Tag: mangalore

DAKSHINA KANNADA HOME LATEST NEWS

ಕೊಣಾಜೆ: ಯುವತಿ ನಾಪತ್ತೆ

ಕೊಣಾಜೆ:  ಇಲ್ಲಿನ ಠಾಣಾ‌ ವ್ಯಾಪ್ತಿಯ ಮಹಿಳಾ ಆಶ್ರಯ ಕೇಂದ್ರದಲ್ಲಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಒಡಿಷಾ ಮೂಲದ ತ್ರಿಶಾ (22) ಎಂಬಾಕೆಯೇ ನಾಪತ್ತೆಯಾದ ಯುವತಿಯಾಗಿದ್ದು, ಈಕೆ ಜುಲೈ 30ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾಪತ್ತೆಯಾಗಿದ್ದಾಳೆ.  ಕಳೆದ‌ ವರ್ಷ ತ್ರಿಶಾ ಉದ್ಯೋಗದ ಹುಡುಕಾಟದಲ್ಲಿ ಮಂಗಳೂರಿಗೆ ಬಂದಿದ್ದಳು ಎನ್ನಲಾಗಿದ್ದು‌ ಬಳಿಕ, ಇತ್ತೀಚೆಗೆ ಮಡಿಪುವಿನ ಪ್ರಜ್ಞಾ ಆಶ್ರಯ ಮಂದಿರದಲ್ಲಿ ವಾಸವಾಗಿದ್ದಳು. ಈಕೆ ಜುಲೈ 30 ರಂದು ರಾತ್ರಿ ಅಡುಗೆ ಕೋಣೆಯ ಬಾಗಿಲು ತೆರೆದು ಕೌಂಪೌಂಡು ಹಾರಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. […]

HOME

ಮಂಗಳೂರು: 1300 ಕೋ.ರೂ ವ್ಯವಹಾರದ 113 ವರ್ಷಗಳ ಇತಿಹಾಸದ MCC ಬ್ಯಾಂಕಿನ 20ನೇ ಶಾಖೆ ಬೈಂದೂರಿನಲ್ಲಿ

ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2025 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾಪನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಸಹಕಾರ ರತ್ನ ಅನಿಲ್ ಲೋಬೊ ಅವರು ತಿಳಿಸಿದರು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಕರ್ನಾಟಕದ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯು ಪ್ರಸ್ತುತ ಆಡಳಿತ […]

DAKSHINA KANNADA HOME

ಹಿರಿಯ ಸಾಹಿತಿ ಗ್ಲ್ಯಾಡಿಸ್ ರೇಗೊಗೆ ಶೃದ್ಧಾಂಜಲಿ

ಮಂಗಳೂರು: ಕೊಂಕಣಿ ಭಾಷಾ ಕರ್ನಾಟಕ ಇದರ ಕಾರ್ಯಕಾರಿ ಸಭೆಯಲ್ಲಿ ಇತ್ತೀಚಿಗೆ ನಿಧನರಾದ ಕೊಂಕಣಿ ಭಾಷೆಗೆ 27 ಪುಸ್ತಕ ದೇಣಿಗೆ ನೀಡಿದ ಹಿರಿಯ ಸಾಹಿತಿ ಗ್ಲ್ಯಾಡಿಸ್ ರೇಗೊ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಈ ವೇಳೆ ಮಾತನಾಡಿದ ಕೆಬಿಎಂಕೆ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ, ಲೈಬ್ರೆರಿಗಳಲ್ಲಿ ಹುಡುಕಿ ಹಲವು ಸಾಹಿತ್ಯದ ವಿವಿಧ ದಾಖಲೆಗಳನ್ನು ತೆಗೆದು ತನ್ನ ಸ್ವಂತ ಖರ್ಚಿನಲ್ಲಿ ಪುಸ್ತಕ ಪ್ರಕಾಶನ ಮಾಡಿದ ಸಾಹಿತ್ಯದ ಶ್ರಮಜೀವಿ ಗ್ಲ್ಯಾಡಿಸ್ ರೇಗೊ ಆಗಿದ್ದರು ಎಂದು ಗುಣಗಾನ ಮಾಡಿದರು. ಕವಿ ಜೊಸ್ಸಿ ಪಿಂಟೊ ಮಾತನಾಡಿ,ಕೊಂಕಣಿ […]

