Tag: mangaluru

HOME LATEST NEWS UDUPI

“ಸ್ವ ಇಚ್ಛೆಯಿಂದ ಅಕ್ರಂ ಜೊತೆ ಹೋಗಿದ್ದೇನೆ”: ಕ್ರೈಸ್ತ ಯುವತಿ- ಮುಸ್ಲಿಂ ಯುವಕನ ಪ್ರೇಮ ಪ್ರಕರಣ

ಮಂಗಳೂರು: ಕ್ರೈಸ್ತ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ಅಪಹರಿಸಿದ್ದಾನೆ ಎಂದು ಯುವತಿಯ ತಾಯಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದ ಪ್ರಕರಣದಲ್ಲಿ ಹುಡುಗಿ ತನ್ನ ಪ್ರಿಯಕರನೊಂದಿಗೆ ನಿನ್ನೆ ಹೈಕೋರ್ಟ್ ಮುಂದೆ ಹಾಜರಾಗಿದ್ದಾಳೆ. ನಿನ್ನೆ ಜೀನ ಮೆರಿಲ್ ಮತ್ತು ಅಕ್ರಮ್ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ತನ್ನನ್ನು ಯಾರೂ ಅಪಹರಿಸಿರುವುದಿಲ್ಲ, ನಾನುಸ್ವಇಚ್ಛೆಯಿಂದ ಅಕ್ರಮ್ ಜೊತೆ ತೆರಳಿರುವುದಾಗಿ ವಿಚಾರಣೆಯಲ್ಲಿ ನ್ಯಾಯಾಧೀಶರ ಮುಂದೆ ತಿಳಿಸಿದ್ದಾಳೆ. ಇದೇ ವೇಳೆ ಆಕೆಯ ತಾಯಿ ಮಗಳ ಜೊತೆ ಮಾತನಾಡಬೇಕು ಎಂದು ವಿನಂತಿಸಿದಾಗ, ನ್ಯಾಯಾಧೀಶರು ತಮ್ಮ ಕೊಠಡಿಯಲ್ಲಿಯೇ […]

DAKSHINA KANNADA HOME LATEST NEWS

ಮಂಗಳೂರು: ಭಿಕ್ಷಾಟನೆ- ತಾಯಿ ಮಕ್ಕಳ ರಕ್ಷಣೆ

ಮಂಗಳೂರು : ಪುಟ್ಟ ಮಕ್ಕಳನ್ನು ಹಿಡಿದುಕೊಂಡು ನಗರದ ಲಾಲ್‍ಬಾಗ್ ಜಂಕ್ಷನ್ ಸಿಗ್ನಲ್ ಬಳಿ ಬಿಕ್ಷಾಟನೆ ನಡೆಸುತ್ತಿದ್ದ ತಾಯಿ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪತ್ತೆ ಹಚ್ಚಿ ಅವರ ಊರುಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಮಕ್ಕಳ ರಕ್ಷಣಾ ಘಟಕ ಪೋಲೀಸರ ಸಹಯೋಗದೊಂದಿಗೆ ಲಾಲ್‍ಬಾಗ್ ಸಿಗ್ನಲ್ ಬಳಿ ಭಿಕ್ಷಾಟನೆ ನಡೆಸುತ್ತಿದ್ದ 4 ಮಹಿಳೆಯರು, 4 ಪುರುಷರು, 4 ಮಕ್ಕಳನ್ನು ರಕ್ಷಣೆ ಮಾಡಿ ಅವರ ಸ್ವಂತ ಊರು ರಾಜಸ್ಥಾನಕ್ಕೆ ರೈಲಿನ ಮೂಲಕ ಕಳುಹಿಸಿಕೊಡಲಾಯಿತು. ಹೆಂಗಸರು […]

