Tag: plane crash

DAKSHINA KANNADA HOME LATEST NEWS STATE

ವಿಜಯಪುರದ ಮಂಗಳೂರಿನಲ್ಲಿ ಜೆಟ್‌ ವಿಮಾನ ಪತನ

ವಿಜಯಪುರ: ಖಾಸಗಿ ಜೆಟ್ ವಿಮಾನವೊಂದು ಪತನಗೊಂಡಿದ್ದು ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾದ ಘಟನೆ ವಿಜಯಪುರ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಫೆ.8 ರಂದು ನಡೆದಿದೆ. ಈ ವಿಮಾನದಲ್ಲಿ ಪೈಲಟ್ ಗಳಾದ ಗೌತಮ್ ಮತ್ತು ಕಂಪನಿ ಸಿಬ್ಬಂದಿ ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ವೇಳೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಪತಗೊಂಡು ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಪ್ರಮಾಣದ ಗಾಯಗಳಾಗಿದ್ದು ನಗರದ ಬಿಎಲ್‌ಡಿಇ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ದಾಖಲಿಸಲಾಗಿದೆ.

HOME LATEST NEWS NATIONAL

ವಿಮಾನ ದುರಂತಕ್ಕೆ ಮೊದಲೇ ಅಜಿತ್‌ ಪವಾರ್ ಸಾವಿನ ಅಪ್‌ಡೇಟ್‌..! ಏನಿದೆ ಅಸಲಿ ಸತ್ಯ?

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಆತಂಕಕಾರಿ ಸಂಗತಿಯೊಂದು ಹರಿದಾಡುತ್ತಿದೆ. ‘ದುರಂತ ಸಂಭವಿಸುವ ಮೊದಲೇ  ‘ವಿಕಿಪಿಡಿಯಾ’ದಲ್ಲಿ ಅಜಿತ್‌ ಅವರ ಸಾವಿನ ಮಾಹಿತಿ ಅಪ್‌ಡೇಟ್‌ ಆಗಿತ್ತು. ಹಾಗಾಗಿ, ಅಪಘಾತ ಸಂಭವಿಸಲಿದೆ ಎಂಬುದು ಗೊತ್ತಾಗಿತ್ತು ಅಥವಾ ಇದೊಂದು ಪಿತೂರಿ ಇದ್ದಿರಬಹುದು’ ಎಂದು ಆರೋಪಿಸಲಾಗುತ್ತಿದೆ. ವಿಕಿಪಿಡಿಯಾದಲ್ಲಿರುವುದು ನಿಜವೇ? ಅಜಿತ್‌ ಸಾವಿನ ದಿನಾಂಕವನ್ನು, ದುರಂತಕ್ಕೂ ಮೊದಲೇ ವಿಕಿಪಿಡಿಯಾದಲ್ಲಿ ಅಪ್‌ಡೇಟ್‌ ಮಾಡಲಾಗಿತ್ತು ಎಂಬುದು ನಿಜವಲ್ಲ. ಸಾರ್ವತ್ರಿಕ ಸಂಯೋಜಿತ ಸಮಯದ […]

HOME LATEST NEWS NATIONAL

ಊಟ ಮಾಡುತ್ತಿದ್ದಾಗ ಹಾಸ್ಟೆಲ್‌ಗೆ ನುಗ್ಗಿದ ವಿಮಾನ: 20 ಕ್ಕೂ ಅಧಿಕ ವಿದ್ಯಾರ್ಥಿಗಳು ಸಾವು..!

ಅಹಮದಾಬಾದ್‌:  ಬಿಜೆ ಮೆಡಿಕಲ್‌ ಕಾಲೇಜಿನ ಹಾಸ್ಟೆಲ್‌ನ ಮೇಲೆ ಬಿದ್ದ ವಿಮಾನ ಈ ದುರಂತರದಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿತ್ತು. ಈ ದುರಂತವು ಮಧ್ಯಾಹ್ನ 1:30ರ ವೇಳೆಗೆ ಸಂಭವಿಸಿದೆ. ಈ ವೇಳೆ ಕೆಲವರು ಊಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅಲ್ಲಿದ್ದ ಆಹಾರ, ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿದ್ದು,  ಕಾಲೇಜು ಕಟ್ಟಡ ಧ್ವಂಸವಾಗಿದೆ. ವಿಮಾನ ಮಧ್ಯಾಹ್ನ 1.17 ಕ್ಕೆ ಟೇಕ್ ಆಫ್ ಆಗಿತ್ತು. ವಿಮಾನ ನಿಲ್ದಾಣದ ಬಳಿಯ ಸರಕು ಕಚೇರಿಯಲ್ಲಿ ಅಪಘಾತ ಸಂಭವಿಸಿದ್ದು, ಇದರಿಂದಾಗಿ ಕಟ್ಟಡವೂ ಸಂಪೂರ್ಣವಾಗಿ […]