ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ: ಪೋಕ್ಸೋ ಕಾಯ್ದೆಯಡಿ ಓರ್ವನ ಬಂಧನ
ಸುರತ್ಕಲ್: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೊಕ್ಸೊ ಕಾಯ್ದೆಯಡಿ ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಚೊಕ್ಕಬೆಟ್ಟು ನಿವಾಸಿ ಅಬ್ದುಲ್ ಇಸ್ಮಾಯೀಲ್ ಬಂಧಿತ ಆರೋಪಿ. ಚೊಕ್ಕಬೆಟ್ಟು ಪೇಟೆಯಲ್ಲಿ ಹನಿ ಫ್ಯಾಶನ್ ಮತ್ತು ಜನರಲ್ ಸ್ಟೋರ್ ನಡೆಸಿಕೊಂಡಿರುವ ಆರೋಪಿ ಇಸ್ಮಾಯೀಲ್ ತನ್ನ ಅಂಗಡಿಗೆ ಚಾಕಲೇಟು ಖರೀದಿಸಲೆಂದು ಬಂದಿದ್ದ 11 ವರ್ಷದ ಬಾಲಕನ ಕೈ-ಕಾಲನ್ನು ಕಟ್ಟಿ ಅಂಗಡಿಯ ಒಂದು ಕೊಠಡಿಯಲ್ಲಿ ಕೂಡಿಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕನ ತಾಯಿ ಸುರತ್ಕಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. […]



