canaratvnews

*ಪೀಠಾಸೀನಾಧಿಕಾರಿಗಳ ಅಧಿಕಾರ ಪರಿಶೀಲನೆ ಸಮಿತಿ: ಯು.ಟಿ.ಖಾದರ್ ನೇಮಕ*

ಮಂಗಳೂರು, ಫೆ.10 :ಸಂವಿಧಾನದ 10ನೇ ಅನುಸೂಚಿ ಹಾಗೂ ಅದಕ್ಕೆ ಅನುಸಾರವಾಗಿ ರಚಿಸಲಾದ ನಿಯಮಾವಳಿಗಳಡಿಯಲ್ಲಿ ಪೀಠಾಸೀನಾಧಿಕಾರಿಗಳ ಅಧಿಕಾರಗಳನ್ನು ಪರಿಶೀಲಿಸುವ ಉದ್ದೇಶದಿಂದ ಲೋಕ ಸಭಾಧ್ಯಕ್ಷ ಓಂ ಬಿರ್ಲಾರವರು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಫರೀದ್ ಅವರನ್ನು ಸಮಿತಿ ಸದಸ್ಯರಾಗಿ ನೇಮಿಸುವ ಮೂಲಕ ಪೀಠಾಸೀನಾಧಿಕಾರಿಗಳ ಸಮಿತಿಯನ್ನು ರಚಿಸಿರುತ್ತಾರೆ. ಸಮಿತಿಯ ಸಭೆಯು ಮಹಾರಾಷ್ಟ್ರ ವಿಧಾನಸಭೆ ಮುಂಬೈಯಲ್ಲಿ ನಡೆಯಿತು.

ಈ ಸಮಿತಿಯಲ್ಲಿ ಮಹಾರಾಷ್ಟ್ರ ವಿಧಾನಸಭೆ ಸಭಾಧ್ಯಕ್ಷ ರಾಹುಲ್ ನಾರ್ವೇಕರ್ (ಅಧ್ಯಕ್ಷರು),ಒಡಿಶಾ
ವಿಧಾನ ಸಭೆ ಸಭಾಧ್ಯಕ್ಷೆ ಸುರಮ ಪಾದಿ (ಸದಸ್ಯರು), ಕರ್ನಾಟಕ ವಿಧಾನ ಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ (ಸದಸ್ಯರು), ನಾಗಲ್ಯಾಂಡ್ ವಿಧಾನಸಭೆ ಸಭಾಧ್ಯಕ್ಷ ಷರಿಂಗೈನ್ ಲಾಂಗ್‍ಕುಮೆರ್ (ಸದಸ್ಯರು). ನೇಮಕಗೊಂಡಿದ್ದಾರೆ

ಸಮಿತಿಯ ಉದ್ದೇಶ: ಸಂವಿಧಾನದ 10ನೇ ಅನುಸೂಚಿ (ಪಕ್ಷಾಂತರ ವಿರೋಧಿ ಕಾಯ್ದೆ) ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಾವಳಿಗಳ ಅಡಿಯಲ್ಲಿ ಪೀಠಾಸೀನಾಧಿಕಾರಿಗಳ ಅಧಿಕಾರ ಮತ್ತು ಕಾರ್ಯವೈಖರಿಯನ್ನು ಮರುಪರಿಶೀಲಿಸುವುದು
Share News
Exit mobile version