DAKSHINA KANNADA HOME LATEST NEWS

ಮಂಗಳೂರು: ಜು.22 ರ ರಾತ್ರಿಯಿಂದ ಕೂಳೂರು ರಸ್ತೆ ದುರಸ್ಥಿ ಕಾಮಗಾರಿ

ಮಂಗಳೂರು: ನಗರದ ರಾಷ್ಟ್ರೀಯ ಹೆದ್ದಾರಿ-66 ರ ಕೂಳೂರು ಹಳೇ ಸೇತುವೆಯ ಬಳಿಯ ಕೆ.ಐ.ಓ.ಸಿ.ಎಲ್ ಜಂಕ್ಷನ್‌ನಿಂದ ಅಯ್ಯಪ್ಪ ಗುಡಿಯವರೆಗೆ ಜು.22 ರ ಮಂಗಳವಾರ ರಾತ್ರಿ 8-00 ಗಂಟೆಯಿಂದ ಜು.25ರ ಗುರುವಾರ ಬೆಳಿಗ್ಗೆ 8-00 ರವರೆಗೆ ರಸ್ತೆ ದುರಸ್ಥಿ ಕಾಮಗಾರಿ ನಡೆಯಲಿದೆ. ಹಾಗಾಗಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುವ ಕೂಳೂರು ಹೊಸ ಸೇತುವೆಯಲ್ಲಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತದೆ. ಆದರಿಂದ ಕೋಡಿಕಲ್ ಕ್ರಾಸ್‌ನಿಂದ ಕೆ.ಐ.ಓ.ಸಿ.ಎಲ್ ಜಂಕ್ಷನ್‌ವರೆಗೆ ಅದೇ ರೀತಿ ಪಣಂಬೂರು ಜಂಕ್ಷನ್‌ನಿಂದ ಕೆ.ಐ.ಓ.ಸಿ.ಎಲ್ ಜಂಕ್ಷನ್‌ವರೆಗೆ ಸಂಚಾರ ದಟ್ಟಣೆ ಹೆಚ್ಚಾಗಬಹುದಾಗಿದೆ. ಆದ್ದರಿಂದ […]

DAKSHINA KANNADA HOME

ನಾಯಕತ್ವವು ಉತ್ತಮ ಗುಣ & ಪ್ರತಿಭೆಗಳನ್ನು ಹೊರತರುವ ಅವಕಾಶ: ರೆ. ಫಾ.ವಾಲ್ಟರ್ ಡಿಸೋಜಾ

ಮಂಗಳೂರು: ನಗರದ ಪಾದುವ ಪದವಿ ಪೂರ್ವ  ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪ್ರತಿಭಾ ದಿನ ಸಂತ ಸೆಬಾಸ್ಟಿಯನ್ ಹಾಲ್ ಬೆಂದೂರ್ ನಲ್ಲಿ ಜರಗಿತು.ಅಧ್ಯಕ್ಷತೆ ವಹಿಸಿದ್ದ ಪಾದುವ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ .ಫಾ.ವಾಲ್ಟರ್ ಡಿಸೋಜಾ ಮಾತನಾಡಿ,  ನಾಯಕತ್ವವು  ಕೇವಲ ಸ್ಥಾನ ಅಥವಾ ಬಿರುದುಗಲಾಗಿರದೆ, ಅದು ಇತರರಲ್ಲಿ ಉತ್ತಮವಾದ ಗುಣ ಮತ್ತು ಪ್ರತಿಭೆಗಳನ್ನು ಹೊರತರುವ ಅವಕಾಶ ಎಂದು ಹೇಳಿದರು. ಮುಖ್ಯ ಅತಿಥಿಯಾದ ಲೆಸ್ಲಿ ನೋಯೆಲ್ ರೇಗೊ ಮಾತನಾಡಿ, ಕಾಲೇಜು ಜೀವನವೆಂದರೆ ವ್ಯಕ್ತಿತ್ವ ನಿರ್ಮಾಣಕ್ಕೆ ಅವಕಾಶ. ವಿದ್ಯಾರ್ಥಿಗಳು ಯಶಸ್ಸಿನ […]

