Tag: mangaluru

DAKSHINA KANNADA HOME LATEST NEWS

ಉಡುಪಿ: ಪ್ರವಾಸಿ ಬೋಟ್ ದುರಂತದ ಮೃತರ ಸಂಖ್ಯೆ ಮೂರಕ್ಕೇರಿಕೆ

ಉಡುಪಿ: ಪ್ರವಾಸಿ ಬೋಟ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ  ಮತ್ತೋರ್ವ ಯುವತಿ ನಿನ್ನೆ ಸಾವನ್ನಪ್ಪಿದ್ದಾರೆ. ಮೈಸೂರಿನ ದಿಶಾ(23) ಮೃತ ಯುವತಿ. ಮೊನ್ನೆ ಸಿಂಧು ಮತ್ತು ಶಂಕರಪ್ಪ ಎಂಬುವವರು ಮೃತಪಟ್ಟಿದ್ದರು. ಸದ್ಯ ಧರ್ಮರಾಜ್ ಎಂಬ ಯುವಕ‌ನಿಗೆ ಚಿಕಿತ್ಸೆ ಮುಂದುವರೆದಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ಮಲ್ಪೆ ವ್ಯಾಪ್ತಿಗೆ ಬರುವ ಕೋಡಿಬೆಂಗ್ರೆಯಲ್ಲಿರುವ ಡೆಲ್ಟಾ ಬೀಚ್‌ಗೆ ಮೋಜು ಮಾಡಬೇಕೆಂದು ಬಂದ ಮೈಸೂರಿನ ಬಿಪಿಒ ಕಾಲ್ ಸೆಂಟರ್​ವೊಂದರ 28 ಮಂದಿ ಪ್ರವಾಸಿಗರ ತಂಡ, ಇದೀಗ ಕಣ್ಣೀರಿಡುತ್ತಾ ವಾಪಸಾಗುವಂತಾಗಿದೆ. ಇಲ್ಲಿನ ಡೆಲ್ಟಾ ಬೀಚ್ […]

DAKSHINA KANNADA HOME LATEST NEWS

ಕದ್ರಿ ಪಾರ್ಕ್‍ನಲ್ಲಿ ಜ.30 ರಿಂದ ಫೆ.1 ರವರೆಗೆ ಸ್ಟ್ರೀಟ್ ಫುಡ್ ಫೆಸ್ಟಿವಲ್

ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಆಹಾರ ಮೇಳವು ಜನವರಿ 30 ರಿಂದ ಫೆಬ್ರವರಿ 1 ರವರೆಗೆ ಮಂಗಳೂರು ನಗರದ ಕದ್ರಿ ಪಾರ್ಕ್‍ನಲ್ಲಿ ನಡೆಯಲಿದೆ. ಈ ಆಹಾರ ಮೇಳದಲ್ಲಿ ಕರಾವಳಿ ಪ್ರದೇಶದ ವೈವಿಧ್ಯಮಯ ಹಾಗೂ ಸಮೃದ್ಧ ಪಾಕ ಪರಂಪರೆಯನ್ನು ಪೆÇ್ರೀತ್ಸಾಹಿಸುವ ಉದ್ದೇಶ ಹೊಂದಿದ್ದು, ಸ್ಥಳೀಯ ಹಾಗೂ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಕಲ್ಪಿಸಲಿದೆ. ಆಹಾರ ಪ್ರಿಯ ನಾಗರಿಕರಿಗೆ ವಿಶೇಷ ಅನುಭವವನ್ನು ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಉತ್ಸವದಲ್ಲಿ ಎಲ್ಲ ವರ್ಗದ ಜನರಿಗೆ ರುಚಿಕರ […]

DAKSHINA KANNADA HOME LATEST NEWS STATE

ಎಚ್ಚರಿಕೆ: ಇಂದಿನಿಂದ ಜ.31ರವರೆಗೆ ಅರಬ್ಬೀ ಸಮುದ್ರದಲ್ಲಿ ಭಾರೀ ಗಾಳಿ ಮುನ್ಸೂಚನೆ

ಮಂಗಳೂರು:- ಹವಾಮಾನ ಮುನ್ಸೂಚನೆಯಂತೆ ಜನವರಿ 27 ರಿಂದ 31 ರವರೆಗೆ ಅರಬ್ಬೀ ಸಮುದ್ರದಲ್ಲಿ ಭಾರೀ ಗಾಳಿ ಬೀಸುವುದರಿಂದ ಸಮುದ್ರವು ಪ್ರಕ್ಷುಬ್ದವಾಗಿರುತ್ತದೆ. ಆದ್ದರಿಂದ ಅನಾಹುತವನ್ನು ತಡೆಯುವ ಸಲುವಾಗಿ ನಾಡದೋಣಿ ಮೀನುಗಾರರು ಸೇರಿದಂತೆ ಎಲ್ಲಾ ಮೀನುಗಾರರು ಜಾಗರೂಕತೆ ವಹಿಸುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

