ಮಂಗಳೂರು, ಎ. 17: ಕೇಂದ್ರ ಸರಕಾರ ಇ.ಡಿ. ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ವಿರೋಧ ಪಕ್ಷದವರ ವಿರುದ್ಧ ಮಾತ್ರವೇ ಇಡಿ ಪ್ರಯೋಗಿಸುತ್ತಿದೆ. ವಿಪಕ್ಷಗಳನ್ನು ದುರ್ಬಳಗೊಳಿಸಲು ಮೋದಿ ಸರಕಾರ ಯತ್ನಿಸುತ್ತಿದೆ. ಇಡಿ ದಾಳಿಯೊಳಗಾದವರು ಬಿಜೆಪಿ ಸೇರಿದರೆ ಅವರು ಕ್ಲೀನ್ ಆಗುತ್ತಾರೆ. ಬಿಜೆಪಿ ಬಳಿ ಭ್ರಷ್ಟರನ್ನು ಕ್ಲೀನ್ ಮಾಡುವ ವಾಶಿಂಗ್ ಮೆಷನ್ ಇದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ವಾಗ್ದಾಳಿ ನಡಿಸಿದ್ದಾರೆ.
ಬುಧವಾರ ಮಂಗಳೂರಿನ ಯೆಯ್ಯಾಡಿ ಬಳಿ ಇರುವ ಜಾರಿ ನಿರ್ದೇಶನಾಲಯ(ಇಡಿ)ದ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೇಂದ್ರದ ಬಿಜೆಪಿ ಸರಕಾರ ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಬಿಜೆಪಿಯ ದುರ್ಬಳಕೆ ವಿರುದ್ಧ ನಿರಂತರ ಹೋರಾಟ ಮುಂದುವರೆಸಲಾಗುವುದು ಎಂದರು.
ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪ್ರಮುಖರಾದ ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲ್ಯಾನ್, ಭರತ್ ಮುಂಡೋಡಿ, ಮನೋರಾಜ್, ಲೋರೆನ್ಸ್ ಡಿಸೋಜಾ, ಹರಿನಾಥ್ ಬೋಂದೇಲ್, ಸುಧೀರ್ ಟಿ.ಕೆ.ಮತ್ತಿತರರು ಇದ್ದರು.