Tag: mangaluru

DAKSHINA KANNADA HOME LATEST NEWS

ಮಹಿಳಾ ಪ್ರಧಾನ “ಮೀರಾ” ತುಳು ಸಿನಿಮಾ ಬಿಡುಗಡೆ ಮನೆಮಂದಿ ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸಿ: ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ಅಸ್ತ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಲಂಚು ಲಾಲ್ ಕೆ.ಎಸ್. ನಿರ್ಮಿಸಿರುವ, ಅಶ್ವಥ್ ನಿರ್ದೇಶನದ ‘ಮೀರಾ’ ತುಳು ಚಲನಚಿತ್ರ ಮಂಗಳೂರಿನ ಭಾರತ್ ಮಾಲ್ ನ‌ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು. ತುಳುವಿನಲ್ಲಿ ಬಿಡುಗಡೆ ಗೊಂಡಿರುವ ಮೀರಾ ಸಿನಿಮಾದಲ್ಲಿ ನಮ್ಮ ಮನೆಯ ಸುತ್ತಮುತ್ತಲಿನ ಕತೆ ಇದೆ. ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸ ಬೇಕು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ತುಳುವಿನಲ್ಲಿ ಈಗ ಉತ್ತಮ ಸದಭಿರುಚಿಯ ಸಿನಿಮಾಗಳು ಬರುತ್ತಿದೆ. […]

DAKSHINA KANNADA HOME LATEST NEWS

ಮಂಗಳೂರು: ಸಿಇಟಿ ಪರೀಕ್ಷೆ- ನಿಷೇಧಾಜ್ಞೆ ಜಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ 8 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ – 2025, ಏಪ್ರಿಲ್ 16 ಮತ್ತು 17ರಂದು ನಡೆಯಲಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳಲ್ಲಿ ಕಾನೂನುಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷೆಯನ್ನು ಶಾಂತಿಯುತವಾಗಿ ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸುವ ನಿಟ್ಟಿನಲ್ಲಿ 8 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೆೀಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಮುಲ್ಲೈ ಮುಗಿಲನ್ ಎಂ.ಪಿ. ಆದೇಶಿಸಿದ್ದಾರೆ. […]

DAKSHINA KANNADA HOME LATEST NEWS STATE

ಕೇಂದ್ರವನ್ನು ಪ್ರಶ್ನಿಸುವ ತಾಕತ್ತು ಬಿಜೆಪಿಗರಿಗಿಲ್ಲ: MLC ಮಂಜುನಾಥ ಭಂಡಾರಿ

ಮಂಗಳೂರು: ರಾಜ್ಯ ಸರಕಾರ ಹಾಗೂ ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಹಾಸ್ಯಾಸ್ಪದವಾಗಿದ್ದು, ನಿಜವಾಗಿಯೂ ಬಿಜೆಪಿಗರಿಗೆ ಈ ರಾಜ್ಯದ ಅಭಿವೃದ್ಧಿ ಮತ್ತು ಜನಪರ ಕಾಳಜಿಯಿದ್ದರೆ ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ ನಡೆಸಲಿ. ಬಿಜೆಪಿ ನಾಯಕರಿಗೆ ಪ್ರತಿಭಟನೆ ಬಿಡಿ, ಕೇಂದ್ರ ನಾಯಕರ ವಿರುದ್ಧ ಉಸಿರೆತ್ತುವ ತಾಕತ್ತು ಇಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಲೇವಡಿ ಮಾಡಿದರು. ಕೇಂದ್ರ ಸರಕಾರ ಅಡುಗೆ ಸಿಲಿಂಡರ್ ದರವನ್ನು 50ರೂ. ಏರಿಕೆ ಮಾಡಿದೆ. ಭರವಸೆಗಳ ಸುರಿಮಳೆಯನ್ನೇ ಸುರಿಸಿ […]

DAKSHINA KANNADA HOME LATEST NEWS

ಎ. 11 ರಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ಮಂಗಳೂರು:   ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್  ಎ. 11 ರಂದು  ಜಿಲ್ಲೆಗೆ ಆಗಮಿಸಲಿದ್ದಾರೆ. ಅಂದು ಮಧ್ಯಾಹ್ನ  2:55 – ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, 3:30 – ಉಳ್ಳಾಲ ದರ್ಗಾ ಆವರಣದಲ್ಲಿ  ಉಳ್ಳಾಲ ದರ್ಗಾ  ಉರೂಸ್ ಕುರಿತು ಪೂರ್ವಭಾವಿ ಸಭೆ. ಸಂಜೆ 4:30 –  ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ  ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ, ನೂತನ ಶವಗಾರ ಕಟ್ಟಡ,  […]

