Tag: accident

DAKSHINA KANNADA HOME LATEST NEWS

ವಿಟ್ಲ: ರಸ್ತೆ ದಾಟುತ್ತಿದ್ದಾಗ ಮಹಿಳೆಗೆ ಬೈಕ್‌ ಢಿಕ್ಕಿಯಾಗಿ ಸಾವು- ಸವಾರ ಗಂಭೀರ

ವಿಟ್ಲ: ಪಾದಾಚಾರಿ ಮಹಿಳೆಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಟ್ಲ ಬಸ್‌ಸ್ಟ್ಯಾಂಡ್ ಸಮೀಪ ರವಿವಾರ ಬೆಳಿಗ್ಗೆ ನಡೆದಿದೆ. ಮೃತ ಮಹಿಳೆಯನ್ನು ವಿಟ್ಲ ಮುಡ್ನೂರು ಗ್ರಾಮದ ಮರುವಾಳ ನಿವಾಸಿ ಸೀತಾ ಶೆಟ್ಟಿ (68) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. .ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  

DAKSHINA KANNADA HOME LATEST NEWS

ಮಂಗಳೂರು: ನಂತೂರಿನಲ್ಲಿ ಯುವತಿ ಹೊಟ್ಟೆ ಮೇಲೆ ಹರಿದ ಸಿಟಿ ಬಸ್ಸು

ಮಂಗಳೂರು: ಸಿಟಿ ಬಸ್‌ಗಳ ಅವಸರದ ವೇಗಕ್ಕೆ ಮತ್ತೊಂದು ಜೀವವೊಂದು ನಿನ್ನೆ ಬಲಿಯಾಗಿದೆ. ನಂತೂರು ಬಸ್ ಸ್ಟಾಪ್ ಬಳಿ ಸ್ಕೂಟರಿಗೆ ಹಿಂದಿನಿಂದ ಗುದ್ದಿದ ಪರಿಣಾಮ ಸಹ ಸವಾರೆಯೊಬ್ಬರ ಹೊಟ್ಟೆಯ ಮೇಲೆ ಬಸ್ಸು ಚಲಿಸಿದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ನಗರದ ಬಳ್ಳಾಲ್‌ಭಾಗ್‌ ನಿವಾಸಿ ದೀಪ್ತಿ (26) ಎಂದು ಗುರುತಿಸಲಾಗಿದೆ. ಘಟನೆ ವಿವರ ನಿನ್ನೆ ರಾತ್ರಿ ಸಮಯ ಸುಮಾರು 7-45 ಗಂಟೆಗೆ ನಂತೂರು ಬಸ್ಟ್ಯಾಂಡ್ ಬಳಿ ಬಲ್ಲಾಳ್ ಭಾಗ್ ಕಡೆಯಿಂದ ವಾಮಂಜೂರು ಕಡೆಗೆ KA- 19HT-8178 ನಂಬರ್‌ನ ಸ್ಕೂಟರ್‌ನಲ್ಲಿ […]

DAKSHINA KANNADA HOME LATEST NEWS

ಕಾರಿನ ಟೈಯರ್ ಬ್ಲಾಸ್ಟ್: ಅದೃಷ್ಟವಶಾತ್ ಪಾರಾದ ಬೋಂದೆಲ್ ಚರ್ಚ್ ಪಾದ್ರಿ

ಮಂಗಳೂರು: ಕಾರಿನ ಟೈಯರ್ ಬ್ಲಾಸ್ಟ್ ಆದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಎಸೆಯಲ್ಪಟ್ಟ ಮನೆಯೊಂದಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಕಾವೂರು ಬಳಿಯ ಮರಕಡದಲ್ಲಿ ಜನವರಿ 1 ರಂದು ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಬೋಂದೆಲ್ ಚರ್ಚ್ ಪಾದ್ರಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಬೋಂದೆಲ್ ಸೈಂಟ್ ಲಾರೆನ್ಸ್ ಚರ್ಚ್ ನಲ್ಲಿ ಪಾದ್ರಿಯಾಗಿರುವ ಫಾದರ್ ಆಂಡ್ರ್ಯೂ ಲಿಯೋ ಡಿಸೋಜ ಅಪಾಯದಿಂದ ಪಾರಾದವರು.‌ ಜನವರಿ 1ರಂದು ಕಿನ್ನಿಗೋಳಿಯ ನೀರುಡೆಯಲ್ಲಿರುವ ತಮ್ಮ ಮನೆಯಲ್ಲಿ ಹೊಸ ವರ್ಷದ ಪಾರ್ಟಿ ಮುಗಿಸಿ ಮಧ್ಯಾಹ್ನ […]

