Tag: canaratvnews

DAKSHINA KANNADA HOME LATEST NEWS

ಕಬಕ : ರಸ್ತೆ ವಿವಾದ ಇತ್ಯರ್ಥಪಡಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಕಬಕ ಗ್ರಾಮದ ವಿದ್ಯಾಪುರ 9 ನೇ ಅಡ್ಡ ರಸ್ತೆಯಲ್ಲಿ ಸ್ಥಳೀಯ ಮನೆಗಳ ಸಂಪರ್ಕದ ರಸ್ತೆ ವಿವಾದ ಇತ್ಯರ್ಥವಾಗಿದೆ. ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಸೌಹಾರ್ಧಸಭೆಯಲ್ಲಿ ವಿವಾದವನ್ನು ಇತ್ಯರ್ಥಪಡಿಸಲಾಗಿದೆ. ಈ ರಸ್ತೆಯ ಪಕ್ಕದಲ್ಲಿ 6 ಮನೆಗಳಿದ್ದು ಈ ಮನೆಗಳಿಗೆ ತೆರಳಲು ರಸ್ತೆಯೇ ಇರಲಿಲ್ಲ. ಅಲ್ಲಿಗೆ ತೆರಳುವ ರಸ್ತೆಯ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ರಸ್ತೆ ನಿರ್ಮಾಣಕ್ಕೆ ಅಡಚಣೆಯಾಗಿತ್ತು. ರಸ್ತೆಗಾಗಿ ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಹೋರಾಟವನ್ನೇ ಮಾಡಿದ್ದರು. ಕೆಲದಿನಗಳ ಹಿಂದೆ ಶಾಸಕರ ನೇತೃತ್ವದಲ್ಲಿ ಮಾತುಕತೆ ನಡೆದಿದ್ದು […]

DAKSHINA KANNADA HOME LATEST NEWS STATE

ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ರೈಲ್ವೇ ಮಾರ್ಗದ ವಿದ್ಯುದೀಕರಣ ಯಶಸ್ವಿ

ಮಂಗಳೂರು: ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ವಿಭಾಗದ 55ಕಿ.ಮೀ. ಮಾರ್ಗದ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಈ ಭಾಗದ ಜನರ ದೀರ್ಘಕಾಲದ ರೈಲ್ವೆ ಮೂಲಸೌಕರ್ಯದ ಬೇಡಿಕೆ ಈಡೇರಿಕೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಆಗಿದೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ. ಘಾಟ್ ಮಾರ್ಗದ ವಿದ್ಯುದ್ದೀಕರಣ ಯೋಜನೆಯು ನಮ್ಮ ಭಾಗದ ರೈಲ್ವೆ ಮೂಲಸೌಕರ್ಯಗಳ ಪ್ರಗತಿಗೆ ದೊಡ್ಡ ಮಟ್ಟದ ವೇಗ ನೀಡಲಿದ್ದು, ಕರಾವಳಿಗೆ ಸರಕು ಸಾಗಾಣೆ, ಬಂದರು ಕಾರ್ಯಾಚರಣೆ, ಸುಗಮ ರೈಲು ಸಂಚಾರ ಹಾಗೂ ವಾಣಿಜ್ಯ ಚಟುವಟಿಕೆಗಳ ಉತ್ತೇಜನಕ್ಕೆ ಹೆಚ್ಚಿನ ಅನುಕೂಲ […]

