Tag: ಕೆನರಾಟಿವಿ ನ್ಯೂಸ್‌

DAKSHINA KANNADA HOME LATEST NEWS

ಬೆಳ್ತಂಗಡಿಯಲ್ಲಿ ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ: ಸಿಸಿಟಿವಿಯಲ್ಲಿ ಸೆರೆ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಾದ್ಯಂತ ಚಿರತೆಯ ಹಾವಳಿ ಹೆಚ್ಚಾಗುತ್ತಿದ್ದು, ಛಾವಣಿಯಲ್ಲಿ ಮಲಗಿದ್ದ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ನಡೆದಿದೆ. ಇದರಿಂದ ತಾಲೂಕಿನಾದ್ಯಂತ ಜನರನ್ನು ಬೆಚ್ಚಿಬೀಳಿಸುವಂತಿದೆ. ಚಿರತೆ ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಫೆ.5 ರ ಮಧ್ಯರಾತ್ರಿ  ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದಿಡುಪೆ ಕುಂಡಾಲ್ ಮನೆ ಜಯಂತ್ ಎಂಬವರ ಮನೆಯ ಹೊರಛಾವಣಿಯಲ್ಲಿದ್ದ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ನಡೆದಿದೆ. ನಾಯಿಯನ್ನು ಹೊತ್ತೊಯ್ದ ದೃಶ್ಯವು ಅವರ ಮನೆಯ ಸಿಸಿ ಟಿವಿಯಲ್ಲಿಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ […]

DAKSHINA KANNADA HOME LATEST NEWS

ಕೇಪುವಿನಲ್ಲಿ ಕೋಳಿ ಅಂಕ ಪ್ರಕರಣ: MLA ವಿರುದ್ಧ ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್‌

ಪುತ್ತೂರು:  ವಿಟ್ಲದ ಕೇಪು ಎಂಬಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಕೋಳಿ ಅಂಕ ಘಟನೆಗೆ ಸಂಬಂಧಿಸಿ ಶಾಸಕ ಅಶೋಕ್ ಕುಮಾರ್‌ ರೈ ಅವರ ವಿರುದ್ಧದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಡಿ. 20ರಂದು ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕೇಪು ಎಂಬಲ್ಲಿ, ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಕಾನೂನುಬಾಹಿರವಾಗಿ ಕೋಳಿ ಅಂಕ ನಡೆಸಲು ಮುಂದಾಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು ಠಾಣಾ ಅಧಿಕಾರಿ/ಸಿಬ್ಬಂದಿ ಸ್ಥಳಕ್ಕೆ […]

DAKSHINA KANNADA HOME LATEST NEWS

ಪಿಲಿಕುಳ ಎಂದಿನಂತೆ ವೀಕ್ಷಣೆಗೆ ಮುಕ್ತ: ಸುಳ್ಳು ಸುದ್ದಿಗೆ ಆಯುಕ್ತರಿಂದ ಸ್ಪಷ್ಟನೆ

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ ನಿರ್ವಹಣೆಯ ಬಗ್ಗೆ ಸ್ವೀಕೃತವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇದುವರೆಗೆ ಯಾವುದೇ ತೀರ್ಪು/ನಿರ್ದೇಶನ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಂದಿರುವುದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಪಿಲಿಕುಳ ಜೈವಿಕ ಉದ್ಯಾನವನವು ಎಂದಿನಂತೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಪತ್ರಿಕಾ ಸ್ಪಷ್ಟನೆ ನೀಡಿದೆ.

DAKSHINA KANNADA HOME LATEST NEWS

ಮಂಗಳೂರು: ಯುವತಿ ಮೃತದೇಹವಿಟ್ಟು ಪ್ರತಿಭಟಿಸಿದ 50 ಮಂದಿ ವಿರುದ್ಧ FIR

ಮಂಗಳೂರು: ನಂತೂರಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಯುವತಿಯ ಮೃತದೇಹವನ್ನಿಟ್ಟು ಪ್ರತಿಭಟಿಸಿದ ಸುಮಾರು 50 ಮಂದಿ ವಿರುದ್ಧ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿಗಳನ್ನು 1) ಅಮೀತ್, ವಿವೇಕನಗರ ಬಲ್ಲಾಳ್ ಭಾಗ್ 2) ಕೀರ್ತನ್ ,ವಿವೇಕನಗರ ಬಲ್ಲಾಳ್ ಭಾಗ್ 3) ನವೀತ್ ವಿವೇಕನಗರ , ಬಲ್ಲಾಳ್ ಭಾಗ್  4) ಭರತ್ ರಾಜ್  ವಿವೇಕನಗರ ಬಲ್ಲಾಳ್ ಭಾಗ್ ,5) ಪವನ್, ವಿವೇಕನಗರ ಬಲ್ಲಾಳ್ ಭಾಗ್ 6) ಲೋಕೆಶ್,ಮಂಗಳಾದೇವಿ,7) ಮನ್ವೀತ್ ಬಲ್ಲಾಳ್ ಭಾಗ್ 8) ಅನೀಲ ಕುಮಾರ್ ಕಂಕನಾಡಿ […]

