DAKSHINA KANNADA
HOME
*ಬಂಟ ಸಮಾಜ ಬಾಂಧವರೊಳಗೆ ಬಾಂಧವ್ಯ ನಶಿಸಿ ಹೋಗುತ್ತಿದೆ: ಕೆ ಅಜಿತ್ ಕುಮಾರ್ ರೈ ಮಾಲಾಡಿ*
ಮಂಗಳೂರು: ಬಂಟ ಸಮಾಜ ಬಾಂಧವರೊಳಗೆ ಬಾಂಧವ್ಯ ನಶಿಸಿ ಹೋಗುತ್ತಿದೆ. ಸಮಾಜ ಬಾಂಧವರೊಳಗಿನ ಬಾಂಧವ್ಯವನ್ನು ಪುನರುತ್ಥಾನ ಮಾಡುವ ಮಹೋನ್ನತವಾದ ಕಾರ್ಯವನ್ನು ನಾವು ಮಾಡಬೇಕಾಗಿದೆ. ನಮ್ಮವರು ಜಗತ್ತಿನಾದ್ಯಂತ ಚದುರಿ, ಪಸರಿಸಿ ಹೋಗಿದ್ದಾರೆ. ಅವರು ಯಾವ ಪರಿಸ್ಥಿತಿಯಲ್ಲಿದ್ದಾರೆ, ಎಲ್ಲಿದ್ದಾರೆ ಎಂಬ ವಿಷಯ, ಮಾಹಿತಿ ನಮ್ಮಲಿಲ್ಲ. ಸಹಸ್ರಾರು ಸಮಾಜ ಬಾಂಧವರು ಸಂಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ. ಅವರ ಕಣ್ಣೀರನ್ನು ಒರೆಸಿ ಅವರಿಗೆ ಸಹಾಯ ಮಾಡುವ ಹಾಗೂ ಬಂಟ ಸಮಾಜವನ್ನು ಒಗ್ಗೂಡಿಸಿ ಬಾಂಧವ್ಯವನ್ನು ಬೆಸೆಯುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಿದ್ದೇವೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ […]