DAKSHINA KANNADA HOME

ಬಿಕರ್ನಕಟ್ಟೆಯಲ್ಲಿ ಪರಿಸರ ಸ್ನೇಹಿ-ಸೃಜನಶೀಲ ಕ್ರಿಸ್‌ಮಸ್ ನಕ್ಷತ್ರ ಸ್ಪರ್ಧೆ

ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರವು ಈ ಬಾರಿ ಆಯೋಜಿಸಿದ್ದ ಕ್ರಿಸ್‌ಮಸ್ ನಕ್ಷತ್ರ ಸ್ಪರ್ಧೆಯು ಕೇವಲ ಒಂದು ಕಲಾ ಪ್ರದರ್ಶನವಾಗಿರದೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿಯ ಮಹೋತ್ಸವವಾಗಿ ಹೊರಹೊಮ್ಮಿತು. ನಗರದ ವಿವಿಧ ಮೂಲೆಗಳಿಂದ ಬಂದ 20ಕ್ಕೂ ಹೆಚ್ಚು ಸ್ಪರ್ಧಾಳುಗಳು ಈ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ಪ್ರತಿಯೊಂದು ನಕ್ಷತ್ರವೂ ತನ್ನದೇ ಆದ ವಿಶಿಷ್ಟ ಸಂದೇಶವನ್ನು ಸಾರಿತು. ಈ ಸ್ಪರ್ಧೆಯ ಅತ್ಯಂತ ಗಮನಾರ್ಹ ಅಂಶವೆಂದರೆ ಸುಸ್ಥಿರತೆಗೆ ನೀಡಿದ ಆದ್ಯತೆ; ಎಲ್ಲಾ ನಕ್ಷತ್ರಗಳನ್ನು ತೆಂಗಿನ ಚಿಪ್ಪು, ಒಣ ಹುಲ್ಲು, […]

HOME LATEST NEWS STATE

LLR ಗೆ ಅರ್ಜಿ ಸಲ್ಲಿಸಿದ 7 ದಿನಗಳೊಳಗೆ ಕಲಿಕಾ ಪರೀಕ್ಷೆ..!

ಬೆಂಗಳೂರು : ವಾಹನ ಚಾಲನಾ ಕಲಿಕಾ ಪರವಾನಗಿ(ಎಲ್‍ಎಲ್‍ಆರ್) ಪಡೆಯಲು ಅರ್ಜಿ ಸಲ್ಲಿಸಿದವರು ಏಳು ದಿನಗಳ ಒಳಗೆ ಆನ್‍ಲೈನ್ ಮೂಲಕ ಕಲಿಕಾ ಪರೀಕ್ಷೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳುವ ನಿಯಮ ಜ.1 ರಿಂದ ಜಾರಿಗೆ ಬರಲಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ.ಯೋಗೀಶ್ ತಿಳಿಸಿದ್ದಾರೆ. ವಾಹನ ಚಾಲನೆ ಕಲಿಯಲು ಅರ್ಜಿ ಹಾಕಿದವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿದ್ದಾರೆಯೇ ಎಂಬುದು ಈ ಪರೀಕ್ಷೆಯಲ್ಲಿ ಪತ್ತೆ ಹಚ್ಚಲಾಗುತ್ತದೆ. ಯಾವುದೇ ಸಮಸ್ಯೆ ಇಲ್ಲದವರಿಗೆ ಚಾಲನಾ ಕಲಿಕೆಗೆ ಪರವಾನಗಿ ಸಿಗಲಿದೆ. ಎನ್‍ಐಸಿ ಅಭಿವೃದ್ಧಿ ಪಡಿಸಿರುವ […]

DAKSHINA KANNADA HOME LATEST NEWS

ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ: ಪೋಕ್ಸೋ ಕಾಯ್ದೆಯಡಿ ಓರ್ವನ ಬಂಧನ

ಸುರತ್ಕಲ್: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೊಕ್ಸೊ ಕಾಯ್ದೆಯಡಿ ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಚೊಕ್ಕಬೆಟ್ಟು ನಿವಾಸಿ ಅಬ್ದುಲ್ ಇಸ್ಮಾಯೀಲ್ ಬಂಧಿತ ಆರೋಪಿ. ಚೊಕ್ಕಬೆಟ್ಟು ಪೇಟೆಯಲ್ಲಿ ಹನಿ ಫ್ಯಾಶನ್ ಮತ್ತು ಜನರಲ್ ಸ್ಟೋರ್ ನಡೆಸಿಕೊಂಡಿರುವ ಆರೋಪಿ ಇಸ್ಮಾಯೀಲ್ ತನ್ನ ಅಂಗಡಿಗೆ ಚಾಕಲೇಟು ಖರೀದಿಸಲೆಂದು ಬಂದಿದ್ದ 11 ವರ್ಷದ ಬಾಲಕನ ಕೈ-ಕಾಲನ್ನು ಕಟ್ಟಿ ಅಂಗಡಿಯ ಒಂದು ಕೊಠಡಿಯಲ್ಲಿ ಕೂಡಿಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕನ ತಾಯಿ ಸುರತ್ಕಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. […]

