ಸತ್ಯ, ನೀತಿಯ ಜೀವನವೇ ಇತರರಿಗೆ ದಾರಿ ದೀಪವಾಗಲಿ: ವಂ| ರಾಜೇಶ್ ಮೆಲ್ವಿನ್ ರೊಸಾರಿಯೋ; ಅಶೋಕನಗರ ಚರ್ಚ್ ನಲ್ಲಿ ವಾರ್ಷಿಕ ಹಬ್ಬ ಆಚರಣೆ
ಅಶೋಕನಗರ, ಆಗಸ್ಟ್ 3: ಕ್ರಿಸ್ತರ ಶುಭವಾರ್ತೆಯನ್ನು ಪ್ರಸಾರ ಮಾಡಲು ಅವರ ಮೇಲೆ ವಿಶ್ವಾಸವಿರಬೇಕು. ಕ್ರಿಸ್ತರ ಮೂಲಕ ಸಕಲ ವಿಘ್ನಗಳಿಂದ ಪಾರಾಗಲು ಸಾಧ್ಯ ಎಂಬುವುದನ್ನು ಅರಿತುಕೊಳ್ಳಬೇಕು. ಪ್ರತೀಯೊಬ್ಬರೂ ಈ ಜತ್ತಿನಲ್ಲಿ ಪಯಣಿಗರಾಗಿದ್ದಾರೆ. ಸತ್ಯ, ನ್ಯಾಯ, ನೀತಿಯ ಮಾರ್ಗದಲ್ಲಿ ನಡೆಯುವುದು ಅಗತ್ಯವಾಗಿದ್ದು, ನಮ್ಮ ಪ್ರಾಮಾಣಿಕ ಜೀವನದ ಮೂಲಕ ಇತರರಿಗೂ ಮಾರ್ಗದರ್ಶಿಯಾಗಬೇಕು ಎಂದು ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ವಂ| ರಾಜೇಶ್ ಮೆಲ್ವಿನ್ ರೊಸಾರಿಯೋ ಹೇಳಿದರು.ಮಂಗಳೂರಿನ ಅಶೋಕನಗರದ ಸಂತ ಡೊಮಿನಿಕ್ ಚರ್ಚ್‌ನಲ್ಲಿ ರವಿವಾರ ವಾರ್ಷಿಕ ಮಹೋತ್ಸವದ ಬಲಿಪೂಜೆಯಲ್ಲಿ ಅವರು ಪ್ರವಚನ ನೀಡಿದರು.ಇಂದಿನ […]