ಕೊಂಕಣಿ ಸಂಗೀತ ಕ್ಷೇತ್ರದ ದಿಗ್ಗಜ ಎರಿಕ್ ಬಾಬ್ ಒಜಾರಿಯೋ ನಿಧನ
ಮಂಗಳೂರು: ಕೊಂಕಣಿ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ದಿಗ್ಗಜ ಎರಿಕ್ ಅಲೆಕ್ಸಾಂಡರ್ ಒಜಾರಿಯೊ ಅವರು ಶುಕ್ರವಾರ, ಆಗಸ್ಟ್ 29 ರಂದು ತಮ್ಮ 76 ನೇ ವಯಸ್ಸಿನಲ್ಲಿ ಇಲ್ಲಿ ನಿಧನರಾದರು. ಮೂತ್ರಪಿಂಡ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 19 ದಿನಗಳ ಚಿಕಿತ್ಸೆಯ ಬಳಿಕ ಕಾಯಿಲೆ ನಿಯಂತ್ರಣಕ್ಕೆ ಬರದೆ ಅವರು ವಿಧಿವಶರಾಗಿದ್ದಾರೆ. ಎರಿಕ್ ಒಜಾರಿಯೊ ಎಂದೇ ಜನಪ್ರಿಯರಾಗಿದ್ದ ಅವರು ಮೇ 18, 1949 ರಂದು ಮಂಗಳೂರಿನ ಜೆಪ್ಪುವಿನಲ್ಲಿ ಜನಿಸಿದರು ಮತ್ತು ಪ್ರಸಿದ್ಧ ಕೊಂಕಣಿ […]