DAKSHINA KANNADA HOME LATEST NEWS

ಮಂಗಳೂರು: ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ನಾಲ್ವರ ಬಂಧನ

ಮಂಗಳೂರು: ನಗರದ ಸಿಸಿಬಿ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, 50 ಲಕ್ಷ ರೂ. ಮೌಲ್ಯದ ಸುಮಾರು 517.76 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೈಂದೂರು ನಾವುಂದದ ಮುಹಮ್ಮದ್ ಶಿಯಾಬ್ ಯಾನೆ ಶಿಯಾಬ್, ಉಳ್ಳಾಲ ನರಿಂಗಾನದ ಮುಹಮ್ಮದ್ ನೌಷದ್ ಯಾನೆ ನೌಷದ್ , ಮಂಗಳೂರು ಕಸಬಾ ಬೆಂಗ್ರೆಯ ಇಮ್ರಾನ್ ಯಾನೆ ಇಂಬ, ಮತ್ತು ಬಂಟ್ವಾಳ ಬ್ರಹ್ಮರ ಕೊಟ್ಲುವಿನ ನಿಸಾರ್ ಅಹಮ್ಮದ್ ಯಾನೆ ನಿಸಾರ್ […]

HOME LATEST NEWS NATIONAL

ಆಫೀಸ್‌ ಕೆಲ್ಸ ಮುಗಿದ ಮೇಲೆ ಫೋನ್‌ ಕಾಲ್-ಮೇಲ್ ಮಾಡೋ ಹಾಗಿಲ್ಲ: ಹೊಸ ಮಸೂದೆ

ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಮಸೂದೆಗಳನ್ನು ಜಾರಿ ಮಾಡುವ ಮೂಲಕ  ಕಾರ್ಮಿಕರಿಗೆ ಶುಭ ಸುದ್ದಿ ನೀಡಿತ್ತು. ಇದೀಗ ಇಂದು ಲೋಕಸಭೆಯಲ್ಲಿ ಮತ್ತೊಂದು ಮಹತ್ವದ ಮಸೂದೆ ಪ್ರಸ್ತಾಪವಾಗಿದ್ದು, ಕಚೇರಿ ಸಮಯ ಮುಗಿದ ನಂತರ ಫೋನ್ ಕರೆಗಳು, ಇಮೇಲ್‌ಗಳು ಮತ್ತು ವರ್ಕ್ ಮೆಸೇಜ್‌ಗಳಿಂದ ಮುಕ್ತಿ ನೀಡುವ ಉದ್ದೇಶದಿಂದ ರೈಟ್ ಟು ಡಿಸ್‌ಕನೆಕ್ಟ್ ಬಿಲ್ 2025 (Right to Disconnect Bill2025) ಅನ್ನು ಪರಿಚಯಿಸಲಾಗಿದೆ. ಈ ಬಿಲ್ ಉದ್ಯೋಗಿಗಳ ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಸಮಯವನ್ನು ರಕ್ಷಿಸುವ ಮಹತ್ವದ […]

