Tag: dubai

DAKSHINA KANNADA HOME LATEST NEWS

ಗಲ್ಫ್‌ ನಿವೃತ್ತರ ಕಲ್ಯಾಣಕ್ಕಾಗಿ ಸಮಗ್ರ ಯೋಜನೆ ರೂಪಿಸಿ: ಗಲ್ಫ್ ರಿಟಾಯರೀಸ್ ಅಸೋಸಿಯೇಶನ್‌ ಮನವಿ

ಮಂಗಳೂರು: ಗಲ್ಫ್ ದೇಶಗಳಲ್ಲಿ ದೀರ್ಘಕಾಲ ಉದ್ಯೋಗ ನಿರ್ವಹಿಸಿ ನಂತರ ಉದ್ಯೋಗ ನಷ್ಟ, ವಯೋಮಿತಿ ಹಾಗೂ ಆರೋಗ್ಯ ಸಮಸ್ಯೆಗಳ ಕಾರಣದಿಂದ ಸ್ವದೇಶಕ್ಕೆ ಮರಳಿರುವ ನಿವೃತ್ತ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಸಮಗ್ರ ಯೋಜನೆ ರೂಪಿಸಬೇಕೆಂದು ಗಲ್ಫ್ ರಿಟಾಯರೀಸ್ ಅಸೋಸಿಯೇಶನ್‌ (GRA) ಮನವಿ ಮಾಡಿದೆ. ಈ ಸಂಬಂಧ ಫೆ.12ರಂದು ಸಂಘದ ಪದಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಗಲ್ಫ್ ದೇಶಗಳಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಈ ಕಾರ್ಮಿಕರು ಗಳಿಸಿದ ವಿದೇಶಿ ವಿನಿಮಯವು ದೇಶದ ಆರ್ಥಿಕ […]

DAKSHINA KANNADA HOME INETRNATIONAL LATEST NEWS

ಅಬುಧಾಬಿ: ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ 45 ಕೋಟಿ ರೂ. ಗೆದ್ದ ಉಡುಪಿಯ ಶಾಂತನು ಶೆಟ್ಟಿಗಾರ್

ಅಬುಧಾಬಿ: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ ಉಡುಪಿಯ ಉದ್ಯಾವರದ ವ್ಯಕ್ತಿಯೊಬ್ಬರು 20 ಮಿಲಿಯನ್ ದಿರ್ಹಮ್ (ಸುಮಾರು 45 ಕೋಟಿ ರೂಪಾಯಿಗೂ ಅಧಿಕ) ಮೊತ್ತದ ಬೃಹತ್‌ ಬಹುಮಾನವನ್ನು ಗೆದ್ದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಅರೆಬಿಯನ್‌ ಡೈಲಿಯು ಸುದ್ದಿ ಪ್ರಸಾರ ಮಾಡಿದೆ. ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಅನಿವಾಸಿ ಭಾರತೀಯ ಶಾಂತನು ಶೆಟ್ಟಿಗಾರ್ ಈ ಲಾಟರಿ ಗೆದ್ದಿದ್ದಾರೆ. ಪ್ರಸ್ತುತ ಓಮನ್‌ನ ರಿಟೇಲ್ ವಲಯದಲ್ಲಿ ಕೆಲಸ ಮಾಡುತ್ತಿರುವ ಇವರು ಖರೀದಿಸಿದ್ದ 305810 ಸಂಖ್ಯೆಯ ಟಿಕೆಟ್‌ಗೆ ‘ಸರಣಿ 283’ರ ಈ […]

HOME INETRNATIONAL LATEST NEWS NATIONAL

ಭಾರತಕ್ಕೆ ಬಂದಿಳಿದ ದುಬೈ ಯುವರಾಜ: ಪ್ರಧಾನಿ ಮೋದಿ ಭೇಟಿ

ಹೊಸದಿಲ್ಲಿ: ದುಬೈನ ಯುವರಾಜ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಮಂಗಳವಾರ ತಮ್ಮ ಮೊದಲ ಅಧಿಕೃತ ಭೇಟಿಗಾಗಿ ಹೊಸದಿಲ್ಲಿಗೆ ಆಗಮಿಸಿದ್ದು, ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ದುಬೈ ಯುವರಾಜ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರನ್ನು ಕೇಂದ್ರ ಪ್ರವಾಸೋದ್ಯಮ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ಸ್ವಾಗತಿಸಿದರು. ಬಳಿಕ ದುಬೈ ಯುವರಾಜನಿಗೆ ವಿದ್ಯುಕ್ತವಾಗಿ ಸರಕಾರಿ ಗೌರವವನ್ನು ನೀಡಲಾಗಿದೆ.  […]

HOME INETRNATIONAL LATEST NEWS

UAEಯ ದಿರ್ಹಮ್‌ ಕರೆನ್ಸಿಗೆ ನೂತನ ಚಿಹ್ನೆ

ಅಬುಧಾಬಿ: ಯುಎಇ ತನ್ನ ಕರೆನ್ಸಿ ದಿರ್ಹಮ್‌ನ ಹೊಸ ಚಿಹ್ನೆಯನ್ನು ಗುರುವಾರ ಅನಾವರಣಗೊಳಿಸಿದೆ ಮತ್ತು ಮುಂಬರುವ ಡಿಜಿಟಲ್ ದಿರ್ಹಮ್ ಕುರಿತು ಪ್ರಮುಖ ನವೀಕರಣಗಳನ್ನು ಪ್ರಕಟಿಸಿದೆ. ಯುಎಇ ಸೆಂಟ್ರಲ್ ಬ್ಯಾಂಕ್ ಪ್ರಕಾರ, ಸರ್ಕಾರಿ ಬೆಂಬಲಿತ ಡಿಜಿಟಲ್ ಕರೆನ್ಸಿ 2025 ರ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ. ಯುಎಇ ಸೆಂಟ್ರಲ್ ಬ್ಯಾಂಕ್ ರಾಷ್ಟ್ರೀಯ ಹೆಮ್ಮೆಯನ್ನು ಪ್ರತಿಬಿಂಬಿಸಲು ದಿರ್ಹಮ್‌ಗಾಗಿ ಹೊಸ ವಿನ್ಯಾಸವನ್ನು ಪರಿಚಯಿಸಿದ್ದು. ಡಿಜಿಟಲ್ ಆವೃತ್ತಿಯು ಯುಎಇ ಧ್ವಜದ ಬಣ್ಣಗಳಲ್ಲಿ ಚಿಹ್ನೆಯ ಸುತ್ತಲೂ ವೃತ್ತವನ್ನು ಒಳಗೊಂಡಿದೆ. ಜೊತೆಗೆ ಯುಎಇ ಇತ್ತೀಚೆಗೆ ಹೊಸ 100 ದಿರ್ಹಾಮ್‌ನ […]