DAKSHINA KANNADA HOME LATEST NEWS

ಚಿನ್ನದ ಪದಕ ಪಡೆದ ಪೊಲೀಸ್ ಅಧಿಕಾರಿ & ಸಿಬ್ಬಂದಿಗೆ ಅಭಿನಂದನೆ

ಮಂಗಳೂರು: ಮುಖ್ಯ ಮಂತ್ರಿಗಳ ಚಿನ್ನದ ಪದಕ ಪಡೆದ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಅಭಿನಂದನಾ ಕಾರ್ಯಕ್ರಮ ನಿನ್ನೆ ಸಂಜೆ ನಡೆಯಿತು. ನಗರದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮಾದಕ ವಸ್ತು ಗಳನ್ನು ಪತ್ತೆ ಹಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅತೀ ಉತ್ತಮ ಮತ್ತು ಶ್ಲಾಘನೀಯ ಕರ್ತವ್ಯ ನಿರ್ವಹಿಸಿ 2024 ನೇ ಸಾಲಿನ ಮುಖ್ಯ ಮಂತ್ರಿ ಚಿನ್ನದ ಪದಕ ಪಡೆದ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಎಸಿಪಿ ಧನ್ಯಾ ನಾಯಕ್, […]

DAKSHINA KANNADA HOME LATEST NEWS

ಹೋಟೆಲ್‌ ಮೋತಿ ಮಹಲ್ ಏಪ್ರಿಲ್‌ ಅಂತ್ಯಕ್ಕೆ ಬಂದ್…!

ಮಂಗಳೂರು: ಮಂಗಳೂರಿನ ಮೊದಲ ಬಿಝಿನೆಸ್ ಹೋಟೆಲ್ ಎಂದೇ ಖ್ಯಾತಿ ಪಡೆದಿದ್ದ ಮೋತಿ ಮಹಲ್ ಇದೀಗ ಮುಚ್ಚುವ ಹಂತಕ್ಕೆ ತಲುಪಿದ್ದು, ಎಪ್ರಿಲ್ ಅಂತ್ಯದೊಳಗೆ  ಅದರ ಭೂ ಮಾಲಕರಿಗೆ ಬಿಟ್ಟುಕೊಡಬೇಕಾಗಿದೆ. ಜಮೀನು ವಾಜ್ಯದಲ್ಲಿ ಸುಪ್ರೀಂ ಕೋರ್ಟ್‌ನ  ತೀರ್ಪಿನಂತೆ ಹೋಟೆಲ್ ಮೋತಿಮಹಲ್ ಅನ್ನು ಯಥಾ ಸ್ಥಿತಿಯಲ್ಲಿ ಜಮೀನಿನ ಮಾಲಕರಿಗೆ ಬಿಟ್ಟುಕೊಡಬೇಕಾಗಿದೆ. ಇದರೊಂದಿಗೆ 3 ಕೋಟಿ ರೂ. ಮೊತ್ತದ ಪರಿಹಾರಧನವನ್ನು ಅವರಿಗೆ ಪಾವತಿಸಬೇಕಾಗಿದೆ.   ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಪಕ್ಕದಲ್ಲಿರುವ ಹೋಟೆಲ್ ಮೋತಿಮಹಲ್ ಇರುವ ಜಮೀನಿನ ಒಡೆತನವು ಸದ್ಯ  ಜೆಪ್ಪುವಿನ ಸಂತ ಅಂಥೋನಿ ವೃದ್ಧಾಶ್ರಮಕ್ಕೆ […]

DAKSHINA KANNADA HOME LATEST NEWS

ಮಂಗಳೂರು: ಅಡಿಕೆ ವ್ಯಾಪಾರಿಯಿಂದ 29 ಲಕ್ಷ ರೂ. ವಂಚನೆ

ಮಂಗಳೂರು: ಅಡಿಕೆ ವ್ಯಾಪಾರಿಯೊಬ್ಬ ಸಹಕಾರಿ ಸಂಘವೊಂದಕ್ಕೆ 29 ಲಕ್ಷ ರೂ. ಮೋಸ ಮಾಡಿದ ಬಗ್ಗೆ ಮಂಗಳೂರು ನಗರ ಹೊರವಲಯದ ಪಣಂಬೂರು  ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಬೈಕಂಪಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ಅಗ್ರಿಕಲ್ಚರಿಸ್ಟ್ಸ್ ಸಹಕಾರಿ ಸಂಘ ಸಂಸ್ಥೆಯು ಮಂಗಳೂರು ಮತ್ತು ಇತರ ಕಡೆಗಳಲ್ಲಿ ಅಡಿಕೆ ಖರೀದಿ ಮತ್ತು ಮಾರಾಟ ವ್ಯವಹಾರ ನಡೆಸುತ್ತಿದೆ. ಆರೋಪಿ ಸತ್ಯನಾರಾಯಣ ರಾಮಚಂದ್ರ ಭಟ್‌ (55) ಎಂಬಾತ ಗುಜರಾತ್‌ನ ಅಹಮದಾಬಾದ್ ನಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದು, 2009ರಲ್ಲಿ ಮಂಗಳೂರು ಅಗ್ರಿಕಲ್ಚರಿಸ್ಟ್ಸ್ ಸಹಕಾರಿ ಸಂಘದಿಂದ ಆರೋಪಿಯು […]

HOME LATEST NEWS UDUPI

ಕ್ರಿಶ್ಚಿಯನ್ ಯುವತಿ & ಮುಸ್ಲಿಂ ಯುವಕನ ಪ್ರೇಮ ಪ್ರಕರಣಕ್ಕೆ ಬಜರಂಗದಳ ಎಂಟ್ರಿ

ಮಂಗಳೂರು: ಉಡುಪಿಯಲ್ಲಿ ನಡೆದ ಕ್ರಿಶ್ಚಿಯನ್ ಯುವತಿ ಮತ್ತು ಮುಸ್ಲಿಂ ಯುವಕನ ಪ್ರೇಮ ಪ್ರಕರಣಕ್ಕೆ ಇದೀಗ ಹಿಂದೂ ಸಂಘಟನೆಗಳು ಎಂಟ್ರಿ ನೀಡಿವೆ. ಈ ಹೋರಾಟಕ್ಕೆ ಧುಮುಕಿದ ಬಜರಂಗದಳ ಇದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿದ್ದಾರೆ. ಜೊತೆಗೆ ಈ ಬಗ್ಗೆ ಉನ್ನತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಭಜರಂಗದಳದ ಮುಖಂಡ ಸುನಿಲ್ ಕೆ ಆರ್ ಅವರು ಪ್ರತಿಕ್ರಿಯೆ ನೀಡಿ, ವಿಶ್ವ ಹಿಂದೂ ಪರಿಷತ್ ಲವ್ ಜಿಹಾದ್ ಬಗ್ಗೆ ಜಾಗೃತಿ ಕೆಲಸ ಮಾಡುತ್ತಿದೆ.  ಆದರೆ ಜಿಹಾದಿಗಳು ತಮ್ಮ ಕೃತ್ಯ […]

DAKSHINA KANNADA HOME LATEST NEWS UDUPI

ನಾಳೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವೆಡೆ ಭಾರೀ ಮಳೆ ಸಾಧ್ಯತೆ..!

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ  ಸೇರಿದಂತೆ ರಾಜ್ಯದ ವಿವಿಧೆಡೆ ನಾಳೆ (ಗುರುವಾರ) ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ 30 ಕಿ.ಮೀ ನಿಂದ 40 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್ ಮತ್ತು ಗದಗ ಜಿಲ್ಲೆಯಲ್ಲಿ ಗಂಟೆಗೆ 50 […]

DAKSHINA KANNADA HOME LATEST NEWS

“ಮಸೀದಿ, ಮದರಸ, ಖಬರಸ್ತಾನ, ದೋಚಲು ಬಿಡುವುದಿಲ್ಲ” ವಕ್ಫ್‌ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ SDPI ಬೃಹತ್‌ ಪ್ರತಿಭಟನೆ