COMMUNITY NEWS DAKSHINA KANNADA LATEST NEWS

ಐವನ್ ಡಿಸೋಜ ಅಧ್ಯಕ್ಷತೆಯಲ್ಲಿ ಸರ್ವಧರ್ಮ ಕ್ರಿಸ್ಮಸ್‌ ಆಚರಣೆಯ ಪೂರ್ವಭಾವಿ ಸಭೆ

ಮಂಗಳೂರು: ಸರ್ವಧರ್ಮಗಳ ಭಾವೈಕ್ಯದ ಸಂಗಮವಾದ ಕ್ರಿಸ್ಮಸ್ ಆಚರಣೆ ಬಗ್ಗೆ ಪೂರ್ವಬಾವಿ ಸಭೆಯು ಐವನ್ ಡಿಸೋಜ ಅಧ್ಯಕ್ಷತೆಯಲ್ಲಿ ಇತ್ತಿಚೆಗೆ ನಡೆಯಿತು. ಕಳೆದ 10 ವರ್ಷಗಳಿಂದ ಕ್ರಿಸ್ಮಸ್, ದೀಪಾವಳಿ, ರಮಝಾನ್ ಹಬ್ಬಗಳನ್ನು ಅಚರಿಸುತ್ತಾ ಬರಲಾಗಿದೆ. ಸಮಾಜದ ಎಲ್ಲಾ ವರ್ಗಗಳ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಬಾರಿ ಕ್ರಿಸ್ಮಸ್ ಹಬ್ಬವು ಡಿ.22ರಂದು ಅಪರಾಹ್ನ 3ರಿಂದ 10ರವರೆಗೆ ಜೆಪ್ಪುಸೈಂಟ್ ಅಂತೋನಿ ಆಶ್ರಮ ತೆರೆದ ಮೈದಾನದಲ್ಲಿ ನಡೆಯಲಿದೆ. ಈ ಹಬ್ಬದ ಪ್ರಯುಕ್ತ ಕ್ಯಾರಲ್ ಹಾಡುಗಳ ಸ್ಪರ್ಧೆ ಮತ್ತು ಕ್ರಿಸ್ಮಸ್ ಗೆ ಸಂಬಂಧಪಟ್ಟ ವಿವಿಧ ವಿನೋದಾವಳಿಗಳು […]

DAKSHINA KANNADA HOME LATEST NEWS

ರಾತ್ರಿ ವೇಳೆ ತಡ ಮಾಡಿ ಊಟ ಮಾಡುವುದು ಎಷ್ಟು ಅಪಾಯಕಾರಿ ಗೊತ್ತಾ..!

ಆರೋಗ್ಯಕರವಾಗಿರಲು ಆಹಾರವನ್ನುಸೇವನೆ ಮಾಡುವುದು ಎಷ್ಟು ಮುಖ್ಯವೋ, ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡುವುದು ಅಷ್ಟೇ ಮುಖ್ಯ. ಬಹುತೇಕರು ರಾತ್ರಿ ತಡವಾಗಿ ಆಹಾರ ಸೇವನೆ ಮಾಡುತ್ತಾರೆ, ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಆರೋಗ್ಯವಂತರಾಗಿರಲು ಈ ನಿಗದಿತ ಸಮಯದೊಳಗೆ ಊಟ ಮಾಡಿ ಮುಗಿಸಬೇಕು. ಇತ್ತೀಚಿನ ಸಮಯದಲ್ಲಿ ಪ್ರತಿಯೊಬ್ಬರು  ರಾತ್ರಿ 9 ಗಂಟೆಯ ನಂತರವೇ ಊಟ ಮಾಡುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ, ಆರೋಗ್ಯವನ್ನು ಕಾಪಾಡಿಕೊಳ್ಳಲು ಸಂಜೆ 6 ರಿಂದ ರಾತ್ರಿ 8 ಗಂಟೆಯ ಒಳಗೆ ರಾತ್ರಿಯ ಊಟವನ್ನು […]

DAKSHINA KANNADA HOME LATEST NEWS

ಮಂಗಳೂರು ಮೂಲದ ರೌಡಿ ಶೀಟರ್‌ಗಳಿಂದ ಜೈಲು ಸಿಬ್ಬಂದಿ ಮೇಲೆ ಹಲ್ಲೆ

ಕಾರವಾರ:  ಮಂಗಳೂರು ಮೂಲದ ವಿಚಾರಣಾಧೀನ ರೌಡಿ ಶೀಟರ್‌ಗಳಿಬ್ಬರು ಕಾರವಾರ ಕಾರಾಗೃಹದಲ್ಲಿ ಕಾರಾಗೃಹ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಮಂಗಳೂರು ಮೂಲದ ರೌಡಿ ಶೀಟರ್‌ಗಳಾದ ಮೊಹ್ಮದ್ ಅಬ್ದುಲ್ ಫಯಾನ್ ಹಾಗೂ ಕೌಶಿಕ ನಿಹಾಲ್ ಹಲ್ಲೆ ನಡೆಸಿದ ಆರೋಪಿಗಳು. ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇವರನ್ನು, ಮಂಗಳೂರು ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾದ ಕಾರಣ ಕಾರವಾರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಮಾದಕ ವಸ್ತು ಒದಗಿಸುವಂತೆ ಗಲಾಟೆ ಮಾಡಿದ ಕೈದಿಗಳು ಪರಸ್ಪರ […]