HOME LATEST NEWS NATIONAL

ಅಡುಗೆ ಅನಿಲದ ದರ ಏರಿಸಿದ ಕೇಂದ್ರ: 50 ರೂ. ಹೆಚ್ಚಳ

ಮಂಗಳೂರು: ದಿನನಿತ್ಯದ ವಸ್ತುಗಳ ದರ ಹೆಚ್ಚಳದ ನಡುವೆಯೇ ಅಡುಗೆ ಅನಿಲದ ದರವನ್ನು 50 ರೂಪಾಯಿಗೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಇದು ಸಾಮಾನ್ಯ ಸಿಲಿಂಡ‌ರ್ ಜತೆ ಉಜ್ವಲಾ ಯೋಜನೆಗೂ ಅನ್ವಯವಾಗಲಿದೆ. ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. ಅಡುಗೆ ಅನಿಲದ ದರವನ್ನು ಉಜ್ವಲಾ ಯೋಜನೆ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಹೆಚ್ಚಿಸಲಾಗಿದೆ. ಹೊಸ ದರದ ಅನ್ವಯ 14.2 ಕೇಜಿ ಅಡುಗೆ ಅನಿಲದ ದರ […]

HOME LATEST NEWS NATIONAL

ವಕ್ಫ್‌ ತಿದ್ದುಪಡಿ ಮಸೂದೆಗೆ ಬೆಂಬಲ: ಬಿಜೆಪಿ ನಾಯಕನ ಮನೆಗೆ ಬೆಂಕಿ

ಇಂಫಾಲ್‌: ಕೇಂದ್ರದ ವಕ್ಫ್‌ ತಿದ್ದುಪಡಿ ಮಸೂದೆಗೆ ಬೆಂಬಲಿಸಿದ ಆರೋಪದ ಮೇಲೆ, ಬಿಜೆಪಿಯ ಮಣಿಪುರ ಘಟಕದ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷನ ಮನೆಗೆ ಗುಂಪೊಂದು ದಾಳಿ ಮಾಡಿ ಬೆಂಕಿ ಹಚ್ಚಿದೆ. ಬಿಜೆಪಿಯ ಮಣಿಪುರ ಘಟಕದ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಅಸ್ಕರ್‌ ಅಲಿ ಮನೆಗೆ ಗುಂಪೊಂದು ಭಾನುವಾರ ರಾತ್ರಿ ದಾಳಿ ಮಾಡಿ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯು ಥೌಬಾಲ್‌ ಜಿಲ್ಲೆಯ ಲಿಲೊಂಗ್ ಎಂಬಲ್ಲಿ ನಡೆದಿದೆ. ವಕ್ಫ್‌ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿ ಅಸ್ಕರ್‌ ಅಲಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ […]

COMMUNITY NEWS DAKSHINA KANNADA HOME LATEST NEWS

ವಿಟ್ಲ: ಫಾತಿಮಾ ಮಾತಾ ದೇವಾಲಯದಲ್ಲಿ ಶಿಲುಬೆ ಯಾತ್ರೆ

ಬಂಟ್ವಾಳ: ತಾಲೂಕಿನ ವಿಟ್ಲದ ಪೆರುವಾಯಿಯ ಫಾತಿಮಾ ಮಾತಾ ದೇವಾಲಯದಲ್ಲಿ ಶಿಲುಬೆ ಯಾತ್ರೆಯು (ಖುರ್ಸಾವಾಟ್‌) ಇಂದು ನಡೆಯಿತು. ಮೊದಲು ನಡೆದ ಬಲಿಪೂಜೆಯನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಹಾಸ್ಟೆಲ್‌ ವಾರ್ಡನ್‌ ವಂ. ರೂಪೇಶ್‌ ತಾವ್ರೊ ನೆರವೇರಿಸಿದರು. ನಂತರ ಚರ್ಚ್‌ ಆವರಣದಿಂದ ನಡೆದ ಶಿಲುಬೆ ಯಾತ್ರೆಯು ಸರಿಸುಮಾರು 2 ಕೀ.ಮೀ ಸಾಗಿ ತಾಬೋರ್‌ ಪರ್ವತ (ಗುಡ್ಡ ಪ್ರದೇಶ)ದಲ್ಲಿ ಸಂಪನ್ನಗೊಂಡಿತು. ಈ ವೇಳೆ ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ […]

