DAKSHINA KANNADA
*ವಂಶಾವಳಿ ತಿಳಿಯುವುದು ಕುತೂಹಲಕ್ಕೆ ಮಾತ್ರ ಅಗತ್ಯ: ವಂಶಾವಳಿ ತಜ್ಞ ಡಾ. ಮೈಕಲ್ ಲೋಬೊ*
ಮಂಗಳೂರು: “ಕ್ರೈಸ್ತ ವಂಶಾವಳಿಯನ್ನು ತಿಳಿಯಲು ಚರ್ಚ್ ದಾಖಲೆಗಳು ಸಹಕಾರಿಯಾಗುತ್ತವೆ. ಆದರೆ ಇದೊಂದು ಕುತೂಹಲ ತಣಿಸುವ ಕೆಲಸವಷ್ಟೇ ಹೊರತು ಬೇರೆ ಹೆಚ್ಚಿನ ಉಪಯೋಗ ಕಾಣಿಸುವುದಿಲ್ಲ” ಎಂದು ವಂಶಾವಳಿ ತಜ್ಞ ಡಾ. ಮೈಕಲ್ ಲೋಬೊ ಅಭಿಪ್ರಾಯಪಟ್ಟರು. ಕೊಂಕಣಿ ಭಾಷಾ ಮಂಡಳ್ ಕರ್ನಾಟಕ (ರಿ.) ಇದರ 52ನೇ ಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಾರ್ಸ್ಟ್ರೀಟ್ನ ಬಿಇಎಮ್ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ವಂಶಾವಳಿ’ ಕಾರ್ಯಕ್ರಮದಲ್ಲಿ ಅವರು ಪ್ರಮುಖ ಭಾಷಣಕಾರರಾಗಿ ಮಾತನಾಡುತ್ತಿದ್ದರು. ಸಾವಿರಾರು ಪುಟಗಳ ವಂಶಾವಳಿ ಸಂಶೋಧನಾ ಪುಸ್ತಕ ಪ್ರಕಟಿಸಿರುವ ಅವರು, ಈ ಕ್ಷೇತ್ರಕ್ಕೆ ನೀಡಿದ […]


