ಅಡಿಕೆ ಸೇರಿ 28 ವಾಣಿಜ್ಯ ಬೆಳೆ ಕೃಷಿ ಇಲಾಖೆಯಡಿ ತರಲು ಪ್ರಯತ್ನ: ಅಶೋಕ್ ರೈ
ವಿಟ್ಲ: ಅಡಿಕೆ ಸೇರಿ 28 ವಾಣಿಜ್ಯ ಬೆಳೆಗಳನ್ನು ಕೃಷಿ ಇಲಾಖೆಯಡಿ ತರುವ ಭಾಗವಾಗಿ ಮನವಿ ಕೇಂದ್ರಕ್ಕೆ ಸಲ್ಲಿಸಲಾಗಿದೆ ಆಗ ಬೆಳೆಗಾರರಿಗೆ ಸರಕಾರದ ಸೌಲಭ್ಯ ಸಿಗುತ್ತದೆ. ಅಡಿಕೆ ಬೆಳೆ ಕೊಳೆರೋಗದಿಂದ ನಾಶವಾಗಿ ರೈತರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ರೈತರಿಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು. ಅವರು ಬಂಟ್ವಾಳ ತಾಲೂಕು ಕೃಷಿ ಇಲಾಖೆ ವತಿಯಿಂದ ವಿಟ್ಲದ ಭಗವತಿ ದೇವಸ್ಥಾನದ ಸಭಾಭವನದಲ್ಲಿ ಆತ್ಮ ಯೋಜನೆ ತಾಂತ್ರಿಕ […]