Tag: mangaluru city police

DAKSHINA KANNADA HOME LATEST NEWS

ನಂಬರ್‌ ಪ್ಲೇಟ್‌ಗೆ ಪ್ಲಾಸ್ಟಿಕ್‌ ಮುಚ್ಚಿ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ದಂಡ

ಮಂಗಳೂರು: ಸ್ಕೂಟರ್ ಸವಾರನೊಬ್ಬ ತನ್ನ ಹಿಂಬದಿಯ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ, ಹೆಲ್ಮೆಟ್ ಧರಿಸದೆ ಚಲಾಯಿಸುತ್ತಿದ್ದ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸದ್ಯ ಈ ಪ್ರಕರಣದಲ್ಲಿ ವೈರಲ್‌ ಆಗಿದ್ದ ಸ್ಕೂಟರ್‌ನ್ನು ಪತ್ತೆಹಚ್ಚಿದ ಮಂಗಳೂರು ನಗರ ಪೊಲೀಸರು ದಂಡ ವಿಧಿಸಿದ್ದಾರೆ. ಮಾ.23ರಂದು ಸಂಜೆ 4 ಗಂಟೆಯಿಂದ 4:10ರ ಸಮಯಕ್ಕೆ ಬೆಂದೂರ್‌ವೆಲ್, ಕಂಕನಾಡಿ, ಪಂಪ್‌ವೆಲ್ ರಸ್ತೆಯಲ್ಲಿ ಸ್ಕೂಟರ್ ಸವಾರನೊಬ್ಬ ಸ್ಕೂಟರ್‌ನ ಹಿಂಬದಿಯ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್‌ನಿಂದ  ಮುಚ್ಚಿ  ಹೆಲ್ಮೆಟ್ ಧರಿಸದೆ ತೊಕ್ಕೊಟ್ಟು ಕಡೆಗೆ ಚಲಾಯಿಸಿಕೊಂಡು […]

DAKSHINA KANNADA HOME LATEST NEWS

ಕಾಲೇಜಿಗೆ ಹೋಗುತ್ತಿದ್ದ ಯುವಕ ನಾಪತ್ತೆ

ಮಂಗಳೂರು: ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕಾಲೇಜಿನಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಬಿಹಾರ ಮೂಲದ ಸುಧಾಂಶುಕುಮಾರ (21 ) ಎಂಬವರು ಕಾಣೆಯಾಗಿದ್ದಾರೆ. `ಕಾಣೆಯಾದವರ ಚಹರೆ : ಸುಮಾರು 5.6 ಅಡಿ, ಸಾಧಾರಣ ಶರೀರ, ಗೋದಿ ಮೈ ಬಣ್ಣ ಹೊಂದಿರುತ್ತಾರೆ. ಕಾಣೆಯಾದ ದಿನ ಕೆಂಪು ಬಣ್ಣದ ಟಿ ಶರ್ಟ್, ಬರ್ಮುಡ ಪ್ಯಾಂಟ್ ಧರಿಸಿದ್ದರು. ಹಿಂದಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಪಣಂಬೂರು ಪೆÇಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

DAKSHINA KANNADA HOME LATEST NEWS

ಮಂಗಳೂರು: ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ-40 ಲೀ.ನಷ್ಟು ಬೆಲ್ಲದ ಕೊಳೆ ಪತ್ತೆ

ಮಂಗಳೂರು: ಆಡಂಕುದ್ರುನಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಉರ್ಬನ್‌ ಡಿಸೋಜಾ ಎಂಬಾತನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ 5 ಲೀಟರ್‌ ಕಳ್ಳಭಟ್ಟಿ ಸಾರಾಯಿ, ಕಳ್ಳಭಟ್ಟಿ ತಯಾರಿಸಲು ಉಪಯೋಗಿಸುತ್ತಿದ್ದ ಸಲಕರಣೆಗಳು, 40 ಲೀ.ನಷ್ಟು ಬೆಲ್ಲದ ಕೊಳೆ ಪತ್ತೆಯಾಗಿದೆ. ಮಂಗಳೂರು ದಕ್ಷಿಣ ವಲಯದ ಅಬಕಾರಿ ಕಮಲ ಎಚ್‌. ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಬಕಾರಿ ಉಪನಿರೀಕ್ಷಕ ಹರೀಶ್‌ ಪಿ. ಕಾನ್ಸ್ಟೇಬಲ್‌ಗಳಾದ ಬಸವಾರಜ ತೊರೆ, ಆನಂದ್‌, ವಾಹನಚಾಲಕ ರಘುರಾಮ ಕಾರ್ಯಚರಣೆಯಲ್ಲಿ ಸಹಕರಿಸಿದ್ದರು.

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678