ಮಂಗಳೂರು: ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ, ಎಸ್‌ಡಿಪಿಐ ಜಿಲ್ಲಾ ಘಟಕದ ನೇತೃತ್ವದಲ್ಲಿ ಬುಧವಾರ ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ಬೃಹತ್‌ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, “ಮಸೀದಿ, ಮದರಸ, ಖಬರಸ್ತಾನ, ದೋಚಲು ಬಿಡುವುದಿಲ್ಲ. ಕೇಂದ್ರ ಸರ್ಕಾರ ಈ ಮಸೂದೆ ಹಿಂಪಡೆಯುವವರೆಗೂ ಹೋರಾಟ ಮುಂದುವರಿಯುತ್ತದೆ. ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಐದು ತಿಂಗಳುಗಳಲ್ಲಿ ನಾಲ್ಕು ಪ್ರತಿಭಟನೆ ನಡೆಸಲಾಗಿದೆ. ಎಸ್‌ಡಿಪಿಐ, ಜಾತ್ಯತೀತ ಸಂಘಟನೆಗಳಿಗೆ ಆಕ್ಷೇಪ ವ್ಯಕ್ತಪಡಿಸಲು […]

DAKSHINA KANNADA HOME LATEST NEWS

ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಆರೋಪಿ ಬಂಧನಕ್ಕೆ ದಲಿತ ಸಂಘಟನೆಗಳ ಆಗ್ರಹ

ಮಂಗಳೂರು: ಬಂಟ್ವಾಳ ತಾಲೂಕಿನ ವಿಟ್ಲ ಮಾಣಿಲ ಗ್ರಾಮದ ಮುರುವದಲ್ಲಿ ದಲಿತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ನಿವಾಸಿ ಮಹೇಶ್ ಭಟ್ ಲೈಂಗಿಕ ಕಿರುಕುಳ ನೀಡಿ ಜಾತಿ ನಿಂದನೆ ಎಸಗಿರುವ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಸೆಕ್ಷನ್ ಹಾಗೂ ದಲಿತ ದೌರ್ಜನ್ಯ ಕಾಯಿದೆಯ ಅನ್ವಯ ಪ್ರಕರಣ ದಾಖಲಾಗಿದ್ದರೂ ಕೂಡ ಪೊಲೀಸ್ ಇಲಾಖೆ ಈ ಕುರಿತು ಕ್ರಮ ಜರುಗಿಸದೇ ಇರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಈ ಕುರಿತು ತಕ್ಷಣ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಲಿತ […]

DAKSHINA KANNADA HISTORY LATEST NEWS

ಮಂಗಳೂರು: 80 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಮಂಗಳೂರು: ಮನೆಯೊಂದರ ಕಿಟಕಿ ಬಾಗಿಲು ಮುರಿದು ಅಪಾರ ಮೌಲ್ಯದ ಚಿನ್ನಾಭರಣ ಕಳವು ಗೈದಿರುವ ಪ್ರಕರಣ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆಯಲ್ಲಿ ಮಂಗಳವಾರ ವರದಿಯಾಗಿದೆ. ಪೆರ್ಮುದೆ ನಿವಾಸಿ ಪ್ರವೀಣ್ ಪಿಂಟೊ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಕಳ್ಳರು ಸುಮಾರು 1.080 ಕೆ.ಜಿಯ ಸುಮಾರು 80 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಗೈದಿದ್ದಾರೆ ಎಂದು ತಿಳಿದು ಬಂದಿದೆ. ಮನೆಯ ಮಾಲಕ ಪ್ರವೀಣ್ ಪಿಂಟೊ ಅವರು ಕುಟುಂಬ ಸಮೇತರಾಗಿ ಮಸ್ಕತ್ ನಲ್ಲಿದ್ದು, ಮಾ.31ರ ರಾತ್ರಿಯಿಂದ ಎ.1ರ ಬೆಳಗ್ಗೆ ಈ […]