DAKSHINA KANNADA HOME LATEST NEWS STATE

ಪೌರಾಯುಕ್ತೆಗೆ ಧಮ್ಕಿ ಹಾಕಿದ ಕೈ ಮುಖಂಡನಿಗೆ ಆಶ್ರಯ ನೀಡಿದ ಮೈಕಲ್ ರೇಗೊಗೆ ಜಾಮೀನು

ಬೆಂಗಳೂರು:  ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆಸಂಬಂಧಿಸಿದಂತೆ ಆರೋಪಿ ಕಾಂಗ್ರೆಸ್‌ ಮುಖಂಡ ರಾಜೀವ್ ಗೌಡನನ್ನು ಬಂಧಿಸಲಾಗಿದೆ. ಕಳೆದ 14 ದಿನಗಳಿಂದ ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ನಿನ್ನೆ(ಜನವರಿ 26) ಕೇರಳದ ಗಡಿಭಾಗದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಪೊಲೀಸರು ಆರೋಪಿ ರಾಜೀವ್ ಗೌಡನನ್ನು ಶಿಡ್ಲಘಟ್ಟಕ್ಕೆ ಕರೆತಂದಿದ್ದು, ವೈದ್ಯಕೀಯ ತಪಾಸಣೆ ಮಾಡಿಸಿ ಕೋರ್ಟ್​​​ ಮುಂದೆ ಹಾಜರುಪಡಿಸಿದರು. ಇದೀಗ ಕೋರ್ಟ್ ರಾಜಿವ್ ಗೌಡನನ್ನು ಜೈಲಿಗೆ ಕಳುಹಿಸಿದೆ. ಮಂಗಳೂರಿನಲ್ಲಿ ಪತ್ತೆಯಾದ ಕಾರು ಹಾಗೂ ಆರೋಪಿ ಕಾಂಗ್ರೆಸ್‌ ಮುಖಂಡ […]

DAKSHINA KANNADA HOME LATEST NEWS

ಮಂಗಳೂರಿನ ಆಲ್ಬುಕರ್ಕ್‌ ಹೆಂಚಿನ ಕಾರ್ಖಾನೆಗೆ ಬೆಂಕಿ: ಅಪಾರ ನಷ್ಟ

ಮಂಗಳೂರು: ನಗರದ ಹೊಯ್ಗೆಬಜಾರ್‌ನಲ್ಲಿರುವ ಆಲ್ಬುಕರ್ಕ್‌ ಹೆಂಚಿನ ಕಾರ್ಖಾನೆಗೆ ಮಂಗಳವಾರ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಹೆಂಚುಗಳು ಹಾಗೂ ಇಟ್ಟಿಗೆಗಳು ಹಾನಿಗೊಳಗಾಗಿವೆ. ಕಟ್ಟಡವೂ ಭಾಗಶಃ ಸುಟ್ಟುಹೋಗಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದವು. ಬೆಂಕಿ ಭಾರಿ ಪ್ರಮಾಣದಲ್ಲಿ ವ್ಯಾಪಿಸಿದ್ದರಿಂದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಎರಡು, ಕದ್ರಿ ಅಗ್ನಿಶಾಮಕ ಠಾಣೆ ಹಾಗೂ ಎಂಸಿಎಫ್‌ನ ತಲಾ ಒಂದು ಅಗ್ನಿಶಾಮಕ ವಾಹನ ಬಳಸಿ ಬೆಂಕಿಯನ್ನು ನಂದಿಸಲಾಯಿತು. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂದು ಗೊತ್ತಾಗಿಲ್ಲ. ಕಾರ್ಖಾನೆಯಲ್ಲಿ ದಾಸ್ತಾನಿದ್ದ ಹೆಂಚುಗಳು ಹಾಗೂ […]

DAKSHINA KANNADA HOME LATEST NEWS

ಮಂಗಳೂರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ106 ಕಿಲೋ ಗಾಂಜಾ ಪುತ್ತೂರಲ್ಲಿ ವಶ

ಪುತ್ತೂರು: ಕಾರು ಹಾಗೂ ಗೂಡ್ಸ್‌ ವಾಹನದಲ್ಲಿ 106 ಕಿಲೋ ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಚಾರ್ಮಾಡಿ ಗ್ರಾಮದ ನಿವಾಸಿ ಅಬ್ದುಲ್ ಸಾದಿಕ್ (37) ಹಾಗೂ ಅದೇ ಗ್ರಾಮದ ರಫೀಕ್‌ ಪಿ(37) ಎಂದು ಗುರುತಿಸಲಾಗಿದೆ. ಘಟನೆ ವಿವರ ಜ.19 ರಂದು ಸಂಜೆ, ಒಂದು ಕಾರು ಮತ್ತು ಒಂದು ಅಶೋಕ್‌ ಲೈಲ್ಯಾಂಡ್‌ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಪೊಲೀಸರಿಗೆ ಖಚಿತ ಮಾಹಿತಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ […]