LATEST NEWS

ಸೈಂಟ್ ಅಲೋಶಿಯಸ್ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಫೇರ್‌ವೆಲ್‌

ಮಂಗಳೂರು: ಸೈಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯುನಿವರ್ಸಿಟಿ) ಯ ಎಐಎಂಐಟಿ ಕೇಂದ್ರದ ಎಂ.ಬಿ.ಎ ವಿಭಾಗವು ಜೂನ್ 19ರಂದು  ಆರ್ಥರ್ ಶೆಣೈ ಆಡಿಯಟೋರಿಯಂನಲ್ಲಿ 2023–2025 ಎಂ.ಬಿ.ಎ ಬ್ಯಾಚ್ ವಿದ್ಯಾರ್ಥಿಗಳಿಗೆ ಪ್ರಾರ್ಥನಾ ಸೇವೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮ ವಿದ್ಯಾರ್ಥಿಗಳ ಮುಂದಿನ ಹಂತದ ಶುಭ ಕೋರುವ ಕಾರ್ಯಕ್ರಮವಾಗಿತ್ತು. ಡಾ. ಫಾ. ಮನುಜ್ ಎಸ್‌ಜೆ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಎಲ್ಲರನ್ನೂ ತಮ್ಮ ಆಶೀರ್ವಾದಗಳ ಕುರಿತು ಚಿಂತನೆ ಮಾಡಿಕೊಳ್ಳುವಂತೆ ಆಹ್ವಾನಿಸಿದರು. ಅವರ ಸಂದೇಶ ಧನ್ಯತೆಯ ಮಹತ್ವದ ಮೇಲೆ ಕೇಂದ್ರಿತವಾಗಿದ್ದು, […]

DAKSHINA KANNADA HOME LATEST NEWS

ದುಬೈನಲ್ಲಿ ಎಂಸಿಸಿ ಬ್ಯಾಂಕ್ ಎನ್ಆರ್‌ಐ ‘ಅಂತರ್ದೃಷ್ಟಿ ಮತ್ತು ಸಂವಾದ’ ಸಭೆ

ದುಬೈ: ಎಂಸಿಸಿ ಬ್ಯಾಂಕ್ ಜೂನ್ 15ರಂದು ದುಬೈಯ ಕರಾಮಾದ ವಿಜಿ ರೆಸ್ಟೋರೆಂಟ್‌ನಲ್ಲಿ ‘ಅಂತರ್ದೃಷ್ಟಿ ಮತ್ತು ಸಂವಾದ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಕ್ರಮವನ್ನು ದುಬೈನಲ್ಲಿ ನೆಲೆಸಿರುವ ಪ್ರಸಿದ್ಧ ಮಂಗಳೂರು ಮೂಲದ ವ್ಯಕ್ತಿ ಶ್ರೀ ಡಯಾನ್ ಡಿಸೋಜಾ ಇವರು ನಡೆಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಡಯಾನ್’ರವರು, ಪ್ರಸ್ತುತ ಬ್ಯಾಂಕಿಂಗ್ ಪರಿಸ್ಥಿತಿ ಮತ್ತು ಎಂಸಿಸಿ ಬ್ಯಾಂಕ್‌ನ ಸ್ಥಿತಿಗತಿಯ ಬಗ್ಗೆ ಪ್ರಸ್ತಾಪಿಸಿದರು. ಮಂಗಳೂರು ಮೂಲದ ಮತ್ತೊಬ್ಬ ಪ್ರಖ್ಯಾತ ಸಮುದಾಯ ನಾಯಕ ಹಾಗೂ ದಾಯ್ಜಿವರ್ಲ್ಡ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಸಮುದಾಯವನ್ನು ಒಂದು ಗುರಿಯತ್ತ […]

