ವಿಟ್ಲ: ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ ‘ಆಟಿದ ತಿರ್ಲ್’ ವಿನೂತನ ಕಾರ್ಯಕ್ರಮ
ಬಂಟ್ವಾಳ,ಆಗಸ್ಟ್ 1: ತಾಲೂಕಿನ ವಿಟ್ಲದ ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ ಗುರುವಾರ “ಆಟಿದ ತಿರ್ಲ್” ಕಾರ್ಯಕ್ರಮ ನಡೆಯಿತು. ಶಾಲಾ ಸಂಚಾಲಕ ವಂದನೀಯ ಐವನ್ ಮೈಕಲ್ ರೋಡ್ರಿಗಸ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕ ವಂದನೀಯ ಅಮಿತ್ ಪ್ರಕಾಶ್ ರೋಡ್ರಿಗಸ್ ಮಾತನಾಡಿ, ತುಳುನಾಡಿನ ವಿಶೇಷತೆ ಕುರಿತು ಅರಿವು ಮೂಡಿಸಿದರು. ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಶ್ವೇತಾ ಪಾಯ್ಸ್, ಧರ್ಮ ಭಗಿನಿಯರಾದ ಮರಿನಾ ಹಾಗೂ ಜಾನೆಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತುಳುನಾಡಿನ ವಿಶೇಷತೆಯನ್ನು ಹಾಡು, ನೃತ್ಯ, ಪ್ರದರ್ಶನ, ಔಷಧೀಯ ಸಸ್ಯಗಳ ವಿವರಿಸುವ […]