ಬಸ್ ಕಾಯುತ್ತಿದ್ದ ತಾಯಿ, ಮಗಳಿಗೆ ಟ್ರೈಲರ್ ಢಿಕ್ಕಿ: ಓರ್ವ ಗಂಭೀರ
ಮುಲ್ಕಿ: ರಸ್ತೆ ಬದಿ ಬಸ್ ಕಾಯುತ್ತಿದ್ದ ತಾಯಿ, ಮಗಳಿಗೆ ಟ್ರೈಲರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡಿರುವ ಘಟನೆ ಪಾವಂಜೆ ದೇವಸ್ಥಾನದ ಮುಂಭಾಗ ಇಂದು ಸಂಜೆ ನಡೆಸಿದೆ. ಗಾಯಗೊಂಡವರನ್ನು ಶಿಕ್ಷಕಿ ಕುಸುಮಾ ಮತ್ತು ಅವರ ಮಗಳು ಸುಮಲತಾ (14) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಾವಂಜೆಯಲ್ಲಿ ನಿಂತು ಬಸ್ ಕಾಯುತ್ತಿದ್ದ ವೇಳೆ ಮಂಗಳೂರು- ಉಡುಪಿ ಕಡೆ ಸಂಚರಿಸುತ್ತಿದ ಟ್ರೈಲರ್ ಢಿಕ್ಕಿ ಹೊಡೆದಿದೆ. ಘಟನೆಯಿಂದ ಕುಸುಮಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಸುಮಲತಾ ಅವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ […]










