ಮಂಗಳೂರು, ಜೂನ್ 20: ಗ್ರಾಮ ಪಂಚಾಯತ್ ನಲ್ಲಿ ತುಳು ಭಾಷೆಯನ್ನು ಸಾಮಾನ್ಯ ಸಭೆ ಸಂದರ್ಭದಲ್ಲಿ ಬಳಸಲು ಅವಕಾಶ ನೀಡದೆ, ಕನ್ನಡಕ್ಕೆ ಆದ್ಯತೆ ನೀಡುವ ಕುರಿತಾಗಿ ಪತ್ರವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪತ್ರ ತೀವ್ರ ಚರ್ಚೆ ಹುಟ್ಟು ಹಾಕಿದೆ.

ಕಾರ್ಕಳ ಮೂಲದ ವ್ಯಕ್ತಿಯೊಬ್ಬ ದ.ಕ. ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗೆ ಪತ್ರ ಬರೆದು, ಗ್ರಾ.ಪಂ. ಸಾಮಾನ್ಯ ಸಭೆಯ ವೇಳೆ ತುಳು ಭಾಷೆಗೆ ಅವಕಾಶ ನೀಡದೆ ಕನ್ನಡದಲ್ಲೇ ಚರ್ಚೆಗೆ ಅವಕಾಶ ನೀಡುವಂತೆ ಪಿಡಿಒ ಗಳಿಗೆ ಆದೇಶ ನೀಡಬೇಕೆಂದು ಕೋರಿ ದ.ಕ. ಜಿ.ಪಂ. ಸ ಇ ಒ ಗೆ ಪತ್ರ ಬರೆದಿದ್ದಾರೆ. ಪತ್ರ ಸ್ವೀಕರಿಸಿರುವ ಜಿಲ್ಲಾ ಪಂಚಾಯತ್ ಕಾರ್ಯಾಲಯ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್ ಇಒ ಗಳಿಗೆ ಪತ್ರ ಬರೆದಿದ್ದು, ಅದರ ಪ್ರತಿ ವೈರಲ್ ಆಗಿದೆ.
ಜಿ.ಪಂ. ಪತ್ರ ಇಂತಿದೆ:
ಕಾರ್ಕಳದ ವ್ಯಕ್ತಿಯ ಮನವಿ ಉಲ್ಲೇಖಿಸಿ, ಅದನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆದರೆ ತುಳು ನಿಷೇಧದ ಬಗ್ಗೆ ಯಾವುದೇ ಆದೇಶವಾಗಲಿ ಉಲ್ಲೇಖವಾಗಲಿ ಜಿ.ಪಂ. ಸಿ ಇ ಒ ಮಾಡಿಲ್ಲ. ಜನ ಅನಾವಶ್ಯಕ ಗೊಂದಲ ಮಾಡಿಕೊಂಡಿದ್ದು ಯಾವುದೇ ಆದೇಶ ನೀಡಿಲ್ಲ ಎಂದು ಕಚೇರಿ ಸ್ಪಷ್ಟಪಡಿಸಿದೆ.
