ಮಂಗಳೂರು ಧರ್ಮಕ್ಷೇತ್ರದ ಭವ್ಯ ಪರಮ ಪವಿತ್ರ ಪ್ರಸಾದದ ಮೆರವಣಿಗೆ: ಮಕ್ಕಳ ವರ್ಷ ಘೋಷಣೆ
ಮಂಗಳೂರು: ಯೇಸು ಕ್ರಿಸ್ತರ ದೈವದರ್ಶನ ಮಹೋತ್ಸವದ (ಎಪಿಫನಿ) ಪ್ರಯುಕ್ತ ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಭಾನುವಾರ ವಾರ್ಷಿಕ ಭವ್ಯ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ಶ್ರದ್ಧಾ ಭಕ್ತಿಯಿಂದ ನಡೆಯಿತು. ಮಿಲಾಗ್ರಿಸ್ ಚರ್ಚ್‌ನಿಂದ ಆರಂಭಗೊಂಡು ರೊಸಾರಿಯೊ ಕೆಥೆಡ್ರಲ್ ವರೆಗೆ ಮೆರವಣಿಗೆಯು ನಡೆಯಿತು. ಕಾರ್ಯಕ್ರಮವು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಅಧ್ಯಕ್ಷತೆಯಲ್ಲಿ ಮಿಲಾಗ್ರಿಸ್ ಚರ್ಚ್‌ನಲ್ಲಿ ನಡೆದ ಸಾಮೂಹಿಕ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ಈ ಹಬ್ಬವು ಜ್ಯೋತಿಷಿಗಳ ಭೇಟಿಯ ಮೂಲಕ ಯೇಸು ಕ್ರಿಸ್ತರು […]