DAKSHINA KANNADA HOME LATEST NEWS

ಲೇಖಕ ಪೆಟ್ರಿಕ್ ಕಾಮಿಲ್ ಮೊರಾಸ್‌ಗೆ 2026ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿ

ಮಂಗಳೂರು: 2026ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಲೇಖಕ ಪೆಟ್ರಿಕ್ ಕಾಮಿಲ್ ಮೊರಾಸ್ (ಎಮ್. ಪೆಟ್ರಿಕ್) ಇವರನ್ನು ಆಯ್ಕೆ ಮಾಡಲಾಗಿದೆ. ಲೇಖಕ ಪೆಟ್ರಿಕ್ ಕಾಮಿಲ್ ಮೊರಾಸ್ ಈ ಬಗ್ಗೆ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೊಂಕಣಿ ಲೇಖಕ್ ಸಂಘ್ ಕರ್ನಾಟಕ ಇದರ ಸಂಚಾಲಕ ರಿಚರ್ಡ್ ಮೊರಾಸ್ ಅವರು, ಈ ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.  ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಫೆಬ್ರವರಿ 07, 2026ನೇ […]

DAKSHINA KANNADA HOME LATEST NEWS

ಡಿಜಿಪಿ ಕೆ.ರಾಮಚಂದ್ರರಾವ್ ರಾಸಲೀಲೆ ಪ್ರಕರಣ: ರಾಜ್ಯ ಸರ್ಕಾರದಿಂದ ಅಮಾನತು

ಬೆಂಗಳೂರು: ಕರ್ನಾಟಕದ ಡಿಜಿಪಿ ಕೆ.ರಾಮಚಂದ್ರರಾವ್ ಕಚೇರಿಯಲ್ಲಿ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಹಿರಿಯ ಅಧಿಕಾರಿಯನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ರಾಮಚಂದ್ರರಾವ್ ತನ್ನ ಕಚೇರಿಯ ಒಳಗಡೆ ಸಮವಸ್ತ್ರದಲ್ಲಿರುವಾಗ ನಡೆದಿರುವ ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚನೆ […]

DAKSHINA KANNADA HOME LATEST NEWS

ಉಳ್ಳಾಲ: ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನ ಕಳವು

ಮಂಗಳೂರು: ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರೋರ್ವರ 16 ಗ್ರಾಂ ತೂಕದ ಚಿನ್ನ ಕಳವಾದ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ ಸ್ವರ್ಷ ಎಂಬುವವರು ಜ.17 ರಂದು ಉಳ್ಳಾಲ ತಾಲೂಕಿನ ಉಳ್ಳಾಲ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಇರುವ ಕೆಥೋಲಿಕ್ ಪ್ರಾಥಮಿಕ ಸಹಕಾರ ಸಂಘದಲ್ಲಿ ಲಾಕರ್ ನಲ್ಲಿ ಇಟ್ಟಿದ್ದ 2 ಚಿನ್ನದ ಸರವನ್ನು ಬಿಡಿಸಿಕೊಂಡು ಬ್ಯಾಗ್ ನಲ್ಲಿ ಹಾಕಿ ಬಂದಿದ್ದರು. ನಂತರ ಸುಮಾರು 12 ಗಂಟೆ ಸುಮಾರಿಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ […]

DAKSHINA KANNADA HOME LATEST NEWS

ಶೇರ್ ಮಾರ್ಕೆಟಿಂಗ್ ಹೆಸರಲ್ಲಿ ಮಂಗಳೂರ ವ್ಯಕ್ತಿಗೆ ರೂ. 1,38,20,060 ದೋಖಾ

ಮಂಗಳೂರು: ಆನ್ ಲೈನ್ ಶೇರು ಮಾರುಕಟ್ಟೆಯ ಬಗ್ಗೆ ವಾಟ್ಸಾಪ್ ಮೇಸೆಜ್ ಗಳನ್ನು ನಂಬಿ ವ್ಯಕ್ತಿಯೋರ್ವರು ರೂ 1,38,20,060/- ಹಣ ಕಳೆದುಕೊಂಡ ಬಗ್ಗೆ ಮಂಗಳೂರು ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ ಮಂಗಳೂರಿನ ವ್ಯಕ್ತಿಯೋರ್ವರ ಮೊಬೈಲಿಗೆ ರಿಶಿತಾ ಎಂಬ ಅಪರಿಚಿತ ವ್ಯಕ್ತಿ 9205298139 ನೇ ವಾಟ್ಸಾಫ್ ನಂಬ್ರದಿಂದ ಮಂಗಳೂರ ವ್ಯಕ್ತಿಯ ಕಂಪನಿಯ Carpets & Home decorative items ಬೇಕೆಂದು ವಾಟ್ಸಪ್ ಮೇಸೆಜ್ ಮಾಡಿದ್ದಾರೆ.  ಅದರಂತೆ ಈ ವ್ಯಕ್ತಿ ತನ್ನ ಕಂಪನಿಯ Carpets & Home […]