LATEST NEWS

ವೆಂಕಟೇಶ ನಾಯಕ್ ಅವರಿಗೆ ಪಿಎಚ್.ಡಿ. ಪದವಿ ಪ್ರದಾನ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಅರ್ಥಶಾಸ್ತ್ರ ವಿಭಾಗದಲ್ಲಿ ನಡೆಸಿದ ಸಂಶೋಧನೆಗಾಗಿ ವೆಂಕಟೇಶ ನಾಯಕ್ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಯನ್ನು ಪ್ರದಾನ ಮಾಡಿದೆ. ವೆಂಕಟೇಶ ನಾಯಕ್ ಅವರು “ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದಲ್ಲಿ ಹಣಕಾಸು ಒಳಗೊಳ್ಳುವಿಕೆ – ಒಂದು ಪ್ರಕರಣ ಅಧ್ಯಯನ” ಎಂಬ ವಿಷಯದ ಮೇಲೆ ತಮ್ಮ ಸಂಶೋಧನಾ ಪ್ರೌಢ ಪ್ರಬಂಧವನ್ನು ಸಲ್ಲಿಸಿದ್ದರು. ಈ ಅಧ್ಯಯನವು ವಿಶೇಷವಾಗಿ ಅತೀ ಅಸುರಕ್ಷಿತ ಜನಾಂಗ (PVTG) ಆಗಿರುವ ಕೊರಗ ಸಮುದಾಯದಲ್ಲಿ ಹಣಕಾಸು ಒಳಗೊಳ್ಳುವಿಕೆ ಕಾರ್ಯಕ್ರಮಗಳ ವ್ಯಾಪ್ತಿ, ಸವಾಲುಗಳು ಹಾಗೂ […]

DAKSHINA KANNADA HOME LATEST NEWS

ವಿಟ್ಲ: ಹಿಟ್‌ ಆ್ಯಂಡ್‌ ರನ್‌ ಕೇಸ್‌ನ ಓಮ್ನಿ ಪತ್ತೆ

ವಿಟ್ಲ: ಕಳೆದ ಆದಿತ್ಯವಾರ ನಡೆದ ಹಿಟ್‌ ಆ್ಯಂಡ್‌ ರನ್‌ ಕೇಸ್‌ನಲ್ಲಿ ನಾಪತ್ತೆಯಾಗಿದ್ದ ಓಮ್ನಿ ವಾಹನ ಪತ್ತೆಯಾಗಿದೆ. ಕಳೆದ ಆದಿತ್ಯವಾರ ಸಾಲೆತ್ತೂರು-ವಿಟ್ಲ ರಸ್ತೆಯ ಕಡಂಬು ಎಂಬಲ್ಲಿ ವಿಟ್ಲದ ಕಡೆಗೆ ಹೋಗುತ್ತಿದ್ದ ಹೋಂಡಾ ಡಿಯೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಇದೇ ಓಮ್ನಿ ವಾಹನ ಕುಡ್ತಮುಗೇರು ಸಾಲೆತ್ತೂರು ಮಾರ್ಗವಾಗಿ ಮತ್ತೆ ಇಂದು ಪ್ರತ್ಯಕ್ಷವಾದ ವ್ಯಾನ್‌ ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ. ಕೆ.ಎ.19ಎಮ್‌.ಹೆಚ್‌ 1518 ಮಾರುತಿ ವ್ಯಾನ್‌ ಪರಾರಿಯಾಗಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇಂದು ಈ ವ್ಯಾನ್‌ ಕಣ್ಣಿಗೆ ಕಾಣುತ್ತಿರುವಂತೇಯೇ ಗ್ರಾಮಸ್ಥರು ವ್ಯಾನನ್ನು […]

DAKSHINA KANNADA HOME LATEST NEWS

ಬಸ್ ಕಾಯುತ್ತಿದ್ದ ತಾಯಿ, ಮಗಳಿಗೆ ಟ್ರೈಲರ್‌ ಢಿಕ್ಕಿ: ಓರ್ವ ಗಂಭೀರ

ಮುಲ್ಕಿ: ರಸ್ತೆ ಬದಿ ಬಸ್ ಕಾಯುತ್ತಿದ್ದ ತಾಯಿ, ಮಗಳಿಗೆ ಟ್ರೈಲರ್‌ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡಿರುವ ಘಟನೆ ಪಾವಂಜೆ ದೇವಸ್ಥಾನದ ಮುಂಭಾಗ ಇಂದು ಸಂಜೆ ನಡೆಸಿದೆ. ಗಾಯಗೊಂಡವರನ್ನು‌ ಶಿಕ್ಷಕಿ ಕುಸುಮಾ ಮತ್ತು ಅವರ ಮಗಳು ಸುಮಲತಾ (14) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಾವಂಜೆಯಲ್ಲಿ ನಿಂತು ಬಸ್ ಕಾಯುತ್ತಿದ್ದ ವೇಳೆ ಮಂಗಳೂರು- ಉಡುಪಿ ಕಡೆ ಸಂಚರಿಸುತ್ತಿದ ಟ್ರೈಲರ್‌ ಢಿಕ್ಕಿ ಹೊಡೆದಿದೆ. ಘಟನೆಯಿಂದ ಕುಸುಮಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಸುಮಲತಾ ಅವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ […]

