COMMUNITY NEWS
DAKSHINA KANNADA
LATEST NEWS
STATE
UDUPI
ಕ್ಯಾನ್ಸರ್ ಗೆದ್ದು ನಿರ್ಗತಿಕರ ಸೇವೆ ಮಾಡುವ ಕೋರಿನ್ ರಸ್ಕಿನಾ ಅವರು ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಗೆ ಆಯ್ಕೆ
ಮಂಗಳೂರು: ಕ್ಯಾನ್ಸರ್ ಗೆದ್ದು ನಿರಾಶ್ರಿತರು, ನಿರ್ಗತಿಕರ ಸೇವೆಯನ್ನು ಮಾಡುತ್ತಿರುವ ಕೋರಿನ್ ಆಂಟೊನಿಯಟ್ ರಸ್ಕಿನಾ ಅವರು ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಂಗಳೂರಿನ ಕುಲಶೇಖರದ ವೈಟ್ ಡೌಸ್ ಸಂಸ್ಥೆಯ ಸ್ಥಾಪರಾಗಿದ್ದು, ಕ್ಯಾನ್ಸರ್ ಕಾಯಿಲೆ ಗೆದ್ದು ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ದಿಟ್ಟ ಮಹಿಳೆ. ತನ್ನ ನೋವನ್ನು ಮರೆತು ತಾನು ಪ್ರೀತಿಸಿದ ನಿರಾಶ್ರಿತರ ಸೇವೆಗಾಗಿ ಸಾವನ್ನೂ ಜಯಿಸಿ ಬಂದವರಾಗಿದ್ದಾರೆ.ಕಳೆದ ೩೧ ವರ್ಷಗಳಿಂದ ಬೀದಿ ಬದಿಯಲ್ಲಿರುವ ನಿರಾಶ್ರಿತರು, ನಿರ್ಗತಿಕರ, ಮಾನಸಿಕ ಅಸ್ವಸ್ಥರ ಬಾಳಿಗೆ ಬೆಳಕಾಗುತ್ತಿದ್ದಾರೆ.ವಿದ್ಯಾರ್ಥಿ ಜೀವನದಲ್ಲೇ ಆಸ್ಪತ್ರೆಗಳಿಗೆ ಭೇಟಿ ನೀಡಿ […]


