DAKSHINA KANNADA
HOME
LATEST NEWS
ಕಡಬ, ನೆಲ್ಯಾಡಿ ಗಾಳಿ- ಸಿಡಿಲು ಸಹಿತ ಭಾರೀ ಮಳೆ: ವಿದ್ಯುತ್ ಸಂಪರ್ಕ ಕಡಿತ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಸಂಜೆ ವೇಳೆಗೆ ವರುಣ ತಂಪೆರೆದಿದ್ದಾನೆ. ಸಂಜೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ನೆಲ್ಯಾಡಿ, ಪುತ್ತೂರಿನಲ್ಲಿ ಗಾಳಿ, ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಭಾರೀ ಗಾಳಿಯ ಪರಿಣಾಮ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಂಗಳೂರು ನಗರದ ಸುತ್ತಮುತ್ತ ಸಾಧಾರಣ ಮಳೆಯಾಗಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ.