ಅಂಬುಲೆನ್ಸ್ನಲ್ಲೇ ಹೆರಿಗೆಯಾದ ಬೆಳ್ತಂಗಡಿಯ ಬಾಣಂತಿ: ತಾಯಿ-ಮಗು ಸುರಕ್ಷಿತ
ಬೆಳ್ತಂಗಡಿ: ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ಕರೆದೊಯ್ಯುವ ವೇಳೆ ಮಹಿಳೆಯೊಬ್ಬರಿಗೆ ಹೆರಿಗೆ ನೋವು ತೀವ್ರಗೊಂಡಿದ್ದು, ಶುಶ್ರೂಷಕಿಯರಿಬ್ಬರು ಸೇರಿ ಆಕೆಗೆ ದಾರಿ ಮಧ್ಯೆಯೇ ಆ ವಾಹನದಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಬಾಣಂತಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸುದೆಮುಗೇರುವಿನ ಲೀಲಾವತಿ ಅವರು ಬೆಳ್ತಂಗಡಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಸೋಮವಾರ ಮುಂಜಾನೆ ಹೆರಿಗೆಗೆಂದು ಬಂದಿದ್ದರು. ಅವರಿಗೆ ಇದು ಎರಡನೇ ಹೆರಿಗೆಯಾಗಿದ್ದು, ಮೊದಲ ಹೆರಿಗೆಯಲ್ಲಿ ಸಿಜೇರಿಯನ್ ಮೂಲಕ ಮಗುವನ್ನು ಹೊರತೆಗೆಯಲಾಗಿತ್ತು. ಹಾಗಾಗಿ ಮಂಗಳೂರಿನ […]










