ವಿವಾದಾತ್ಮಕ ಭಾಷಣ: ಪೊಲೀಸ್ ವಿಚಾರಣೆಗೆ ಹೈಕೋರ್ಟ್ ತಡೆ
ಬೆಂಗಳೂರು: ಚುನಾವಣೆ ವೇಳೆ ಮಾಡಿದ್ದ ವಿವಾದಾತ್ಮಕ ಭಾಷಣ ಸಂಬಂಧ ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ವಿರುದ್ಧ ಬಂಟ್ವಾಳ ಠಾಣಾ ಪೊಲೀಸರು ನಡೆಸುತ್ತಿದ್ದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ. 2018ರ ವಿಧಾನಸಭಾ ಚುನಾವಣೆ ವೇಳೆ ಬಂಟ್ವಾಳದ ಕಲಡ್ಕದಲ್ಲಿ ರಾಜೇಶ್ ನಾಯ್ಕ್ ಪರ ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ಸುನಿಲ್ ಕುಮಾರ್, ‘ರಾಮ ಬೇಕೋ, ಅಲ್ಲಾ ಬೇಕೋ? ಎಂದು ಪ್ರಶ್ನೆ ಮಾಡಿದ್ದರು. ಈ ಕುರಿತು ಎಫ್‌ಐಆರ್ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಬಂಟ್ವಾಳ […]