DAKSHINA KANNADA

ಪ್ರವಾಹ ಪೀಡಿತ ಪ್ರದೇಶದ ಶಾಶ್ವತ ಪರಿಹಾರಕ್ಕೆ ಕ್ರಮ:- ಶಾಸಕ ಕಾಮತ್

ಮಂಗಳೂರು: ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ನಗರದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿ ಜನಜೀವನ ಅಸ್ತವ್ಯಸ್ತಗೊಂಡ ಹಿನ್ನಲೆಯಲ್ಲಿ ಇಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಎಕ್ಕೂರು, ತೋಚಿಲ ಕಟ್ಟಪುಣಿ, ರಾಷ್ಟ್ರೀಯ ಹೆದ್ದಾರಿ ಬಳಿಯ ವೈದ್ಯನಾಥ ನಗರ, ಜಪ್ಪಿನಮೊಗರುವಿನ ಗಣೇಶ ನಗರ, ರಾಜಕಾಲುವೆ ಸೇರುವ ನೇತ್ರಾವತಿ ತೀರದ ಕಡೇಕಾರು ಪ್ರದೇಶ, ಮೊದಲಾದ ಪ್ರದೇಶಗಳ, ನೆರೆ ಪರಿಸ್ಥಿತಿಗೆ ಕಾರಣ, ತುರ್ತಾಗಿ ನಡೆಯಬೇಕಿರುವ ಕಾರ್ಯ, ಭವಿಷ್ಯದಲ್ಲಿ ಪ್ರವಾಹ ಮರುಕಳಿಸದಂತೆ […]

DAKSHINA KANNADA HOME LATEST NEWS

ಎಮ್‌ಸಿಸಿ ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆ

ಮಂಗಳೂರು: ಕಥೋಲಿಕ್ ಕೋ ಅಪರೇಟಿವ್ (ಎಮ್.ಸಿ.ಸಿ.) ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಜೂ.14 ರಂದು ಬ್ಯಾಂಕಿನ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಮೆಮೊರಿಯಲ್ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ಧರ್ಮ ಪ್ರಾಂತ್ಯದ ರೊಸಾರಿಯೊ ಕಾಥೆದ್ರಾಲ್ ಚರ್ಚಿನ ರೆಕ್ಟರ್ ಹಾಗೂ ಪ್ರಧಾನ ಧರ್ಮಗುರುಗಳಾದ ವಂದನೀಯ ವಲೇರಿಯ ಡಿಸೋಜ ಇವರು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ವಂದನೀಯ ವಲೇರಿಯ ಡಿಸೋಜ […]

DAKSHINA KANNADA

ಹರಿ ಓಂ ಸೇವಾ ಸಂಸ್ಥೆ ವಾಸುಕಿ ನಗರ ಎಕ್ಕೂರು   ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ನಿರ್ಮಿಸಿದ ನೂತನ ಮನೆ ಹಸ್ತಾಂತರ

ಮಂಗಳೂರು ; ಹರಿ ಓಂ ಸೇವಾ ಸಂಸ್ಥೆ ವಾಸುಕಿ ನಗರ ಎಕ್ಕೂರು ಇವರ ವತಿಯಿಂದ ಹಾಗೂ ದಾನಿಗಳ ಸಹಯೋಗದೊಂದಿಗೆ ಬಿಜೆಪಿ ಮಂಗಳೂರು ದಕ್ಷಿಣ ಉಪಾಧ್ಯಕ್ಷರಾದ ಶ್ರೀ ಕಿರಣ್ ರೈ ಬಜಾಲ್ ರವರ ನೇತೃತ್ವದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಶ್ರೀ ಮತಿ ಯಮುನಾ ಪೂಜಾರಿ ಕುಟುಂಬಸ್ಥರೊಗೆ ನೂತನವಾಗಿ ನಿರ್ಮಿಸಿದ ಗೃಹ “ಹರಿ ಓಂ” ಹೆಸರಿನ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಬಳಿಕ ಮಾತನಾಡಿದ ಕಿರಣ್ ರೈ ಯವರು ಹರಿ ಓಂ ಸೇವಾ ಸಂಸ್ಥೆ ಬಡ ಕುಟುಂಬದ ಮನೆ […]