ಯುಎಇ ಇತ್ತೀಚೆಗೆ ಹೊಸ 100 ದಿರ್ಹಾಮ್‌ನ ನೋಟು ಬಿಡುಗಡೆ ಮಾಡಿದೆ. ಇದರಲ್ಲಿ ದೇಶದ ಭೂತಕಾಲವನ್ನು ವರ್ತಮಾನದೊಂದಿಗೆ ಸಂಪರ್ಕಿಸುವ ಚಿತ್ರಗಳು ಮತ್ತು ಅದರ ಬಣ್ಣಗಳನ್ನು ಒಳಗೊಂಡಿದೆ, ಜೊತೆ ಜೊತೆಗೆ ದೇಶದ ಪ್ರಮುಖ ಹೆಗ್ಗುರುತುಗಳು ಸೇರಿವೆ. ಈ ಚಿಹ್ನೆಗಳು ಅವುಗಳ ವಿತ್ತೀಯ ಮೌಲ್ಯದ ಜೊತೆಗೆ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿವೆ ಎಂದು ಸ್ಥಳೀಯ ಪತ್ರಿಕೆಗಳು ತಿಳಿಸಿವೆ.