ಸತ್ತಾಗ ಎಷ್ಟು ಜನ ದುಃಖಿಸುತ್ತಾರೆ ಎಂದು ತಿಳಿಯಲು ಸಾವಿನ ನಟನೆ ಮಾಡಿದ ನಿವೃತ್ತ ಯೋಧ
ಪಾಟ್ನಾ : ಬಿಹಾರದಲ್ಲಿ ಮಾಜಿ ಸೈನಿಕನೋರ್ವ ತನ್ನ ಸಾವಿನ ನಂತರ ಯಾರು ದುಃಖಿಸುತ್ತಾರೆ ಮತ್ತು ಎಷ್ಟು ಪ್ರೀತಿ ಸಿಗುತ್ತದೆ ಎಂದು ತಿಳಿಯಲು ಶವಪೆಟ್ಟಿಗೆ ಮೇಲೆ ಮಲಗಿ ಸ್ಮಶಾನಕ್ಕೆ ಬಂದ ವಿಚಿತ್ರ ಘಟನೆ ನಡೆದಿದೆ. ಗಯಾ ಜಿಲ್ಲೆಯ ಗುರಾರು ಬ್ಲಾಕ್‌ನ ಕೊಂಚಿ ಗ್ರಾಮದಲ್ಲಿ ಘಟನೆ ನಡೆದಿದೆ. ವಾಯುಪಡೆಯ ಮಾಜಿ ಸೈನಿಕ ಮೋಹನ್ ಲಾಲ್(74), ಜೀವಂತವಾಗಿರುವಾಗ ತನ್ನದೇ ಅಣಕು ಅಂತ್ಯಕ್ರಿಯೆ ಏರ್ಪಡಿಸಿ ಎಲ್ಲರನ್ನೂ ಆಘಾತಗೊಳಿಸಿದರು. ಈ ಕುರಿತ ವೀಡಿಯೊ ವೈರಲ್ ಆಗಿದೆ. ಅಲಂಕರಿಸಿದ ಶವಪೆಟ್ಟಿಗೆಯಲ್ಲಿ ತನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವಂತೆ ಮೋಹನ್ […]