DAKSHINA KANNADA HOME LATEST NEWS

ಒಂದೂವರೆ ವರ್ಷದ ಮಗುವಿನ ಕೈ ಹಾಗೂ ಹೊಟ್ಟೆ ಮೇಲೆ ಚಲಿಸಿದ ಕಾರು….!

ಮಂಗಳೂರು: ಒಂದೂವರೆ ವರ್ಷದ ಮಗುವಿನ ಕೈ ಹಾಗೂ ಹೊಟ್ಟೆಯ ಮೇಲೆ ಕಾರೊಂದು ಚಲಿಸಿದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಗರದ ಬಿಜೈ ಕಾಪಿಕಾಡ್‌ನಲ್ಲಿ ನಡೆದಿದೆ. ಘಟನೆ ವಿವರ ನಿಂಗಪ್ಪ ಎಂಬವರು ನಗರದ ಬಿಜೈ ಕಾಪಿಕಾಡ್‌ನ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದು,  ಏ.9 ರಂದು ಅಪಾರ್ಟ್ ಮೆಂಟಿನ ಮುಖ್ಯಗೇಟಿನ ಬಲ ಬದಿಯಲ್ಲಿ ಕಸ ಹೆಕ್ಕುವ ಕೆಲಸ ಮಾಡುತ್ತಿದ್ದರು. ಈ ವೇಳೆ ಜೊತೆಯಲ್ಲಿ ತನ್ನ (1 ½) ವರ್ಷದ ಮಗು ಬೇಬಿ ಪ್ರಜ್ವಲ್ ಹರಿಜನ ಎಂಬವನು ಆಚೆ […]

DAKSHINA KANNADA HOME LATEST NEWS

ಸುಳ್ಯ: ನಿಯಂತ್ರಣ ತಪ್ಪಿ ಮನೆ ಮಹಡಿ ಮೇಲೆ ಬಿದ್ದ ಕಾರು

ಸುಳ್ಯ: ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಮನೆ ಮಹಡಿಯ ಮೇಲೆ ಬಿದ್ದು ಮನೆ ಮತ್ತು ಕಾರು ಜಖಂಗೊಂಡ ಘಟನೆ ಭಾನುವಾರ ಸುಳ್ಯದಲ್ಲಿ ನಡೆದಿದೆ. ನಿತ್ಯಾನಂದ ಮುಂಡೋಡಿ ಎಂಬುವವರ ಕಾರನ್ನು ಅವರ ಸೊಸೆ ಚಲಾಯಿಸಿಕೊಂಡು ಗುತ್ತಿಗಾರು ಕಡೆಗೆ ಹೊರಟಿದ್ದರು. ಚಿರೆಕಲ್‍ನ ಮನೆಯಿಂದ ಮುಖ್ಯರಸ್ತೆಗೆ ಬಂದು ಸ್ವಲ್ಪ ಮುಂದಕ್ಕೆ ಹೋದಾಗ ಕಾರಿಗೆ ಬ್ರೇಕ್ ಹಾಕಿದಾಗ ಬ್ರೇಕ್‍ನ ಅಡಿಗೆ ನೀರಿನ ಬಾಟಲ್ ಸಿಲುಕಿ ಬ್ರೇಕ್ ಸಿಗದ ಕಾರಣ ನಿಯಂತ್ರಣ ತಪ್ಪಿ ರಸ್ತೆಯ ಕೆಳಭಾಗದಲ್ಲಿದ್ದ ಸೀತಮ್ಮ ಚಿರೆಕಲ್ಲು ಎಂಬವರ ಮನೆಯ ಮೇಲೆ ಬಿದ್ದಿದೆ. […]