DAKSHINA KANNADA HOME LATEST NEWS UDUPI

ಹಿಂದೂ ಮಹಿಳೆ-ಮುಸ್ಲಿಂ ಯುವಕನ ಕುರಿತು ವ್ಯಂಗ್ಯ ಪೋಸ್ಟ್‌: ಇಬ್ಬರ ಬಂಧನ

ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ವಿವಾಹಿತೆ ಹಿಂದೂ ಮಹಿಳೆ ಮತ್ತು ಮುಸ್ಲಿಂ ಯುವಕನ ಕುರಿತು ವ್ಯಂಗ್ಯವಾಗಿ ಧರ್ಮ ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವ ರೀತಿಯಲ್ಲಿ ಪೋಸ್ಟ್ ಹಾಕಿರುವ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುತ್ತೂರು ರಸ್ತೆಯ ನಿತೇಶ್ ಕೆ. (20) ಎಂಬಾತನನ್ನು ಪುತ್ತೂರು ತಾಲೂಕು ಕಲ್ಲಬ್ಬ ಜಂಕ್ಷನ್ ಬಳಿ ಜ.30ರಂದು ಹಾಗೂ ಕಡಬ ತಾಲೂಕು ಗುಂಡ್ಯ ಸಿರಿಬಾಗಿಲು ಗ್ರಾಮದ ಹಿತೇಶ್ ಎ.(19) ಎಂಬಾತನನ್ನು ಫೆ.1ರಂದು ಮಂಗಳೂರಿನ ಲಾಲ್‌ಬಾಗ್ ಬಳಿ ಪ್ರಕರಣಕ್ಕೆ […]

DAKSHINA KANNADA HOME LATEST NEWS

ಶಬರಿಮಲೆ ಅಯ್ಯಪ್ಪ ಸ್ವಾಮಿ ಚಿನ್ನ ಕಳವು ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

ಕೊಚ್ಚಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಅವರಿಗೆ ಕೇರಳದ ಕೊಲ್ಲಂನಲ್ಲಿರುವ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ. ಕಾನೂನಿನ ಪ್ರಕಾರ 90 ದಿನಗಳ ಅವಧಿಯೊಳಗೆ ವಿಶೇಷ ತನಿಖಾ ತಂಡ ಆರೋಪಪಟ್ಟಿ ಸಲ್ಲಿಸಲು ವಿಫಲವಾದುದನ್ನು ಗಮನಿಸಿದ ವಿಚಾರಣಾ ಆಯುಕ್ತ ಮತ್ತು ವಿಶೇಷ ನ್ಯಾಯಾಧೀಶ ಮೋಹಿತ್‌ ಸಿ ಎಸ್‌ ಅವರು ಆರೋಪಿಗೆ ಕಾನೂನುಬದ್ಧ ಜಾಮೀನು ಪಡೆಯುವ ಹಕ್ಕು ದೊರೆತಿದೆ ಎಂದು ತಿಳಿಸಿದರು. ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಬಾಗಿಲುಗಳ ಚೌಕಟ್ಟಿಗೆ ಅಳವಡಿಸಿದ್ದ ಚಿನ್ನದ ರೇಕು […]

DAKSHINA KANNADA HOME LATEST NEWS

ನೇಪಾಳದಲ್ಲಿ ಕುಳಿತು Investment fraud ಮೂಲಕ ವಂಚಿಸುತ್ತಿದ್ದವರ ಬಂಧನ

ಮಂಗಳೂರು: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಉತ್ತರ ಭಾರತ ಮೂಲದ 11 ಮಂದಿಯನ್ನು ಮಂಗಳೂರು ಸೆನ್ ಕೈಂ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಬಂಧಿತರನ್ನು ಗುಜರಾತ್‌ನ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳದ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್‌ನ ಪುಪ್ಲ ಶಿವಕುಮಾರ್ ರಾವ್ (32) ಮತ್ತು ರಾಜೇಶ್ ಮಂಡನ್ (30), ಮಿಥುನ್ ಕುಮಾರ್ ಮಂಗರಾಜ್ (38), ಉತ್ತರ ಪ್ರದೇಶದ ಗೌರವ್ ಪಾಂಡೆ (24) ಮತ್ತು […]