DAKSHINA KANNADA HOME LATEST NEWS

ಕ್ರೈಸ್ತರ ಪವಿತ್ರವಾರದಲ್ಲಿ SSLC ಮೌಲ್ಯಮಾಪನ ರದ್ದು ಕೋರಿ ಕಥೋಲಿಕಾ ಸಭಾದಿಂದ ಮನವಿ

ಮಂಗಳೂರು: SSLC ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಏಪ್ರಿಲ್ 15, 2025ರಿಂದ ಪ್ರಾರಂಭವಾಗಲಿದೆ. ಅಂದು ಕ್ರೈಸ್ತ ಸಮುದಾಯಕ್ಕೆ ಶುಭ ಗುರುವಾರ ಸೇರಿದಂತೆ ಮೂರು ದಿನಗಳ ನಿರಂತರ ಹಬ್ಬದ ಪ್ರಯುಕ್ತ ಕ್ರೈಸ್ತ ಶಿಕ್ಷಕರಿಗೆ ಮೌಲ್ಯಮಾಪನದಿಂದ ರಿಯಾಯಿತಿ ಕೋರುವಂತೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ವತಿಯಿಂದ ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದೆ. ಕಳೆದ ಶನಿವಾರ ಮನವಿ ಸಲ್ಲಿಸಿದ ನಿಯೋಗ, ದ.ಕ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದ ಶಿಕ್ಷಕರಿದ್ದು, ಏ.15 ಹಾಗೂ ಮೂರು ದಿನಗಳ ಕಾಲ ನಡೆಯುವ […]

DAKSHINA KANNADA HOME LATEST NEWS

ನಂಬರ್‌ ಪ್ಲೇಟ್‌ಗೆ ಪ್ಲಾಸ್ಟಿಕ್‌ ಮುಚ್ಚಿ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ದಂಡ

ಮಂಗಳೂರು: ಸ್ಕೂಟರ್ ಸವಾರನೊಬ್ಬ ತನ್ನ ಹಿಂಬದಿಯ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ, ಹೆಲ್ಮೆಟ್ ಧರಿಸದೆ ಚಲಾಯಿಸುತ್ತಿದ್ದ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸದ್ಯ ಈ ಪ್ರಕರಣದಲ್ಲಿ ವೈರಲ್‌ ಆಗಿದ್ದ ಸ್ಕೂಟರ್‌ನ್ನು ಪತ್ತೆಹಚ್ಚಿದ ಮಂಗಳೂರು ನಗರ ಪೊಲೀಸರು ದಂಡ ವಿಧಿಸಿದ್ದಾರೆ. ಮಾ.23ರಂದು ಸಂಜೆ 4 ಗಂಟೆಯಿಂದ 4:10ರ ಸಮಯಕ್ಕೆ ಬೆಂದೂರ್‌ವೆಲ್, ಕಂಕನಾಡಿ, ಪಂಪ್‌ವೆಲ್ ರಸ್ತೆಯಲ್ಲಿ ಸ್ಕೂಟರ್ ಸವಾರನೊಬ್ಬ ಸ್ಕೂಟರ್‌ನ ಹಿಂಬದಿಯ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್‌ನಿಂದ  ಮುಚ್ಚಿ  ಹೆಲ್ಮೆಟ್ ಧರಿಸದೆ ತೊಕ್ಕೊಟ್ಟು ಕಡೆಗೆ ಚಲಾಯಿಸಿಕೊಂಡು […]

DAKSHINA KANNADA HOME LATEST NEWS

ಕಡಬ, ನೆಲ್ಯಾಡಿ ಗಾಳಿ- ಸಿಡಿಲು ಸಹಿತ ಭಾರೀ ಮಳೆ: ವಿದ್ಯುತ್‌ ಸಂಪರ್ಕ ಕಡಿತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಸಂಜೆ ವೇಳೆಗೆ ವರುಣ ತಂಪೆರೆದಿದ್ದಾನೆ. ಸಂಜೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ನೆಲ್ಯಾಡಿ, ಪುತ್ತೂರಿನಲ್ಲಿ ಗಾಳಿ, ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಭಾರೀ ಗಾಳಿಯ ಪರಿಣಾಮ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಮಂಗಳೂರು ನಗರದ ಸುತ್ತಮುತ್ತ ಸಾಧಾರಣ ಮಳೆಯಾಗಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ.